- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆಕರ್ಷಕ ಕಲ್ಲು ಗುಂಡು, ಜಂಗೀ ಕುಸ್ತಿ ಸ್ಪರ್ಧೆ

ಆಕರ್ಷಕ ಕಲ್ಲು ಗುಂಡು, ಜಂಗೀ ಕುಸ್ತಿ ಸ್ಪರ್ಧೆ

ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮ ದೇವಿ (Ivanagi Varadhani Lakkammadevi) ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದಿಂದ ಜರುಗಿತು.

ಜಾತ್ರಾ ಮಹೋತ್ಸವ ನಿಮಿತ್ತ ಭಾರ ಎತ್ತುವ ಕಸರತ್ತಿನ ಸ್ಪರ್ಧೆ, ಜಂಗೀ ಕುಸ್ತಿ ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಜಿಲ್ಲೆ ಸೇರಿದಂತೆ ವಿವಿಧ ತಾಲೂಕಿನಿಂದ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎರಡು ನೂರು ಕೆಜಿಯ ತೊಕದ ಕಲ್ಲಿನ ಗುಂಡನ್ನು ಎತ್ತುವ ಮೂಲಕ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದ ಚಂದ್ರಶೇಖರ ಯಾಳವಾರ ಪ್ರಥಮ ಸ್ಥಾನ ಪಡೆದರೆ ದೇವರಹಿಪ್ಪರಗಿ ತಾಲೂಕಿನ ಯಾಳವಾರ ಗ್ರಾಮದ ಮಾಳಪ್ಪ ಕೊಂಡಗೂಳಿ ದ್ವಿತೀಯ ಸ್ಥಾನ ಪಡೆದುಕೊಂಡರು ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಶ್ರೀಕಾಂತ ನಾಯಕ ತೃತೀಯ ಸ್ಥಾನ ಪಡೆದುಕೊಂಡರು.

ಸಂಜೆ ಜಂಗೀ ಕುಸ್ತಿ ಏರ್ಪಡಿಸಲಾಗಿತು. ವಿಜಯಪುರ, ಮನಗೂಳಿ, ಬಬಲೇಶ್ವರ ಸೇರಿದಂತೆ ಮಹಾರಾಷ್ಟç ರಾಜ್ಯ ಸೇರಿದಂತೆ ನೂರಾರು ಜನ ಜಂಗೀ ಕುಸ್ತಿ ಪಟ್ಟುಗಳು ಪಾಲ್ಗೋಂಡಿದರು. ಜಂಗೀ ಕುಸ್ತಿ ಹಾಗೂ ಕಸರತ್ತಿನ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಜನರು ಸ್ಪರ್ಧಾಳುಗಳನ್ನು ಚಪ್ಪಾಳೆ ತಟ್ಟಿ ಸಿಳ್ಳಿ ಹಾಕಿ ಹುರುದುಂಬಿಸುತ್ತಿದ್ದರು.

ಜಾತ್ರೆಯ (Ivanagi Varadhani Lakkammadevi)ನಿಮಿತ್ತ ದೇವಸ್ಥಾನದ ಮುಂಭಾಗದಲ್ಲಿ ಅನ್ನ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ಪ್ರಸಾದ ಸವೆದು ದೇವರ ದರ್ಶನ ಪಡೆದು ಧನ್ಯತಾ ಭಾವದಿಂದ ಮೆರೆದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!