- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಿಜರಿಯನ್ ಬಳಿಕ ಸೋಂಕು. ಜಿಲ್ಲಾಸ್ಪತ್ರೆಗೆ ಆಯುಕ್ತ ಡಿ.ರಂದೀಪ ಬೇಟಿ

ಸಿಜರಿಯನ್ ಬಳಿಕ ಸೋಂಕು. ಜಿಲ್ಲಾಸ್ಪತ್ರೆಗೆ ಆಯುಕ್ತ ಡಿ.ರಂದೀಪ ಬೇಟಿ

ವಿಜಯಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ.ರಂದೀಪ ವಿಜಯಪುರದ ಜಿಲ್ಲಾಸ್ಪತ್ರೆಗೆ (vijayapura district hospital) ಭೇಟಿ ನೀಡಿದರು.

ಆಸ್ಪತ್ರೆಗೆ ಪ್ರವೇಶಿಸುತ್ತಿದಂತೆ ಸುತ್ತಲು ವೀಕ್ಷಣೆ ನಡೆಸಿದ ಆಯುಕ್ತರು, ರೋಗಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆಯ ಪ್ರವೇಶದ್ವಾರೊಳಗಡೆ ವೈದ್ಯರ ಹೆಸರು, ವಿವಿಧ ವಿಭಾಗಗಳ ಸಂಕ್ಷಿಪ್ತ ವಿವರದ ಮಾಹಿತಿಯನ್ನು ಅಳವಡಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಎಲ್.ಎಸ್.ಲಕ್ಕಣ್ಣನವರ ಅವರಿಗೆ ಸೂಚಿಸಿದರು.

ಸಕ್ರಿಯ ಹೆರಿಗೆ ಕೋಣೆ ಪ್ರವೇಶಿಸಿದ ಆಯುಕ್ತರು, ಸಿಜರಿಯನ್ ಬಳಿಕ ಹೊಲಿಗೆಯಿಂದಾದ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ತ್ರೀರೋಗ ತಜ್ಞ ವೈದ್ಯರು, ಇನ್ನೀತರ ವೈದ್ಯರು ಮತ್ತು ಶುಶ್ರೂಕಿಯರಿಂದ ಮಾಹಿತಿ ಪಡೆದರು.

ಸೋಂಕು ಉಲ್ಬಣಿಸಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರೊಂದಿಗೆ ಆಯುಕ್ತರು ಇದೆ ವೇಳೆ ಖುದ್ದು ಮಾತನಾಡಿದರು. ಈಗ ಹೇಗಿದೆ ಆರೋಗ್ಯ? ಸೋಂಕು ನಿವಾರಣೆ ಆಗುತ್ತಿದೆಯೇ? ಎಂದು ಕೇಳಿ ಮಹಿಳೆಯರ ಆರೋಗ್ಯ ವಿಚಾರಿಸಿ, ಬಳಿಕ ಮಹಾ ಶಸ್ತ್ರ ಚಿಕಿತ್ಸಾ ಘಟಕಕ್ಕೂ ಭೇಟಿ ನೀಡಿ, ಓಟಿಯ ಇನ್ ಚಾರ್ಜ್ ಅವರನ್ನು ವಿಚಾರಿಸಿದರು.  

ವೆಂಟಿಲೇಟರ್ ಪೂರೈಕೆಗೆ ಕ್ರಮ: ನವಜಾತ ಶಿಶುಗಳ ವಿಶೇಷ ಚಿಕಿತ್ಸಾ ಘಟಕಕ್ಕು ಕೂಡ ಭೇಟಿ ನೀಡಿ ಚರ್ಚಿಸಿ, ವೈದ್ಯರ ಬೇಡಿಕೆಯಂತೆ ವೆಂಟಿಲೇಟರ್ ಪೂರೈಕೆಗೆ ಕ್ರಮ ವಹಿಸುವುದಾಗಿ ಆಯುಕ್ತರು ತಿಳಿಸಿದರು. ನವಜಾತ ಶಿಶು ಆರೈಕೆ ಘಟಕದಲ್ಲಿ ನಡೆಯುತ್ತಿರುವ ಕಾಂಗರೂ ಮಾದರಿ ಆರೈಕೆಯ ಬಗ್ಗೆ ಮಾಹಿತಿ ಪಡೆದರು.

ಬಿಸಿನೀರು ಪೂರೈಸಲು ಸೂಚನೆ: ಆಸ್ಪತ್ರೆಯ(vijayapura district hospital) ಮಹಿಳಾ ವಾರ್ಡನ ಸ್ನಾನ ಮತ್ತು ಶೌಚ ಗೃಹಕ್ಕೆ ಭೇಟಿ ನೀಡಿದಾಗ, ಬಿಸಿ ನೀರು ಪೂರೈಸುವಂತೆ ರೋಗಿಯ ಸಂಬಂಧಿಗಳು ಆಯುಕ್ತರಿಗೆ ಮನವಿ ಮಾಡಿದರು. ನಾಲ್ಕು ದಿನವಾಯ್ತು, ನಮಗೆ ಆಸ್ಪತ್ರೆಯಲ್ಲಿ ಬಿಸಿ ನೀರು ಸಿಗುತ್ತಿಲ್ಲ ಎಂದು ಸಿಂಧಗಿಯಿಂದ ಬಂದಿದ್ದ ಈರಮ್ಮ ಎನ್ನುವ ವೃದ್ಧೆಯು ತಿಳಿಸಿದಾಗ, ಸಂಜೆಯಿಂದಲೇ ಬಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಆಯುಕ್ತರು, ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ನಿರ್ದೇಶನ ನೀಡಿದರು.

ಪ್ರಸ್ತಾವನೆ ಸಲ್ಲಿಸಲು ಸೂಚನೆ: ಆಸ್ಪತ್ರೆಗೆ ಮತ್ತೊಂದು ಅಂಬುಲೆನ್ಸ್ ಅಗತ್ಯವಿದೆ. ಆಸ್ಪತ್ರೆಯ ಲಿಫ್ಟ್ ಸರಿ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಬೇಕಿದೆ ಎಂದು ವೈದ್ಯಾಧಿಕಾರಿಗಳು ಆಯುಕ್ತರ ಗಮನಕ್ಕೆ ತಂದರು. ಈ ಬಗ್ಗೆ ವಿವರವಾದ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲು ಆಯುಕ್ತರು ಸೂಚನೆ ನೀಡಿದರು.

ಕಾಮಗಾರಿ ಪರಿಶೀಲನೆ: ಜಿಲ್ಲಾಸ್ಪತ್ರೆಯಲ್ಲಿ (vijayapura district hospital) ನಿರ್ಮಾಣ ಹಂತದಲ್ಲಿರುವ 50 ಹಾಸಿಗೆಯ ಹೆಚ್ಚುವರಿ ಕಟ್ಟಡದ ಕಾಮಗಾರಿಯನ್ನು, ಹತ್ತಿರದಲ್ಲಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಹೆಚ್ಚುವರಿ ಮೇಲ್ಪಹಡಿ ಕಟ್ಟಡ ಕಾಮಗಾರಿಯನ್ನು ಮತ್ತು ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ ಕಟ್ಟಡ ಕಾಮಗಾರಿಯನ್ನು ಸಹ ಇದೆ ವೇಳೆ ಆಯುಕ್ತರು ವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಡಾ.ಎ.ಜೆ.ಬಿರಾದಾರ, ಡಾ.ವಿಜಯಾ, ಡಾ.ರಾಜೇಶ್ವರಿ, ಡಾ.ಚೆನ್ನಮ್ಮ ಕತ್ತಿ, ಡಾ.ಮೋರೆ, ಡಾ.ಗುಂಡಳ್ಳಿ ಹಾಗೂ ಇನ್ನೀತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!