- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶೌಚಾಲಯ ನಿರ್ಮಾಣಕ್ಕೆ ವಿರೋಧ...!

ಶೌಚಾಲಯ ನಿರ್ಮಾಣಕ್ಕೆ ವಿರೋಧ…!

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ (Ingaleshwar) ಗ್ರಾಮದ 1 ಹಾಗೂ 2 ನೇ ವಾರ್ಡಗಳಲ್ಲಿ ಬರುವ ಎಸ್‌ಸಿ ಸಮಾಜದ ಜಾಗೆಯಲ್ಲಿ ಶೌಚಾಲಯ ನಿರ್ಮಾಣ ಮಾಡಬಾರದ್ದೆಂದು ಆಗ್ರಹಿಸಿ (DSS) ದಲಿತ ಸೇನೆ ಕರ್ನಾಟಕ ಗ್ರಾಮ ಘಟಕದ ನೇತೃತ್ವದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ (Basavana Bagewadi) ಆಕ್ರೋಶವ್ಯಕ್ತಪಡಿಸಿ ಪಿಡಿಓ ಜಯಕುಮಾರ ದೇವರನಾವದಗಿ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಸೇನೆ ಕರ್ನಾಟಕದ ಉ.ಕ ಅಧ್ಯಕ್ಷ ರಾಕೇಶ ಕಾಂಬಳೆ ಮಾತನಾಡಿ, ಇಂಗಳೇಶ್ವರ (Ingaleshwar) ಗ್ರಾಮದ ದಲಿತ ಸಮಾಜದ ಕಾಲೂನಿಯಲ್ಲಿರುವ ಜಾಗೆಯಲ್ಲಿ ಏಳು ಮಕ್ಕಳ ತಾಯಿ, ರೇವಯ್ಯ ಮುತ್ಯಾನ ದೇವಸ್ಥಾನ ಅಲ್ಲದೇ ಲಕ್ಷ್ಮೀದೇವಿ ದೇವಸ್ಥಾನವಿದ್ದು ನೂರಾರು ವರ್ಷಗಳಿಂದಲೂ ದಲಿತ ಸಮಾಜದ ಹಿರಿಯರು ಲಕ್ಷ್ಮೀದೇವಿಗೆ ಪೂಜೆಗೈಯುತ್ತ ಹಾಗೂ ಪ್ರತಿ ವರ್ಷ ಜಾತ್ರೆ ಮಾಡುತ್ತ ಬಂದಿದ್ದು ಈ ಜಾಗೆಯ ಸುತ್ತ ಮುತ್ತಲೂ ನೂರಾರು ಮನೆಗಳಿಂದ್ದು ಇಲ್ಲಿ ಕೆಲ ಪಟ್ಟಹಿತಾಶಕ್ತಿಗಳ ಹಾಗೂ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಈ ಜಾಗೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಗ್ರಹಿಸಿದರು.

ಶೌಚಾಯಲ ಮಾಡುವುದಾದರೆ ಊರ ಹೊರಗೆ ಮಾಡಲಿ, ಜನರು ವಾಸ ಮಾಡುವ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡಿದಲ್ಲಿ ದುರ್ವಾಸನೆಯ ಕೇಂದ್ರ ಬಿಂದುವಾಗಿ, ರೋಗ ರುಜನೆಗಳ ತಾಣವಾಗುತ್ತದೆ. ಕೂಡಲೇ ಶೌಚಾಲಯ ನಿರ್ಮಾಣ ಕಾರ್ಯವನ್ನು ಕೈಬಿಡಬೇಕು ಇಲ್ಲವಾದಲ್ಲಿ ದಲಿತ ಸಮಾಜ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

More Read – ಹಿಂದೂಗಳ ರಕ್ತಪಾತಕ್ಕೆ ನೆಹರು ಕಾರಣ. ಶಾಸಕ ಯತ್ನಾಳ್ ವಾಗ್ದಾಳಿ

ಈ ಸಂದರ್ಭದಲ್ಲಿ ಸಂಘಟನೆಯ ಉ.ಕ ಉಪಾಧ್ಯಕ್ಷ ಗೋಪಾಲ ಜವಳಗಿ, ಸಂಘಟನಾ ಕಾರ್ಯದರ್ಶಿ ಮಹೇಶ ಜಾಲವಾದಿ, ಸಿಂದಗಿ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀಕಾಂತ ಶಿವಪುರ, ಗ್ರಾಮ ಘಟಕದ ಅಧ್ಯಕ್ಷ ಶರಣಪ್ಪ ದೊಡಮನಿ, ಗ್ರಾಪಂ ಸದಸ್ಯ ಶಂಕ್ರೆಪ್ಪ ದೊಡಮನಿ, ಅಮೀನಪ್ಪ ಬಿಸನಾಳ, ಗಿರೆಪ್ಪ ದೊಡಮನಿ, ರಾಮಪ್ಪ ದೊಡಮನಿ, ಬಾಸ್ಕರ ಬಿಸನಾಳ, ಮಾದೇವ ದೊಡಮನಿ, ಸಂತೋಷ ಮ್ಯಾಗೇರಿ, ಸಿದ್ದು ಮ್ಯಾಗೇರಿ, ಕಾಸಪ್ಪ ಮ್ಯಾಗೇರಿ, ಸಿದ್ಧವ್ವ ಮ್ಯಾಗೇರಿ, ದುರುಪತ್ತೆವ್ವ ಮ್ಯಾಗೇರಿ, ಲಕ್ಕವ್ವ ದೊಡಮನಿ, ಲಕ್ಷ್ಮೀ ಮ್ಯಾಗೇರಿ, ಮುತ್ತಪ್ಪ ಮ್ಯಾಗೇರಿ, ಬಾಸ್ಕರಪ್ಪ ಬಿಸನಾಳ ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!