- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಎಸ್.ಜಿ ಪಾಟೀಲರ ಸೇವೆ ಅನನ್ಯ. ರಾಜ್ಯಾಧ್ಯಕ್ಷ ಡಾ. ಎಸ್. ಎಸ್. ಪಾಟೀಲ ಮೆಚ್ಚುಗೆ

ಎಸ್.ಜಿ ಪಾಟೀಲರ ಸೇವೆ ಅನನ್ಯ. ರಾಜ್ಯಾಧ್ಯಕ್ಷ ಡಾ. ಎಸ್. ಎಸ್. ಪಾಟೀಲ ಮೆಚ್ಚುಗೆ

ವಿಜಯಪುರ: ಹಲವು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು, ಇತ್ತೀಚಿಗೆ ನಿವೃತ್ತಿ ಹೊಂದಿರುವ ಎಸ್.ಜಿ. ಪಾಟೀಲರ (S. G. Patil) ಕೊಡುಗೆ ಈ ಸಮಾಜಕ್ಕೆ ಅಪಾರವಾಗಿದೆ ಎಂದು (Hande Vazir) ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ಎಸ್. ಎಸ್. ಪಾಟೀಲ ಕಡೂರ (S. S. Patil Kadur) ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಸಂಗಮೇಶ್ವರ ಆಸ್ಪತ್ರೆಯ ಕಛೇರಿಯಲ್ಲಿ ಇಂದು ಗುರುವಾರ, ಎಸ್.ಜಿ. ಪಾಟೀಲರವರ ನಿವೃತ್ತ ಹಾಗೂ ಜನ್ಮ ಷಷ್ಠಬ್ಧಿ ಅಭಿನಂದನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು,  ಎಸ್. ಜಿ. ಪಾಟೀಲರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ನಮ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುವ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನವು ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ. ಅವರ ನಿವೃತ್ತಿ ಹಾಗೂ ಜನ್ಮ ಷಷ್ಠಬ್ಧಿ ಅಭಿನಂದನ ಕಾರ್ಯಕ್ರಮವನ್ನು ನಾವೇಲ್ಲರೂ ಹೆಮ್ಮೆಯಿಂದ, ಒಗ್ಗಟ್ಟಿನೊಂದಿಗೆ ಯಶಸ್ವಿಗೊಳಿಸೋಣ ಎಂದು ಹೇಳಿದರು.

ಇದೇ ವೆಳೆ ಎಸ್. ಜಿ. ಪಾಟೀಲರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ನಂತರ ಅಭಿನಂದನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು (Hande Vazir) ಸಮಾಜದ ಹಿರಿಯರು ಹಾಗೂ ಎಸ್.ಜಿ.ಪಾಟೀಲರ ಅಭಿಮಾನಿ ಬಳಗದ ಮುಖಂಡರಿಂದ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಾಲೂಕಾ ಕ.ಜಾ.ಪ. ಅಧ್ಯಕ್ಷ ದೇವೆಂದ್ರ ಗೋನಾಳ, ಸಮಾಜ ಮುಖಂಡರಾದ ಆರ್.ಎಸ್. ಪಾಟೀಲ (ಅಗಸಬಾಳ), ಪ್ರಭು ಬೆಳ್ಳಿ, ಶಿವಾನಂದ ಚೌಧರಿ, ಎಸ್.ಮೊಕಾಶಿ, ಎಸ್. ಎಸ್ ಅವರಾಧಿ, ಸಿ.ಎಸ್. ಅವರಾಧಿ ಸೇರಿದಂತೆ ಇನ್ನೀತರ ಮುಖಂಡರು ಬಾಗವಹಿಸಿದ್ದರು.


LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!