- Advertisement -Newspaper WordPress Theme
ಅಂಕಣಗಳುಯುವ ಸಾಧಕಇಂಡಿಯಾ ಬುಕ್ ಆಪ್ ರೆಕಾರ್ಡ್ ದಾಖಲೆ ಮಾಡಿದ ಗುಮ್ಮಟನಗರಿಯ ಪ್ರತಿಭೆಗಳು

ಇಂಡಿಯಾ ಬುಕ್ ಆಪ್ ರೆಕಾರ್ಡ್ ದಾಖಲೆ ಮಾಡಿದ ಗುಮ್ಮಟನಗರಿಯ ಪ್ರತಿಭೆಗಳು

ವಿಜಯಪುರ ನಗರದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಕೆ ಬಿರಾದಾರ ಇವರ ಇಬ್ಬರು ಮಕ್ಕಳು ಪ್ರತಿಭೆ ಗುರುತಿಸಿ ಇಂಡಿಯಾ ಬುಕ್ ಆಪ್ ರೆಕಾರ್ಡ ಪುಸ್ತಕದಲ್ಲಿ ಹೆಸರು ದಾಖಲಿಸಿದ್ದಾರೆ.

ಮೂಲತಃ ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದವರಾದ ಎಸ್ ಕೆ ಬಿರಾದಾರ ಇವರ ಸುಪುತ್ರ ಸಿದ್ದಾಂತಗೌಡ ಎಸ್ ಬಿರಾದಾರ ಹಾಗೂ ಸುಪುತ್ರಿ ಶಿವನ್ಯಾ ಎಸ್ ಬಿರಾದಾರ ಇಬ್ಬರೂ ತಮ್ಮ ಪ್ರತಿಭೆ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಹೆಸರು ಗಿಟ್ಟಿಸಿದ್ದಾರೆ. ವಚನ, ಮಗ್ಗಿ, ಜಿಲ್ಲೆಗಳ ಹೆಸರು, ಪ್ರಧಾನಮಂತ್ರಿ, ರಾಷ್ಟ್ರಪತಿಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು, ಸುಮಾರು 200ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ನಿಲ್ಲದೆ ಉತ್ತರಿಸುವುದು ಬಸವಣ್ಣನವರ ವಚನಗಳನ್ನು, ಸಂಕಲನ, ವ್ಯವಕಲನ, ಗುಣಾಕಾರ ಹಾಗೂ ಭಾಗಾಕಾರ ಲೆಕ್ಕಗಳನ್ನು ಬಿಡಿಸುವುದು ಹೀಗೆ ಹತ್ತು ಹಲವು ವಿಷಯಗಳಲ್ಲಿ ಆನ್‍ಲೈನ್ ಮುಖಾಂತರ ಪ್ರತಿಭೆಯನ್ನು ಗುರುತಿಸಿ  ಪ್ರತಿಭಾ ಪುರಸ್ಕಾರ ನೀಡಿ ಪ್ರತಿ ವರ್ಷ ಇಂಡಿಯಾ ಬುಕ್ ಆಫ ರೆಕಾರ್ಡ ದಾಖಲೆ ಮಾಡುತ್ತಾರೆ.

ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಪ್ರತಿಭೆ ತೋರಿಸಿ ಸಾಧನೆ ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿದ್ದಾಗ ಶಾಲೆಗೆ ಹೋಗದೆ ಮನೆಯಲ್ಲಿಯೇ ತಂದೆ ತಾಯಿಯ ಸಹಕಾರದಲ್ಲಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!