- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಶೇಷಚೇತನ ಮಕ್ಕಳಲ್ಲಿ ಬದಲಾವಣೆ. ಸಿಇಓ ರಾಹುಲ್ ಶಿಂಧೆ ಹರ್ಷ

ವಿಶೇಷಚೇತನ ಮಕ್ಕಳಲ್ಲಿ ಬದಲಾವಣೆ. ಸಿಇಓ ರಾಹುಲ್ ಶಿಂಧೆ ಹರ್ಷ

ವಿಜಯಪುರ: (Vijayapura) ತಮ್ಮ ಹಲವಾರು ಕಾರ್ಯ ಒತ್ತಡಗಳ ಮಧ್ಯೆಯೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂಧೆ (rahul shinde ias) ಅವರು ಜೂನ್ 1ರಂದು, ವಿಶೇಷಚೇತನ ಮಕ್ಕಳಿರುವ (Specialist children) ಸಂಸ್ಥೆಯೊಂದಕ್ಕೆ ಭೇಟಿ ನೀಡಿ, ವಿಶೇಷಚೇತನ ಮಕ್ಕಳೊಂದಿಗೆ ಕೆಲಹೊತ್ತು ಕಳೆದರು.


ವಿಜಯಪುರ ನಗರದಲ್ಲಿರುವ ವಿಕಲಚೇತನರ ಪುನಶ್ಚೇತನ ಕೇಂದ್ರವಾದ ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗೆ ಭೇಟಿ ನೀಡಿದ ಸಿಇಓ ಅವರು, ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಕೇಂದ್ರದ 2022- 23ನೇ ಸಾಲಿನ ಸಂಸ್ಥೆಯ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಸಂಸ್ಥೆಯು ವಿಶೇಷಚೇತನ ಮಕ್ಕಳಿಗೆ ಒದಗಿಸುತ್ತಿರುವ ವಿಶೇಷ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿದು, ಆ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಂಡು ಸಿಇಓ (rahul shinde ias) ಅವರು ಹರ್ಷ ವ್ಯಕ್ತಪಡಿಸಿದರು.

ವಿಕಲಚೇತನ ಮಕ್ಕಳು ಪ್ರಸಕ್ತ ಸಾಲಿನ ಶಿಕ್ಷಣವನ್ನು ಸಹ ಅತ್ಯಂತ ಉತ್ಸಾಹದಿಂದ ಕಲಿಯಲು ಪ್ರೋತ್ಸಾಹಿಸಿ, ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಪ್ರಶಾಂತ ಎಸ್. ದೇಶಪಾಂಡೆ, ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಅಜಿತ್ ಕುಲಕರ್ಣಿ, ಸಂಸ್ಥೆಯ ಮುಖ್ಯ ಗುರುಗಳಾದ ಕವಿತಾ ಗದ್ವಾಲ, ಸಂಸ್ಥೆಯ ದೈಹಿಕ ಶಿಕ್ಷರರಾದ ಅಶ್ವಿನಿ ಬುರಾಣಪುರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!