- Advertisement -Newspaper WordPress Theme
ಅಂಕಣಗಳುಕರುನಾಡ ರತ್ನಸ್ವಚ್ಚ ಭಾರತಕ್ಕೆ ಸ್ಪೂರ್ತಿ… ವಿಜಯಪುರದ ಈ ಮಾಜಿ ಸೈನಿಕ

ಸ್ವಚ್ಚ ಭಾರತಕ್ಕೆ ಸ್ಪೂರ್ತಿ… ವಿಜಯಪುರದ ಈ ಮಾಜಿ ಸೈನಿಕ

ಮೈಮೇಲೆ ಬೆಳ್ಳನೆಯ ಖಾದಿ ಬಟ್ಟೆ ತೊಟ್ಟು, ಸ್ವಚ್ಚ ಭಾರತ ಎಂದು ವರ್ಷಕ್ಕೊಂದು ದಿನ ಪೊರಕೆ ಹಿಡಿದು ಪೋಜು ಕೊಡುತ್ತಾ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರು ಈ ದೇಶದಲ್ಲಿ ಸಾಕಷ್ಟು ಜನರು ಇದ್ದಾರೆ, ಆದರೆ ವಿಶ್ವ ವಿಖ್ಯಾತ ಗೋಳಗುಮ್ಮಟದ ಆವರಣದಲ್ಲಿ ನಾವುಗಳು ಎಸೆದು ಬಂದಿರುವ ಕಸದ ರಾಶಿಯನ್ನು ದಿನ ಬೆಳಿಗ್ಗೆ ಎದ್ದು, ಗೋಣಿ ಚೀಲ ಕೈಯಲ್ಲಿ ಹಿಡಿದು, (Ramesh Kulkarni) ಕಸ ಆಯುತ್ತಾ ದೇಶದ ಮಹತ್ವಾಕಾಂಕ್ಷಿ ಯೋಜನೆ ಗಳೊಲ್ಲೊಂದಾದ “ಸ್ವಚ್ಚ ಭಾರತ ಯೋಜನೆ”ಯನ್ನು ನೈಜವಾಗಿ ಪಾಲಿಸುತ್ತಿರುವ ಬೆರಳೆಣಿಕೆಯಷ್ಟೇ ಜನರಿರುವವರ ಸಾಲಿಗೆ ನಮ್ಮ ವಿಜಯಪುರದ ಮಾಜಿ ಸೈನಿಕರಾದ ರಮೇಶ ಕುಲಕರ್ಣಿಯವರು ಪ್ರಥಮರಾಗಿದ್ದಾರೆ ಎಂದರೆ ತಪ್ಪಾಗಲಾರದು.

ರಮೇಶ ಕುಲಕರ್ಣಿಯವರು (Ramesh Kulkarni)ಇಂಡಿಯನ್ ಆರ್ಮಿಯಲ್ಲಿ ನೀವೃತ್ತ ಸೈನಿಕ. 20 ವರ್ಷಗಳ ಕಾಲ ದೇಶದ ಭದ್ರತೆಯಲ್ಲಿ ದುಡಿದವರು, ಆರ್ಮಿಯಲ್ಲಿ ಸರ್ಜನ್ ಕಂ ಸೈನ್ಯದ ಕ್ಯಾಪ್ಟನ್ ಆಗಿ ವೃತ್ತಿ ನಿರ್ವಹಿಸಿದ್ದಾರೆ. ಈಗ ಅವರಿಗೆ 76 ವರ್ಷ, ಇನ್ನೂ ಕೂಡಾ ಪ್ರಾಯದ ಹುಡುಗರಂತೆ, ಯುವಕರು ನಾಚುವಂತೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ದಿನನಿತ್ಯ ಬೆಳಿಗ್ಗೆ 6ಗಂಟೆಗೆ ಕೈಯಲ್ಲಿ ಒಂದು ಗೋಣಿ ಚೀಲವನ್ನು ಹಿಡಿದುಕೊಂಡು ಗೋಳ ಗುಮ್ಮಟದ ಆವರಣದಲ್ಲಿ ಬಿದ್ದಿರುವ ಕಸ, ಖಾಲಿ ಬಾಟಲ್ ಗಳು ಸೇರಿದಂತೆ ಇನ್ನೀತರ ತ್ಯಾಜ್ಯ ವಸ್ತುಗಳನ್ನು ಆಯ್ದುಕೊಳ್ಳುತ್ತಾ ದಿನ:ಪ್ರತಿ ಕ್ಲೀನ್ ಮಾಡುತ್ತಿರುವ ಇವರ ಕಾರ್ಯ ಸ್ವಚ್ಚ ಭಾರತ ಅಭಿಯಾನಕ್ಕೆ ಸ್ಪೂರ್ತಿಯಾಗಿದೆ.

ದೇಶ ಸೇವೆಯಿಂದ ನಿವೃತ್ತ ಹೋದಿ ವಿಜಯಪುರ ನಗರದಲ್ಲಿ ವಾಸಿಸುತ್ತಿರುವ ಈ ನಿವೃತ್ತ ಸೈನಿಕ ಒಂದು ದಿನ ಗೋಳಗುಮ್ಮಟದ ಆವರಣಕ್ಕೆ ಬಂದಾಗ ಆವರಣದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿರುವ ಪ್ರವಾಸಿಗರು, ಬಿದ್ದಿರುವ ಕಸದ ರಾಸಿಯನ್ನು ಕೆಂಪು ಮೋತಿಯ ವಿದೇಶಿಗರು ಪೋಟೋ ಕ್ಲಿಕ್ಕಿ ಸುತ್ತಿರುವುದನ್ನು ಕಂಡ ದೇಶಭಕ್ತ ಕುಲಕರ್ಣಿಯವರ (Ramesh Kulkarni) ಮನಸ್ಸು ಘಾಸಿಗೊಂಡು ಮಮ್ಮಲು ಮರಗುವಂತೆ ಮಾಡಿಬಿಟ್ಟಿತು, ವಿಶ್ವ ವಿಖ್ಯಾತ ಗೋಳಗುಮ್ಮಟದ ಆವರಣದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿರುವ ಖಾಲಿ ನೀರಿನ ಬಾಟಲ್, ಎಲೆ–ಅಡಿಕೆ ತಿಂದು ಉಗಿದಿರುವ ದೃಷ್ಯವನ್ನು ವಿದೇಶಿಗರು ಸೆರೆಹಿಡಿದು ನಮ್ಮ ದೇಶದ ಬಗ್ಗೆ ಕೀಳಾಗಿ ಕಾಣುತ್ತಾರೆಂದು ಅರ್ಥೈಸಿಕೊಂಡ ಕುಲಕರ್ಣಿಯವರು ಅಂದೇ ತಾವೇ ದೃಡ ನಿರ್ಧಾರ ಮಾಡಿಬಿಟ್ಟರು.

ಅದು 2014 ಅಕ್ಟೋಬರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಚ್ಚ ಭಾರತ ಅಭಿಯಾನವನ್ನು ಆರಂಭ ಮಾಡಿದ ದಿನವೇ ಈ ಯೋಧನ ಮನಸ್ಸು ಘಾಷಿಯಾಗಿತ್ತು, ಅಂದು ನಿರ್ಧರಿಸಿದಂತೆ ದಿನದಿಂದ ಇಂದಿನವರೆಗೂ ಬೆಳಿಗ್ಗೆ 6ಗಂಟೆಯಿಂದ ಸ್ವಚ್ಚತಾ ಕಾರ್ಯ ಮಾಡುತ್ತಾ ಮನಸ್ಸಿಗೆ ನೆಮ್ಮದಿ ಕಂಡುಕೊಂಡಿದ್ದಾರೆ. ಸೈನಿಕರಿಗೆ ಈ ದೇಶವನ್ನು ಹೇಗೆಲ್ಲಾ ಪ್ರೀತಿಸುವಂತೆ ತರಬೇತಿ ನೀಡುತ್ತದೆ ಎಂಬುದಕ್ಕೆ ನಿವೃತ್ತ ಯೋಧ ಕುಲಕರ್ಣಿಯವರೇ ಮಾದರಿಯಾಗಿದ್ದಾರೆ.

ಇವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರು ಕಂಡ-ಕಂಡಲ್ಲಿ ಕಸ ಎಸೆಯುವುದನ್ನು ಕಡಿಮೆ ಮಾಡಿದ್ದಾರೆ, ಕ್ಲೀನಿಂಗ್ ಮಾಡಲು ಬರದಿದ್ದರು ಕೂಡಾ ಕಸ ಎಸೆಯುವುದು ನಿಲ್ಲಿಸಲಿ ಎನ್ನುತ್ತಾರೆ ರಮೇಶ ಕುಲಕರ್ಣಿ. ಜಿಲ್ಲೆಯ ಸ್ವಚ್ಚತಾಭಿಮಾನಿಗಳು ಇವರೊಂದಿಗೆ ಕೈ ಜೋಡಿಸಿ, ಜನತೆಗೆ ಅರಿವು ಮೂಡಿಸುವ ಕಾರ್ಯ ಮಾಡಿದರೇ ವಿಜಯಪುರ ಸಂಪೂರ್ಣವಾಗಿ ನಂದನವನ ಆಗುವುದರಲ್ಲಿ ಸಂಶಯವಿಲ್ಲ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!