- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಂಭ್ರಮದಿ ಜರುಗಿದ ವರದಾನಿ ಲಕ್ಕಮ್ಮದೇವಿ ಜಾತ್ರೆ

ಸಂಭ್ರಮದಿ ಜರುಗಿದ ವರದಾನಿ ಲಕ್ಕಮ್ಮದೇವಿ ಜಾತ್ರೆ

ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ (Ivanagi Varadani Lakkammadevi) ಜಾತ್ರಾ ಮಹೋತ್ಸದ (Jatre) ನಿಮಿತ್ತ ತಾಲೂಕಿನ ಟಕ್ಕಳಕಿ, ಆರೇಶಂಕರ, ಕಾಮನಕೇರಿ, ಬೂದಿಹಾಳ, ರಾಮನಹಟ್ಟಿ, ಇವಣಗಿ ಗ್ರಾಮಗಳಿಂದ ಒಂಬತ್ತು ಪಲ್ಲಕ್ಕಿ ಉತ್ಸವವು ಡೊಳ್ಳು ಸೇರಿ ಸಕಲ ವಾದ್ಯ-ವೈಭವಗಳೊಂದಿಗೆ ಹಾಗೂ ಮಹಿಳೆಯರ ಅರತಿ, ಕಳಸದೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ನಂತರ ದೇವಿಯ ಮೂರ್ತಿ ಇರುವ ಪಲ್ಲಕ್ಕಿ ಗ್ರಾಮದಲ್ಲಿ ಸಂಚಾರಿಸಿ ದೇವಿಯನ್ನು ದೇವಸ್ಥಾನಕ್ಕೆ ಕರೆ ತರಲಾಯಿತು. ಬೆಳಗ್ಗೆ ಲಕ್ಕಮ್ಮ ದೇವಿ (Ivanagi Varadani Lakkammadevi) ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಿಗೆ ಮುತೈದೆಯರು ಉಡಿ ತುಂಬಿ ದೇವಿಯ ಆಶೀರ್ವಾದ ಪಡೆದುಕೊಂಡರು. ನಂತರ ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದರು.

ದೇವಿಯ ದರ್ಶನ ಪಡೆಯಲು ಆಗಮಿಸಿದ ಭಕ್ತರಿಗೆ ಸುರಳಿ ಹೋಳಿಗೆ, ಹೂರಣದ ಹೋಳಿಗೆ, ಮಾವಿನ ಹಣ್ಣಿನ ಸೀಕಣ್ಣಿ ಉಣ ಬಡಿಸಿದರು.

ಇದೇ ಸಂದರ್ಭದಲ್ಲಿ ಸಂಕನಾಳದ ಮುತ್ಯಾ, ಇವಣಗಿ ಪೂಜಾರಿಯವರಿಂದ, ಶಿವಾನಂದ ಮುತ್ಯಾ, ರಾಮನಹಟ್ಟಿ ಮುತ್ಯಾ ಹೇಳಿಕೆ ಜರುಗದವು.

ಸಂಕನಾಳ ಮುತ್ಯಾನ ನುಡಿ-ಮುತ್ತು: ಬಲಗೈಗೆ ಬಂಗಾರದ ಖಡೆ, ಎಡಗೈಗೆ ಬಳ್ಳಿಯ ಖಡೆ, ರೋಣಿ, ಮಿರ್ಗಿಗೆ ಮಂಡಿ ಸಾಗಾಯಿತು, ಹಣಮಂತ ದೇವರಿಗೆ ಹೋಮ್ ಮಾಡಿ, ಆಯಿ ಗುಡಿ ಜಾತ್ರೆ ಮಾಡಿರಿ,

ಇವಣಗಿ ಪೂಜಾರಿ ನುಡಿ-ಮುತ್ತು: ರೋಣಿ, ಮಿರ್ಗಿಗೆ ಮಂಡಿ ಸಾಗಾಯಿತು, ಪುಷ್ಯ ಪುನರ್‌ವಿಶಾ ಮಂಡಿ ಕಡೆ ಆಯಿತು.

ಶಿವಾನಂದ ಮುತ್ಯಾನ ನುಡಿ-ಮುತ್ತು: ರೋಣಿ, ಮಿರ್ಗಿಗೆ ಮಂಡಿ ಸಾಗಾಯಿತು, ಹುಬ್ಬಿ, ಉತ್ತರಿ, ಹಸ್ತಯಾರಿಗೆ ಆಯಿತು, ಯಾರಿಗೆ ಇಲ್ಲ.

ರಾಮನಹಟ್ಟಿ ಪೂಜಾರಿ ನುಡಿ-ಮುತ್ತು: ರಾಜಕಾರಣ ಜನ ಗಲಿಬಿಲಿ ಮಾಡಬಾರದು, ರಾಜಕಾರಣ ಬೆಂಕಿ ಹತ್ತಿತ್ತು ಎಂದು ನುಡಿಮುತ್ತುಗಳನ್ನು ಹೇಳಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!