- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಾಳೆ ಆಲಮಟ್ಟಿಗೆ ರಾಜ್ಯಪಾಲರ ಆಗಮನ: ಡಿ.ಸಿ, ಎಸ್ಪಿಯಿಂದ ಸಿದ್ಧತೆ ಪರಿಶೀಲನೆ

ನಾಳೆ ಆಲಮಟ್ಟಿಗೆ ರಾಜ್ಯಪಾಲರ ಆಗಮನ: ಡಿ.ಸಿ, ಎಸ್ಪಿಯಿಂದ ಸಿದ್ಧತೆ ಪರಿಶೀಲನೆ

ವಿಜಯಪುರ: ಕರ್ನಾಟಕ ರಾಜ್ಯದ ಗೌರವಾನ್ವ್ವಿತ ರಾಜ್ಯಪಾಲರಾದ ಥಾವರ್ ಚೆಂದ ಗೆಹ್ಲೂಟ್ ಅವರು ನಾಳೆ ಮೇ.24 ರಂದು ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್. ಡಿ. ಆನಂದಕುಮಾರ ಅವರು ಮೇ 22ರಂದು ಆಲಮಟ್ಟಿಗೆ ತೆರಳಿ ಸಿದ್ಧತೆಯನ್ನು ಪರಿಶೀಲಿಸಿದರು.

ಬಾಗಲಕೋಟೆ ಜಿಲ್ಲೆಯ ತೋಟಗಾರಿಕಾ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರು ಮೇ.24 ಮತ್ತು ಮೇ. 25ರಂದು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಮೇ 24ರಂದು ರಾಜ್ಯಪಾಲರು ಬೆಂಗಳೂರಿನಿಂದ ವಾಯುಮಾರ್ಗವಾಗಿ ಹೊರಟು ಹುಬ್ಬಳ್ಳಿ ವಾಯುನೆಲೆಗೆ ಆಗಮಿಸುವರು. ಬಳಿಕ ಅಲ್ಲಿಂದ ಆಲಮಟ್ಟಿಗೆ ಆಗಮಿಸಿ ಆಲಮಟ್ಟಿ ಜಲಾಶಯದ ವೀಕ್ಷಣೆ ನಡೆಸುವರು. ಬಳಿಕ ಆಲಮಟ್ಟಿಯ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.


ಮೇ 25ರಂದು ಬೆಳಗ್ಗೆ ಆಲಮಟ್ಟಿಯಿಂದ ಕೂಡಲಸಂಗಮಕ್ಕೆ ತೆರಳಿ, ಅಲ್ಲಿಂದ ಬಾಗಲಕೋಟಗೆ ಪ್ರಯಾಣಿಸಿ ಬಳಿಕ ಅದೇ ದಿನ ನಡೆಯುವ ತೋಟಗಾರಿಕಾ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗುವರು ಎಂದು ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಪೂರ್ವನಿಗದಿಯಂತೆ ರಾಜ್ಯಪಾಲರ ಭೇಟಿ ದಿನದಂದು ಶಿಷ್ಠಾಚಾರದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ತಹಸೀಲ್ದಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ರಾಜ್ಯಪಾಲರ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ವ್ಯವಸ್ಥೆ ಮಾಡಲಾಗುವುದು ಎಂದು ಇದೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!