- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಎಚ್ಐವಿ: ಬಾಗಲಕೋಟೆಯ ಮಾಹಿತಿ ಹೀಗಿದೆ...

ಎಚ್ಐವಿ: ಬಾಗಲಕೋಟೆಯ ಮಾಹಿತಿ ಹೀಗಿದೆ…

ಬಾಗಲಕೋಟೆ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದು, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಹೋಲಿಸಿದರೆ, ಸಾಮಾನ್ಯರಲ್ಲಿ ಶೇ.1.2 ರಿಂದ ಶೇ.1ಕ್ಕೆ ಇಳಿಮುಖ ಕಂಡುಬಂದರೆ, ಗರ್ಭಿಣಿಯರಲ್ಲಿ ಶೇ.0.05 ರಿಂದ ಶೇ.0.06ಗೆ ಏರಿಕೆ ಕಂಡುಬಂದಿದೆ ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

https://gadinaadakranti.com/the-girl-who-spent-the-night-in-the-mud-of-the-village/

ಈ ಕುರಿತಾಗಿ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು 12 ಐಸಿಟಿಸಿ ಕೇಂದ್ರಗಳು, 60 ಏಫ್‌ಐಸಿಟಿಸಿ ಕೇಂದ್ರಗಳು, ಖಾಸಗಿ ಸಹಭಾಗಿತ್ವದಲ್ಲಿ ಐಸಿಟಿಸಿ ಕೇಂದ್ರಗಳು 34 ಇವೆ. ಜಿಲ್ಲೆಯಲ್ಲಿ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರ (ಸುರಕ್ಷಾ ಕ್ಲಿನಿಕ್) ಗಳಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆ, ಮುಧೋಳ ಮತ್ತು ಜಮಖಂಡಿಯಲ್ಲಿ ತಲಾ ಒಂದು ಇವೆ. ಜಿಲ್ಲೆಯಲ್ಲಿ 10 ರಕ್ತನಿಧಿ ಕೇಂದ್ರಗಳಿದ್ದು, ಅದರಲ್ಲಿ ಒಂದು ಸರಕಾರಿ ಉಳಿದ 9 ಖಾಸಗಿ ರಕ್ತನಿಧಿ ಕೇಂದ್ರಗಳಿವೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಮುಧೋಳ, ಜಮಖಂಡಿ, ಹುನಗುಂದದಲ್ಲಿ ತಲಾ ಒಂದು ಎ.ಆರ್.ಟಿ ಕೇಂದ್ರಗಳಿವೆ. ಈ ಕೇಂದ್ರಗಳ ಅಡಿಯಲ್ಲಿ ಪ್ರಾರಂಭದಿಂದ ಅಕ್ಟೋಬರ 20201ರ ಅಂತ್ಯದ ವರೆಗೆ 33787 ಸೋಂಕಿತರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 16547 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಸೋಂಕಿತರ ಪ್ರಮಾಣದಲ್ಲಿ ಕಳೆದ ಸಾಲಿನಿಂದ ಅಕ್ಟೋಬರ ಅಂತ್ಯಕ್ಕೆ ಬಾಗಲಕೋಟ ತಾಲೂಕಿನ ಸಾಮಾನ್ಯರಲ್ಲಿ ಶೇ.2.7 ರಿಂದ ಶೇ.3, ಗರ್ಭಿಣಿರಲ್ಲಿ ಶೇ.0.09 ರಿಂದ 0.12 ಕ್ಕೆ ಏರಿಕೆಯಾಗಿದೆ. ಜಮಖಂಡಿ ಸಾಮಾನ್ಯರಲ್ಲಿ ಶೇ.3 ರಿಂದ ಶೇ.1.88, ಗರ್ಭಿಣಿಯರಲ್ಲಿ ಶೇ.0.02 ರಿಂದ ಶೇ.0.1 ಇಳಿಕೆ ಕಂಡಿದೆ. ಮುಧೋಳ ಸಾಮಾನ್ಯರಲ್ಲಿ ಶೇ.2.5 ರಿಂದ ಶೇ.1.98ಕ್ಕೆ ಇಳಿಕೆಯಾಗಿದೆ. ಗರ್ಭಿಣಿಯರಲ್ಲಿ ಶೇ.0.05 ರಿಂದ ಶೇ.0.11 ಏರಿಕೆಯಾಗಿದೆ. ಬಾದಾಮಿ ಸಾಮಾನ್ಯರಲ್ಲಿ ಶೇ.0.9 ರಿಂದ ಶೇ.0.06 ಇಳಿಕೆಯಾದರೆ ಗರ್ಭಿಣಿಯರಲ್ಲಿ ಶೇ.0.03 ರಿಂದ ಶೇ.0.03 ಯಥಾಸ್ಥಿತಿಯಲ್ಲಿದೆ. ಹುನಗುಂದ ಸಾಮಾನ್ಯರಲ್ಲಿ ಶೇ.1.18 ರಿಂದ ಶೇ.1.03ಕೆ ಇಳಿಕೆಯಾದರೆ, ಗರ್ಭಿಣಿಯರಲ್ಲಿ ಶೇ.0.03 ರಿಂದ ಶೇ.0.03 ಯಥಾಸ್ಥಿತಿ ಇದೆ. ಬೀಳಗಿ ಸಾಮಾನ್ಯರಲ್ಲಿ ಶೇ.1.19 ರಿಂದ ಶೇ.1.03ಕ್ಕೆ, ಗರ್ಭಿಣಿಯರಲ್ಲಿ ಶೇ.0.09 ರಿಂದ ಶೇ.0.08ಕ್ಕೆ ಇಳಿಕೆಯಾಗಿದೆೆ. ಒಟ್ಟಾರೆಯಾಗಿ ಜಿಲ್ಲಾವಾರು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದರು.

https://gadinaadakranti.com/revolution-saffron-hound-vizier-soldiers-this-is-the-thrilling-story-of-the-freedom-struggle/

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 79998 ಜನರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 467 ಜನರಲ್ಲಿ ಪಾಜಿಟಿವ್ ಕಂಡುಬಂದಿದೆ. ಸಾಮಾನ್ಯ ಜನರಲ್ಲಿ 43045 ಪರೀಕ್ಷೆಯ ಪೈಕಿ 443 ಸೋಂಕು ಕಂಡುಬಂದರೆ, ಗರ್ಭಿಣಿಯರಲ್ಲಿ 36953 ಪರೀಕ್ಷೆಯ ಪೈಕಿ 24 ಸೋಂಕು ಕಂಡುಬಂದಿರುತ್ತದೆ. ಸೋಂಕು ದೃಡಪಟ್ಟ 467 ಜನರು ಎ.ಆರ್.ಟಿ. ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡು ಮಾತ್ರೆಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಮಾಹಿತಿ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!