- Advertisement -Newspaper WordPress Theme
ಅಂಕಣಗಳುಕಂಡಲ್ಲಿ ಗುಂಡು ಆದೇಶದ ನಡುವೆಯೂ…

ಕಂಡಲ್ಲಿ ಗುಂಡು ಆದೇಶದ ನಡುವೆಯೂ…

(ram mandir ayodhya) ಇಂದು ಇಡೀ ದೇಶವೇ ಸಂಭ್ರದಲ್ಲಿದೆ. ಮನೆ ಮನಗಳಲ್ಲಿ ರಾಮನಾಮ ಜಪ ನಡೆಯುತ್ತಿದೆ. ಆದ್ರೆ ಈ ಸಂಭ್ರಮದ ಹಿಂದೆ ಹೋರಾಟದ ಕಥೆ ಇದೆ. ವಿಜಯಪುರದ ಕರಸೇವಕರು ಸಹ ರಾಮಮಂದಿರವಾಗಲೇ ಬೇಕು ಎಂದು ಅಯೋಧ್ಯೆ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಇಂದು ಅವರ ಹೋರಾಟ ಫಲಿಸಿದ್ದು, ಕರಸೇವಕರ ಮುಖದಲ್ಲಿ ಮಂದಹಾಸ ಮೂಡಿದೆ.

ರಾಮ ಮಂದಿರ ಹೋರಾಟದಲ್ಲಿ ಗುಮ್ಮಟನಗರಿ ವಿಜಯಪುರದಿಂದ ಸುಮಾರು 200 ಹೆಚ್ಚು ರಾಮಭಕ್ತರು ಅಯೋಧ್ಯೆಗೆ ತೆರಳಿ ಕರಸೇವೆಯಲ್ಲಿ ಭಾಗಿಯಾಗಿದ್ದರು. 2002 ಡಿಸೆಂಬರ್ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರು ಅಯೋಧ್ಯೆ ಚಲೋ ಎಂದು ಕರೆ ನೀಡಿದ್ದರು.‌ ಆಗ ರಾಮಭಕ್ತರು ರೈಲಿನ ಮೂಲಕ ಅಯೋಧ್ಯೆಗೆ ತೆರಳಿದ್ದರು.

ಉತ್ತರ ಪ್ರದೇಶದಲ್ಲಿ ಪೊಲೀಸರ ಕಣ್ತಪ್ಪಿಸಿ, ರೈಲು ಬೋಗಿಯಲ್ಲಿ ಕದ್ದುಮುಚ್ಚಿ ಅಯೋಧ್ಯೆ ತಲುಪಿದ್ದರು. ಬಳಿಕ ಅಲ್ಲಿ ನಡೆದ ಹೋರಾಟದಲ್ಲಿ ನಡೆದ ಘಟನೆಗಳಿಂದಾಗಿ ಪೊಲೀಸರಿಂದ ಲಾಠಿ ಏಟು ತಿಂದು ಬಜಾವ್ ಆಗಿ ಬಂದಿದ್ದೇ ಒಂದು ಪವಾಡ ಎನ್ನುತ್ತಾರೆ ಕರಸೇವಕರಾದ ವಿಜಯ್ ಜೋಶಿ. ಆ ಸಮಯದಲ್ಲಿ ಮನೆಯವರ ವಿರೋಧದ ನಡುವೆಯೂ ಅಯೋಧ್ಯೆಗೆ(ram mandir ayodhya) ತೆರಳಿದ್ದೇವು. ನಾವು ಅಯೋಧ್ಯೆಯಿಂದ ಮರಳಿ ಬರ್ತಿವಿ ಅನ್ನೋ ಗ್ಯಾರಂಟಿ ಇರಲಿಲ್ಲ.

ಪ್ರಭುರಾಮನ ಮಂದಿರ ಆಗಲೇ ಬೇಕು ಎಂಬ ಇರಾದೆಯೊಂದಿಗೆ ಉತ್ತರ ಪ್ರದೇಶಕ್ಕೆ ಹೋದಾಗ ಅಲ್ಲಿ ಕಂಡಲ್ಲಿ ಗುಂಡು ಆದೇಶವಿದ್ದರಿಂದ ಮನೆಯವರ ವಿರೋಧ ಸಹಜವಾಗಿತ್ತು. ಆದ್ರೆ ನಾವು ಎದೆಗುಂದದೆ ಹೋಗಿದ್ದೇವು. ಹಲವು ಕಡೆ ಪೊಲೀಸರ ಕಣ್ತಪ್ಪಿಸಿ ಹೋಗುವುದೇ ದೊಡ್ಡ ಚಾಲೆಂಜ್ ಆಗಿತ್ತು. ಹೇಗೋ ಸುಲ್ತಾನಪುರ ತಲುಪಿದಾಗ ಅಲ್ಲಿ ಸಾವಿರಾರು ಕರಸೇವಕರು ಕೂಡಿಕೊಂಡಾಗ ಆದ ರೋಮಾಂಚನವೇ ಅವಿಸ್ಮರಣಿಯ.

ನಾವು ಮರಳಿ ವಿಜಯಪುರಕ್ಕೆ ಬರುವುದಿಲ್ಲ, ರಾಮಮಂದಿರ (ram mandir ayodhya) ಹೋರಾಟದಲ್ಲಿ ಪಾಲ್ಗೊಂಡರೆ ಸಾವು ಖಚಿತ ಎಂಬ ವಾತಾವರಣವಿತ್ತು. ಆದ್ರೆ ಪ್ರಭುರಾಮನ ಆಶಿರ್ವಾದ ದಿಂದ ನಾವೆಲ್ಲರೂ ಸುರಕ್ಷಿತವಾಗಿ‌ ಮರಳಿದೆವು. ನಮ್ಮ ಹೊರಾಟ ವ್ಯರ್ಥವಾಗಿ ಹೋಗಲಿಲ್ಲ ಎನ್ನುತ್ತಾರೆ ಅಂದಿನ ಕರಸೇವಕ ಹಾಗೂ ಇಂದಿನ ಮಹಾನಗರ ಪಾಲಿಕೆ ಶಂಕರ ಕುಂಬಾರ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!