- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜ್ಯುವೆಲರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಟೋಟ

ಜ್ಯುವೆಲರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಟೋಟ

ಕೊಲ್ಹಾರ (Kolhar) : ಜ್ಯುವೆಲರಿ ಅಂಗಡಿಯಲ್ಲಿ ಬಳಸಲಾಗುವ ಚಿಕ್ಕ ಗ್ಯಾಸ್ ಸಿಲಿಂಡರ್ ಸ್ಟೋಟಗೊಂಡ (Gas cylinder blast) ಪರಿಣಾಮ ಅಂಗಡಿಯಲ್ಲಿ ಚಿನ್ನಾಭರಣ, ಟಿವಿ, ಎಸಿ, ಪೀಠೋಪಕರಣ ಸಹಿತ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಅಪಾರ ಪ್ರಮಾಣದ ನಷ್ಟವುಂಟಾದ ಘಟನೆ ಪಟ್ಟಣದ ವಿವೇಕಾನಂದ ವೃತ್ತದ ಬಳಿಯ ಹುಚ್ಚಪ್ಪಗೋಳ ಕಾಂಪ್ಲೆಕ್ಸ್ ನಲ್ಲಿರುವ ವೈಷ್ಣವಿ ಜ್ಯುವೆಲರಿ (jewellery shop) ಅಂಗಡಿಯಲ್ಲಿ ಸಂಭವಿಸಿದೆ.

ಬಳೂತಿ ಗ್ರಾಮದ ಮೌನೇಶ್  ಬಡಿಗೇರ್ ಅವರಿಗೆ ಸೇರಿದ ಜ್ಯುವೆಲರಿ ಅಂಗಡಿ. ಚಿನ್ನಾಭರಣ  ವಿನ್ಯಾಸಕ್ಕೆ ಕಾಯಿಸಲು ಬಳಸಲಾಗುವ ಚಿಕ್ಕ ಗ್ಯಾಸ್ ಸಿಲಿಂಡರ್ ಸ್ಟೋಟಗೊಂಡ (Gas cylinder blast)ಪರಿಣಾಮ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಎಸಿಗೂ ತಾಗಿ, ಎಸಿ ಸಹ ಸ್ಟೋಟಗೊಂಡಿದೆ. ಇದರಿಂದ ಅಗ್ನಿ ಪ್ರಮಾಣ ಹೆಚ್ಚಾಗಿ ಅಂಗಡಿಯಲಿದ್ದ  ಚಿನ್ನಾಭರಣ, ಟಿವಿ, ವುಡ್ ವರ್ಕ್, ಪೀಠೋಪಕರಣಗಳು ಸುಟ್ಟು ಅಪಾರ ಪ್ರಮಾಣದ ನಷ್ಟವುಂಟಾಗಿದೆ.

ಅಗ್ನಿ ಸಂಭವಿಸಿದ ಕೂಡಲೇ ಪಕ್ಕದ ಡಿಸಿಸಿ ಬ್ಯಾಂಕಿನ ಸಿಬ್ಬಂದಿ, ಮಾಜಿ ಸೈನಿಕ ಸದಾನಂದ ಗಣಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಮಾಹಿತಿ ತಿಳಿಯುತ್ತಿದ್ದದಂತೆ ಕೂಡಲೇ ಬೀಳಗಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನಾಸ್ಥಳಕ್ಕೆ ಪಿಎಸ್ಐ ಪ್ರೀತಂ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!