- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ್ರಾಮಾಣಿಕವಾಗಿ ಆರೋಪಿಗಳನ್ನು ಬಂಧಿಸಿದ್ದೇನೆ. ಡಿವೈಎಸ್ಪಿ ಶ್ರೀಧರ ದೊಡ್ಡಿ

ಪ್ರಾಮಾಣಿಕವಾಗಿ ಆರೋಪಿಗಳನ್ನು ಬಂಧಿಸಿದ್ದೇನೆ. ಡಿವೈಎಸ್ಪಿ ಶ್ರೀಧರ ದೊಡ್ಡಿ

ಬಸವನಬಾಗೇವಾಡಿ: ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರು ಅಪ್ರಾಪ್ತೆ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳನ್ನು ಬಂಧಿಸಿ ದೋಷಾರೊಹಣ ಪತ್ರ ತಯಾರಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ ಆರೋಪಿಗಳಿಗೆ ಆದಷ್ಟು ಬೇಗ ತಕ್ಕ ಶಿಕ್ಷೆಯಾಗುತ್ತದೆ ಎಂದು ಇಂಡಿ ಡಿವೈಎಸ್‌ಪಿ ಶ್ರೀಧರ ದೊಡ್ಡಿ ಹೇಳಿದರು.

https://gadinaadakranti.com/the-girl-who-spent-the-night-in-the-mud-of-the-village/

 ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಚಂದ್ರಮ್ಮ ದೇವಾಲಯದಲ್ಲಿ ದಲಿತರ ಸಾಂತ್ವಾನ ಸಭೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದ ಇಬ್ಬರು ದಲಿತ ಅಪ್ರಾಪ್ತ ಬಾಲಕಿಯರನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಇಡೀ ಸಮುದಾಯವನ್ನೇ ತಲೆ ತಗ್ಗಿಸುವಂತ ಪ್ರಕರಣ ಇದಾಗಿತ್ತು. ಅಂದಿನ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅನುಪಮ ಅಗರವಾಲ ಅವರು, ಈ ಪ್ರಕರಣದ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ನಂತರ ನಾವು ವಿಶೇಷ ತಂಡವನ್ನು ರಚಿಸಿ ಗ್ರಾಮದ ಮೂರು ಜನರನ್ನು ವಶಪಡಿಸಿಕೊಂಡು ತನಿಖೆ ಮಾಡಿದಾಗ ಆರೋಪಿಗಳು ತಪ್ಪು ಮಾಡಿರುವುದಾಗಿ ತಿಳಿದು ಬಂದಿರುತ್ತದೆ ಎಂದರು.

 ಈ ಮಾಹಿತಿ ಆದಾರದ ಮೇಲೆ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂದಿಸಿ ಚಾರ್ಜ ಸೀಟ್ ತಯಾರಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ನ್ಯಾಯಾಲಯವು ತಪ್ಪಿತಸ್ಥರಿಗೆ ಶಿಕ್ಷೆಯನ್ನು ಆದಷ್ಟು ಬೇಗನೆ ನೀಡಿ, ನೊಂದ ಕುಟುಂಬಕ್ಕೆ ನ್ಯಾಯ ನೀಡಬೇಕು ಎನ್ನುವ ನಂಬಿಕೆ ನನಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನ್ನ ಮೇಲೆ ಇಟ್ಟ ನಂಬಿಕೆಯAತೆ ನಾನು ಪ್ರಾಮಾಣಿಕವಾಗಿ ಆರೋಪಿಗಳನ್ನು ಬಂಧಿಸಿದ್ದೇನೆ ಎಂದು ಹೇಳಿದರು.

https://gadinaadakranti.com/holly-a-huge-admiration-for-the-dearth-of-former-prime-ministers/

 ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಗುರು ಗುಡಿಮನಿ ಮಾತನಾಡಿ, ರಾಜ್ಯದಲ್ಲಿ ದಲಿತರ ಮೇಲೆ ಮೇಲಿಂದ ಮೇಲೆ ದಬ್ಬಾಳಿಕೆ. ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿವೆ ಶ್ರೀಧರ ದೊಡ್ಡಿವರಂತಹ ನಿಷ್ಠಾವಂತ ದಕ್ಷ ಅಧಿಕಾರಿಗಳು ಬಂದಾಗ ಮಾತ್ರ ನಮಗೆ ನ್ಯಾಯ ಸಿಗಲು ಸಾಧ್ಯ. ಈ ಪ್ರಕರಣವನ್ನು ಭೇದಿಸಿ ನಮಗೆ ನ್ಯಾಯ ದೊರಕಿಸಿದ ನಿಮಗೆ ಇಡಿ ನಮ್ಮ ಸಮಾಜದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದುರ್ಗಪ್ಪ ಕಳ್ಳಿಮನಿ. ಬಸವರಾಜ ಪಟೇದ. ಉಮೇಶ ನಡುವಿನಮನಿ. ಮಡಿವಾಳ ಕಳ್ಳಿಮನಿ. ಶಂಕ್ರಪ್ಪ ಮಾದರ. ರೆಹೇಮಾನ ಮಕಾಂದಾರ ಸೇರಿದಂತೆ ಮುಂತಾದವರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!