- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗ್ರಾ. ಪಂ. ಉಪ ಚುನಾವಣೆ: ಅವಿರೋಧ ಆಯ್ಕೆ, ಚುನಾವಣೆ ತಡೆ. ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

ಗ್ರಾ. ಪಂ. ಉಪ ಚುನಾವಣೆ: ಅವಿರೋಧ ಆಯ್ಕೆ, ಚುನಾವಣೆ ತಡೆ. ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

ವಿಜಯಪುರ: ವಿವಿಧ ಕಾರಣಗಳಿಂದ ತೆರವಾಗಿರುವ ವಿಜಯಪುರ ಜಿಲ್ಲೆಯ 6 ಗ್ರಾಮ ಪಂಚಾಯಿತಿಗಳ ಆರು ಸ್ಥಾನಗಳಿಗೆ ಉಪ ಚುನಾವಣೆ ನಿಗದಿಯಾಗಿದೆ.
ಅದರಂತೆ ಈ ಚುನಾವಣೆಯಲ್ಲಿ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಮೇ 13 ಕೊನೆಯ ದಿನವಾಗಿದ್ದು,  ಅಂತಿಮವಾಗಿ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮ ಪಂಚಾಯಿತಿಯ ಕತಕನಹಳ್ಳಿ 1 ಕ್ಷೇತ್ರಕ್ಕೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಪೈಕಿ ಒಬ್ಬರು ನಾಮಪತ್ರವನ್ನು ಹಿಂಪಡೆದಿದ್ದು ಮೂವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಆಲಮೇಲ್ ತಾಲೂಕಿನ ಕಡಣಿ ಗ್ರಾಮ ಪಂಚಾಯಿತಿಯ ತಾರಾಪುರ 1 ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಒಬ್ಬರು ನಾಮಪತ್ರ ಹಿಂಪಡೆದಿದ್ದು ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.


ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತಿಯ ಬೋರಾಗಿ 1 ಕ್ಷೇತ್ರಕ್ಕೆ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಇಬ್ಬರು ನಾಮಪತ್ರ ಹಿಂಪಡೆದಿದ್ದು ಅಂತಿಮವಾಗಿ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮ ಪಂಚಾಯಿತಿಯ ಚಟ್ನಿಹಳ್ಳಿ ಮತ್ತು ಆನೆಮಡು 1 ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದು, ಈ ಪೈಕಿ ಒಬ್ಬರು ನಾಮಪತ್ರ ಹಿಂಪಡೆದಿದ್ದು ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅವಿರೋಧ ಆಯ್ಕೆ, ಚುನಾವಣೆ ತಡೆ: ಆಲಮೇಲ್ ತಾಲೂಕಿನ ದೇವಣಗಾಂವ್ ಗ್ರಾಮ ಪಂಚಾಯಿತಿ ಕಡ್ಲೆವಾಡ 1 ಕ್ಷೇತ್ರಕ್ಕೆ ಒಬ್ಬರು ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ. ಅದೇ ರೀತಿ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮ ಪಂಚಾಯಿತಿಯ ಅಲಿಯಾಬಾದ್ ಎಲ್‌ಟಿ 1 ಸ್ಥಾನಕ್ಕೆ ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಚುನಾವಣೆಯನ್ನು ತಡೆಹಿಡಿಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!