- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಆಯ್ಕೆ

ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಆಯ್ಕೆ

ಬಸವನಬಾಗೇವಾಡಿ: ಜಯ ಕರ್ನಾಟಕ (Jaya Karnataka) ಸಂಘಟನೆಯ ತಾಲೂಕು ವಿವಿಧ ಗ್ರಾಮ ಘಟಕ ಹಾಗೂ ವಲಯ ಘಟಕಗಳ (Basavana bagewadi) ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರನ್ನು ಸೇರಿ ಪದಾಧಿಕಾರಿಗಳನ್ನು ಆಯ್ಕೆಮಾಡಿ, ಶಾಲು ಹೊದಿಸಿ ಪ್ರಮಾಣ ಪತ್ರಗಳನ್ನು (Organization) ವಿತರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಬಿ.ಬಿ.ಇಂಗಳಗಿ, ಜಿಲ್ಲಾಧ್ಯಕ್ಷ ಮಹೇಶ ನಾಯಕ, ತಾಲೂಕಾಧ್ಯಕ್ಷ ಶರಣು ಹೂಗಾರ ಅವರು ನೂತನ ಪದಾಧಿಕಾರಿಗಳು, ಕಟ್ಟೋಣ ನಾವು ಹೊಸ ನಾಡೊಂದನ್ನು ಎನ್ನುವ ಶೀರ್ಷಿಕೆಗೆ ಬದ್ದರಾಗಿ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮಗಳಾದ ದಿಂಡವಾರ, ಬ್ಯಾಕೋಡ, ಜೈನಾಪುರ, ಮಣ್ಣೂರ, ಇವಣಗಿ, ಇಂಗಳೇಶ್ವರ ಎಲ್.ಟಿ ನಂ-1, ಹಂಗರಗಿ, ನಗರ ಘಟಕ, ಮನಗೂಳಿ ವಲಯ ಘಟಕ, (Jaya Karnataka) ಹೂವಿನ ಹಿಪ್ಪರಗಿ ವಲಯ ಘಟಕಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ ಶಾಪೇಟೆ, ಜಿಲ್ಲಾ ಉಪಾಧ್ಯಕ್ಷ ಪಿಂಟು ಗಬ್ಬೂರ, ಮುಖಂಡರಾದ ಲಿಂಗರಾಜ ಗೊರಗುಂಡಗಿ ಮಾತನಾಡಿದರು, ಮಾಂತೇಶ ಇಂಗಳೇಶ್ವರ, ರೇವಣಸಿದ್ದ ಮಣ್ಣೂರ, ಅಕ್ಷಯ ಪಾಟೀಲ, ಜಗದೀಶ ಉಳ್ಳಾಗಡ್ಡಿ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!