- Advertisement -Newspaper WordPress Theme
ಮಾಹಿತಿಗಾಗಿಕಾಮನಬಿಲ್ಲು ಮೂಡಲು ಕಾರಣ ಇದು…!

ಕಾಮನಬಿಲ್ಲು ಮೂಡಲು ಕಾರಣ ಇದು…!

ಆಗಸದಲ್ಲಿ ಆಗಾಗ ಕಂಡು ಬರುವ ಕಾಮನಬಿಲ್ಲು ಅಂದರೆ ಮಳೆಬಿಲ್ಲು ಕಂಡು ಬರುತ್ತದೆ. ಏಳು ಬಣ್ಣಗಳ ಗೋಚರ ನೋಡುಗರ ಕಣ್ಣಿಗೆ ಆಕರ್ಷಕವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅದು ಹೇಗೆ ಮೂಡುತ್ತದೆ ಎಂಬುದು ಕುತೂಹಲಕಾರಿ ವಿಷಯ, ಬಹುತೇಕರಿಗೆ ಗೊತ್ತಿರದ ಈ ವಿಚಾರವನ್ನು ಇಂದು ನಾವಿಲ್ಲಿ ಕಂಡುಕೊಳ್ಳೊಣ.

ಮಳೆಬಿಲ್ಲು ಬಹು-ಬಣ್ಣದ ಬೆಳಕಿನ ಒಂದು ಕಮಾನುವಿದ್ದಂತೆ. ಸೂರ್ಯನು ಮಳೆಯ ಹನಿಗಳ ಮೂಲಕ ಹಾದು ಹೋಗುವಾಗ ಇದು ಕಾಣಿಸಿಕೊಳ್ಳುತ್ತದೆ.

ಮಳೆಬಿಲ್ಲು ಬಿಳಿ ಬಣ್ಣದ್ದಾಗಿರುವ ಸೂರ್ಯನ ಬೆಳಕು ವಾಸ್ತವವಾಗಿ ಏಳು ಬಣ್ಣಗಳಿಂದ ಕೂಡಿದೆ. ಈ ಬಣ್ಣಗಳು ನೇರಳೆ, ಇಂಡಿಗೊ, ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು, ಇದನ್ನು VIBGYOR ಎಂದು ಸಂಕ್ಷಿಪ್ತವಾಗಿಇ ಹೇಳಬಹುದು. ಈ ಪದದ ಪ್ರತಿಯೊಂದು ಅಕ್ಷರಗಳು ಒಂದು ಬಣ್ಣವನ್ನು ಪ್ರತಿನಿಧಿಸುತ್ತವೆ. ಸೂರ್ಯನ ಬೆಳಕನ್ನು ಅದರ ಬೇರೆ-ಬೇರೆ ಬಣ್ಣಗಳಾಗಿ ವಿಭಜಿಸುವುದನ್ನು ಚೆದರುವಿಕೆ ಎಂದು ಕರೆಯಲಾಗುತ್ತದೆ. ಮತ್ತು ಬಣ್ಣಗಳ ಪಟ್ಟಿಯನ್ನು ಬಣ್ಣದ ಗೊಂಚಲು (spectrum) ಎಂದು ಕರೆಯಲಾಗುತ್ತದೆ.

ಮಳೆ ಬಂದ ನಂತರ ಸಾಮಾನ್ಯವಾಗಿ ಮಳೆಬಿಲ್ಲು ಕಂಡುಬರುತ್ತದೆ, ವಾತಾವರಣವು ಸಣ್ಣ ನೀರಿನ ಹನಿಗಳಿಂದ ತುಂಬಿರುತ್ತದೆ. ಈ ಗೋಳಾಕಾರದ ಮಳೆಹನಿಗಳು ಸಣ್ಣ ಪ್ರೀಸ್ಮ್ ಗಳಂತೆ ಕಾರ್ಯನಿರ್ವಹಿಸುತ್ತವೆ. ಸೂರ್ಯನ ಕಿರಣಗಳು ಇವುಗಳ ಮೇಲೆ ಬೀಳುತ್ತಿದ್ದಂತೆ, ಅವು (ಕಿರಣಗಳು) ಮಳೆಹನಿಗಳನ್ನು ಪ್ರವೇಶಿಸಿದಾಗ ವಕ್ರೀಭವನಗೊಳ್ಳುತ್ತವೆ (refraction) ಮತ್ತು ನಂತರ ಹನಿಯ ಮೇಲ್ಮೈಯಿಂದ ಪ್ರತಿಫಲಿಸುತ್ತವೆ (refraction). ಮಳೆಹನಿಗಳಿಂದ ಹೊರಬರುವಾಗ ಅವು ಮತ್ತೆ ವಕ್ರೀಭವನಗೊಳ್ಳುತ್ತವೆ. ಸೂರ್ಯನ ಕಿರಣಗಳ ಪ್ರತಿಯೊಂದು ಅಂಗವೂ ವಿಭಿನ್ನ ಕೋನದಲ್ಲಿ ವಕ್ರೀಭವನಗೊಳ್ಳುತ್ತದೆ, ಹೀಗಾಗಿ  ಇತರರಿಂದ  ಬೇರ್ಪಡುತ್ತದೆ. ಬಣ್ಣಗಳ ಪ್ರತ್ಯೇಕತೆಯನ್ನು ಹೀಗೆ ಪಡೆಯುತ್ತವೆ.

ಸೂರ್ಯ  ವೃತ್ತಾಕಾರವಾಗಿರುವುದರಿಂದ  ಮಳೆಬಿಲ್ಲು ಕೂಡ ವೃತ್ತಾಕಾರವಾಗಿರುತ್ತದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!