- Advertisement -Newspaper WordPress Theme
ಆರೋಗ್ಯಸಿಹಿಗಾಗಿ ಸಕ್ಕರೆ ಬದಲು ಇದನ್ನು ಬಳಸಬಹುದು…!

ಸಿಹಿಗಾಗಿ ಸಕ್ಕರೆ ಬದಲು ಇದನ್ನು ಬಳಸಬಹುದು…!

ಸಕ್ಕರೆ ಇದು ದೈನಂದಿನ ಜೀವನದಲ್ಲಿ ಇಂದು ನಾವೇಲ್ಲರೂ ಬಳಸುವ ಬಹು ಮುಖ್ಯಅಡುಗೆ ಪದಾರ್ಥವಾಗಿದೆ. ಆದರೆ ಬೆಳೆಯುತ್ತಿರುವ ಇಂದಿನ ಯುಗದಲ್ಲಿ ಕೆಮಿಕಲ್ ಬಳಕೆಯಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸಕ್ಕರೆಯೂ ಕೂಡಾ ಒಂದಾಗಿದೆ. ಆದರೆ, ಸಕ್ಕರೆ ಇಲ್ಲದಿದ್ದರೆ ಸಿಹಿ ಹೇಗೆ ಎಂಬ ಪ್ರಶ್ನೆ ಬಹುಜನರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಇಲ್ಲಿದೆ.

ಸಕ್ಕರೆಯ ಬದಲಾಗಿ ನಾವು ಕೆಲವು ಪದಾರ್ಥಗಳನ್ನು ಬಳಸಬಹುದಾಗಿದೆ. ಅದರಲ್ಲಿ ಚಹ ತಯಾರಿಸಲು ತೆಂಗಿನ ಮರದಿಂದ ನೀರ (ಪಢನೀರ್) ತೆಗೆಯುವುದನ್ನು ನೀವು ನೋಡಿರಬಹುದು. ಈ ನೀರಿದಿಂದಲೇ ಇದನ್ನು ತಯಾರಿಸಲಾಗುತ್ತದೆ.

Read More: ಏನಿದು ಮೃತ್ಯು ಪತ್ರ ( will deed) ..? ಇಲ್ಲಿದೆ ವಿವರ

ಇನ್ನೂ ಸ್ಟೆವಿಯಾ ಸಸ್ಯ ಮೂಲತಃ ದಕ್ಷಿಣ ಅಮೆರಿಕದ್ದು ಎಂದು ಹೇಳಲಾಗುತ್ತದೆ. ಬ್ರೆಜಿಲ್ ಮತ್ತು ಪರಾಗ್ವೆ ಭಾಗದ ಮೂಲನಿವಾಸಿಗಳಿಗೆ ಈ ಸಸ್ಯದ ಎಲೆಗಳ ಉಪಯೋಗ ಗೊತ್ತಿತ್ತು. ಇದನ್ನು ಕೂಡಾ ಸಿಹಿಗಾಗಿ ಬಳಸಬಹುದಾಗಿದೆ.

ಅದೇ ರೀತಿ ಅಗಾವೇ ಸಸ್ಯವನ್ನು ಕೂಡಾ ಬಳಸಬಹುದಾಗಿದೆ. ಅಗಾವೇ ಅಮೆರಿಕಾನ ಎಂಬ ಸಸ್ಯ 7 ರಿಂದ 15 ವರ್ಷದವರೆಗೆ ಬೆಳೆದ ನಂತರ ಎಲೆಗಳನ್ನು ಕತ್ತರಿಸಿಬಿಡುತ್ತಾರೆ. ನಂತರ ಅದರ ಬುಡದಿಂದ ರಸವನ್ನು ತೆಗೆದು ಕಾಯಿಸುವರು. ಅಗಾವೇ ಸಿರಪ್ ಐಸ್ ಟೀ ತಯಾರಿಕೆಗೆ ಮತ್ತು ತಂಪು ಪಾಣಿಯಗಳಿಗೆ ಬಳಸಲು ಸೂಕ್ತವಾಗಿದೆ.

Read More: ಸ್ವಾತಂತ್ರ್ಯ ಹೋರಾಟ: ಕ್ರಾಂತಿ ಕೇಸರಿ ಮತ್ತು ಹಂಡ ವಜೀರ ಸೈನಿಕರು

ಇನ್ನೋಂದು ಪದಾರ್ಥವೆಂದರೆ, ಮೇಪಲ್ ಸಿರಪ್. ಮೇಪಲ್ ಮರಗಳುಕೂಡಾ ಬಳಕೆಗೆ ಸೂಕ್ತವಾಗಿದೆ. ಇದರ ಮೂಲ ಉತ್ತರ ಅಮೆರಿಕ ಎನ್ನಲಾಗಿದ್ದು, ಮೇಪಲ್ ಮರಗಳಿಂದ ತೆಗೆದ ರಸವೇ ಮೇಪಲ್ ಸಿರಪ್. ರಬ್ಬರ್ ಮರದಿಂದ ರಬ್ಬರ್ ರಸ ತೆಗೆದಂತೆ ಮೇಪಲ್ ಅನ್ನು ಮೇಪಲ್ ಮರದಿಂದ ತೆಗೆಯಲಾಗುತ್ತದೆ. ಆ ರಸವನ್ನು ಕಾಯಿಸಿ ನೀರಾವಿ ಆದ ಮೇಲೆ ಬಳಸಬಹುದು.

ಮತ್ತು ಸಕ್ಕರೆ ತಯಾರಿಸುವಾಗ ಬರುವ ಉಪಪದಾರ್ಥವೇ ಮೊಲಾಸಸ್. ಇದು ಸಕ್ಕರೆಯಷ್ಟು ಸಿಹಿಯಾಗಿರುವುದಿಲ್ಲ ಹಾಗೂ ಇದನ್ನು ಅತಿಹೆಚ್ಚು ಉಪಯೋಗಿಸುವುದು ಆರೋಗ್ಯಕರವಲ್ಲ.

ಹೀಗೆ ನೀವು ಸಕ್ಕರೆಯ ಬದಲಾಗಿ ಈ ಕೆಲವು ಪದಾರ್ಥಗಳನ್ನು ಬಳಸಿ ಸಿಹಿಯನ್ನಾಗಿಸಿಕೊಳ್ಳಬಹುದಾಗಿದೆ.


LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!