- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಾಂಗ್ರೆಸ್ ಚಡ್ಡಿ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಕಿಡಿ

ಕಾಂಗ್ರೆಸ್ ಚಡ್ಡಿ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಕಿಡಿ

ನಿಡಗುಂದಿ: ಕಾಂಗ್ರೆಸ್ ‌ನಾಯಕರಿಗೆ ಹಾಗೂ ಸಿದ್ದರಾಮಯ್ಯಗೆ (siddaramaiah) ಚೆಡ್ಡಿ ಲೂಸ್ ಆಗಿದೆ. ಅವರು ಚೆಡ್ಡಿ ಹರಕರಾಗಿದ್ದಾರೆ, ಹಾಗಾಗಿ‌ ಬೇರೆಯವರ ಚೆಡ್ಡಿ (chaddi burning campaign) ಸುಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (pralhad joshi) ಟಾಂಗ್ ಕೊಟ್ಟರು.

ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ಚಡ್ಡಿ ಅಭಿಯಾನದ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಷಿ, ಅವರು ಚೆಡ್ಡಿ ಹರಕರಾಗಿದ್ದಾರೆ, ಹಾಗಾಗಿ‌ ಬೇರೆಯವರ ಚೆಡ್ಡಿ ಸುಡಲು ಹೊರಟಿದ್ದಾರೆ, ಉತ್ತರಪ್ರದೇಶದಲ್ಲಿ ಅವರ ಚೆಡ್ಡಿ ಕಳಚಿ‌ ಕಳುಹಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನ ಚೆಡ್ಡಿ ಮತ್ತು ಪಂಚೆ ಕಳಚಿ ಕಳುಹಿಸಿದ್ದಾರೆ. ಅವರ ಚೆಡ್ಡಿಯನ್ನು ಜನ ಸುಟ್ಟಿರಬೇಕು. ಅದಕ್ಕಾಗಿ ನಮ್ಮ ವಿರುದ್ದ ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ನೀವು ಓರ್ವ ಸಿಎಂ ಆಗಿದ್ದವರು ಜನತೆ 30 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ‌ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಬದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಋಣಿಯಾಗಿರಬೇಕು, ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಪಾರಾಗಿ ವಿಧಾನಸೌಧದಲ್ಲಿ ಇದ್ದೀರಾ, ಐದು ವರ್ಷ ಆಡಳಿದಲ್ಲಿದ್ದವರು ನೀವು ಆದರೆ ಜನ ನಿಮ್ಮ ಚೆಡ್ಡಿ (chaddi burning campaign) ಕಸಿದುಕೊಂಡಿದ್ದಾರೆ, ಮೊದಲು ನಿಮ್ಮ ಚೆಡ್ಡಿ ಗಟ್ಟಿ ಮಾಡಿಕೊಳ್ಳೋ ಪ್ರಯತ್ನ ಮಾಡಿ, ಬಳಿಕ ಆರ್ ಎಸ್ ಎಸ್‌ ಚೆಡ್ಡಿ ಸುಡೋ ಕೆಲಸ ಮಾಡುವಿರಂತೆ ಎಂದು ಸಲಹೆ ನೀಡಿದರು.

ನಿಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಅವರ ತಂದೆ ಅಜ್ಜ ಆರ್ ಎಸ್ ಎಸ್ ನ್ನು ಒಳಗಿನಿಂದ ಸುಡಲು ಹೋಗಿ ರಾಜಕೀಯವಾಗಿ ಏನಾಗಿದೆ‌ ನೋಡಿ. ನೀವು ನೇರವಾಗಿ ಆರ್ ಎಸ್ ಎಸ್ ವಿರುದ್ದ ಮಾಡುತ್ತಿದ್ದೀರಾ, ಇಡೀ ದೇಶದಲ್ಲಿ ಜನ‌ ನಿಮ್ಮ ಚೆಡ್ಡಿ ಕಸಿದುಕೊಂಡಿದ್ದಾರೆ, ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ನಿಮ್ಮ ಚೆಡ್ಡಿ‌ ಕಸಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾತು ಮುಂದುವರೆಸಿದ ಜೋಷಿ, ಛತ್ತೀಸಗಢದಲ್ಲೂ ಲೂಸ್ ಆಗಿದೆ, ಮದ್ಯಪ್ರದೇಶಲ್ಲೂ ನಿಮ್ಮ ಚೆಡ್ಡಿ ಹೋಗಿದೆ, ಎಲ್ಲೆಡೆ ಚೆಡ್ಡಿ ಕಳೆದುಕೊಂಡಿದ್ದೀರಿ, ನಿಮ್ಮ ಚೆಡ್ಡಿ ಹೋಗಿದ್ದಕ್ಕೆ ನೀವು ಆರ್ ಎಸ್ ಎಸ್ ಚೆಡ್ಡಿ ಸುಡೋಕೆ ಬಂದಿದ್ದೀರಿ, ಮುಂದಿನ ದಿನಗಳಲ್ಲಿ ಅಳಿದುಳಿದ ನಿಮ್ಮ ಚೆಡ್ಡಿಯನ್ನು ಜನರು‌ ಕಸಿದುಕೊಂಡು ಬೆತ್ತಲೆ ಮಾಡುತ್ತಾರೆ, ಇಂಥ ಹುಚ್ಚು ಚಟುಚಟಿಕೆ ನಿಲ್ಲಿಸಿ, ತುಷ್ಟಿಕರಣಕ್ಕಾಗಿ ಈ ರೀತಿ ಮಾಡುತ್ತಿದ್ದೀರಿ, ಅದೂ ಅಪರಾಧ‌ ಹಿನ್ನಲೆಯುಳ್ಳವನ‌ ಕೈಯ್ಯಿಂದ ಚೆಡ್ಡಿ ಸುಡಿಸುತ್ತಿದ್ದೀರಿ (chaddi burning campaign), ನಿಮ್ಮ ಚೆಡ್ಡಿ ಗಟ್ಟಿಯಾಗಿರಬೇಕೆಂದರೆ ಇದನ್ನೆಲ್ಲಾ ಬಿಡಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!