- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶರಣ ಹಡಪದ  ಅಪ್ಪಣ್ಣನವರು ಜಾತಿಯಿಂದ ಗುರುತಿಸಿಕೊಳ್ಳಲ್ಲಿಲ್ಲ

ಶರಣ ಹಡಪದ  ಅಪ್ಪಣ್ಣನವರು ಜಾತಿಯಿಂದ ಗುರುತಿಸಿಕೊಳ್ಳಲ್ಲಿಲ್ಲ

ಬಸವನಬಾಗೇವಾಡಿ : ಶರಣ ಹಡಪದ ಅಪ್ಪಣ್ಣನವರು (Hadapadda Appanna) ಜಾತಿಯಿಂದ ಗುರುತಿಸಿಕೊಳ್ಳಲ್ಲಿಲ್ಲ, ಅವರ ಜ್ಞಾನದಿಂದ ಗುರುತಿಸಿಕೊಂಡರು ಎಂದು ಬಾಗಲಕೋಟಿ ಜಿಲ್ಲೆಯ ರಬಕವಿ ಭಾರತಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಭೀಮಾಶಂಕರ ಹಡಪದ (Bhimashankar Hadapad) ಹೇಳಿದರು.

ಅಖಂಡ ತಾಲೂಕಿನ ಗೊಳಸಂಗಿ (Golasangi) ಗ್ರಾಮದ ಸಂಗಮೇಶ್ವರ ಮಂಗಲ ಭವನದಲ್ಲಿ ಶರಣ ಹಡಪದ ಅಪ್ಪಣ್ಣನವರ ಸೇವಾ ಸಂಘದ ನೇತೃತ್ವದಲ್ಲಿ ಮಂಗಳವಾರ ನಡೆದ ನಿಜಸುಖಿ ಶ್ರೀಶರಣ ಹಡಪದ ಅಪ್ಪಣ್ಣನವರ 888ನೇ ಜಯಂತ್ಯೋತ್ಸವ ಕಾರ್ಯ‍್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪಣ್ಣನವರು ಜಾತಿಯಿಂದ ಗುರುತಿಸಿಕೊಳ್ಳಲ್ಲಿಲ್ಲ, ಅವರ ಜ್ಞಾನದಿಂದ ಗುರುತಿಸಿಕೊಂಡರು. ಹಡಪದ ಸಮಾಜದಲ್ಲಿ ಕೆಲವರು ತಪ್ಪು ಕಲ್ಪನೆ ಕೊಡುತ್ತಿದ್ದಾರೆ, ಅದಕ್ಕೆ ಸಮಾಜ ಭಾಂದವರು ಯಾರು ಕಿವಿಗೊಡಬಾರದು, 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ಸಕಲ ಶಾಸ್ತ್ರಗಳನ್ನು ಬಲ್ಲವರು, ಜ್ಞಾನವುಳ್ಳವರಾಗಿದ್ದರಿಂದ ಅವರನ್ನು ಬಸವಣ್ಣನವರ ಅಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದರು. ಶರಣರ ಆದರ್ಶಗಳನ್ನು ಪಾಲಿಸಿ ಜೀವನ ಸಾಗಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಮಾಜದಲ್ಲಿನ ಓರೆಕೋರೆ ತಿದ್ದಿದ ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು, ಗ್ರಾಮಕ್ಕೆ ಒಂದು-ಎರಡು ಮನೆಗಳಿರುವ ಹಡಪದ (Hadapadda Appanna) ಸಮಾಜ ಎಲ್ಲ ಸಮುದಾಯದವರೊಂದಿಗೆ ಬೆರತುಕೊಂಡು ಅದ್ಧೂರಿಯಾಗಿ ಕಾರ್ಯ‍್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಶಿವಾನಂದ ಪಾಟೀಲರ ಪುತ್ರ ಸತ್ಯಜೀತ ಪಾಟೀಲ, ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶೇಖರ ದಳವಾಯಿ, ರಾಣಿಚನ್ನಮ್ಮ ವಿವಿ ಸಂಶೋಧನಾರ್ಥಿ ಬಸವರಾಜ ಹಡಪದ, ಅಕ್ಕಲಕೋಟ ತಮದಡ್ಡಿ ವಿರಕ್ತಮಠದ ಪ್ರಭುಶಾಂತ ಮಹಾಸ್ವಾಮೀಜಿ, ಪತ್ರಕರ್ತ ನಾಗೇಶ ನಾಗೂರ, ಬಿ.ಎಸ್.ಮೇಟಿ ಮಾತನಾಡಿದರು.

ಗ್ರಾಮ ಅಧ್ಯಕ್ಷೆ ಸುನಿತಾ ಪವಾರ, ಮಲ್ಲಣ್ಣ ಹಡಪದ(ಚೋಳಚಗುಡ್ಡ), ತಂಗಡಗಿ ಶ್ರೀಮಠದ ಟ್ರಸ್ಟನ ಕಾರ್ಯದರ್ಶಿ ಹಣಮಂತ್ರಾಯ ಗುಡದಿನ್ನಿ, ಅಧ್ಯಕ್ಷ ಅಶೋಕ ಹಡಪದ, ಆನಂದ ಹಡಪದ ಸೇರಿದಂತೆ ಇತರರು ಇದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಮರೇಶಗೌಡ ಪಾಟೀಲ ಸ್ವಾಗತಿಸಿದರು. ಶಿಕ್ಷಕರಾದ ಮಂಜುನಾಥ ಯಾದವ ನಿರೂಪಿಸಿದರು, ಎಲ್.ಜಿ.ಹಡಪದ ವಂದಿಸಿದರು.

ಇದೇ ಸಂದರ್ಭದಲ್ಲಿ ಹಡಪದ ಸಮಾಜಕ್ಕೆ ಭೂ ದಾನ ಮಾಡಿದ ಮೌಲಾನಾ ಅಬ್ದುಲ್‌ಖಾದರ ಮೌಲಾಸಾಬ ಕಾಚಾಪೂರ ಹಾಗೂ ಮೌಲಾನಾ ಹಾಪೀಜಬಸೀರಅಹ್ಮದ ಅಲ್ಲಿಸಾಬ ನದಾಫ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!