- Advertisement -Newspaper WordPress Theme
ಹೋರಾಟ ವೀರರುಕ್ರಾಂತಿ ನುಡಿಗಳ ವೀರ ಗಂಗಾಧರರಾವ್ ದೇಶಪಾಂಡೆ

ಕ್ರಾಂತಿ ನುಡಿಗಳ ವೀರ ಗಂಗಾಧರರಾವ್ ದೇಶಪಾಂಡೆ

ಮೂಲತಹ ಕರ್ನಾಟಕದ ಬೆಳಗಾವಿ ಜಿಲ್ಲೆಯವರಾದ ಗಂಗಾಧರ ರಾವ್ ದೇಶಪಾಂಡೆ (Gangadhara Rao Deshapande) ಅವರು ಬಾಲಗಂಗಾಧರ ತಿಲಕರ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟ ಗಾರರನ್ನಾಗಿ ಮಾಡಿತು. ತಿಲಕರ ಆದೇಶದಂತೆ ಇವರು ಕರ್ನಾಟಕ ಕಾಂಗ್ರೆಸ್ಸಿನ ಕಾರ್ಯಕರ್ತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.

ತಮ್ಮ ಭಾಷಣದಲ್ಲಿ ಕ್ರಾಂತಿ ನುಡಿಗಳನ್ನುಹೇಳುವುದರ ಮೂಲಕ ಜನರಲ್ಲಿ ದೇಶಭಕ್ತಿಯ ಕಿಚ್ಚು ಬೆಳೆಯುವಂತೆ ಮಾಡುತ್ತಿದ್ದರು. ಬೆಳಗಾವಿಯಲ್ಲಿ ಸ್ವದೇಶಿ ವಸ್ತು ಭಂಡಾರವನ್ನು, ಗಣೇಶ ವಿದ್ಯಾಲಯ ಎಂಬ ರಾಷ್ಟ್ರೀಯ ಶಾಲೆಯನ್ನು ಆರಂಭಿಸಿದ್ದರು. ನಂತರ ಇವರು ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.

ಮುಂದೆ ನವಲಗುಂದದಲ್ಲಿ ಭಾಷಣ ಮಾಡಿದ್ದ ಆರೋಪದ ಮೇಲೆ ಇವರನ್ನು ರಾಜದ್ರೋಹಿ ಎಂದು ಬ್ರಿಟಿಷ್ ಸರಕಾರ ಘೋಷಿಸಿ ಆರು ತಿಂಗಳ ಕಾಲ ಸೆರೆಮನೆವಾಸ ಅನುಭವಿಸುವಂತಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದ ದೀರ್ಘ ಇತಿಹಾಸದಲ್ಲಿ ಕರ್ನಾಟಕದ ಹೆಸರನ್ನು ಜೋಡಿಸಿದ ಕೀರ್ತಿ ದೇಶಪಾಂಡೆಯವರಿಗೆ (Gangadhara Rao Deshapande) ಸಲ್ಲುತ್ತದೆ. ‌

ಈ ಸುದ್ದಿಯನ್ನೂ ನೋಡಿ… ಮಸೀದಿಯಲ್ಲಿ ಮಂದಿರದ ಅವಶೇಷವಿರುವುದೇಕೆ ? ಇಲ್ಲಿದೆ ನೋಡಿ

ಸಮಾನತೆಯಲ್ಲಿ ರಾಷ್ಟ ಜಾಗೃತಿ ಮೂಡಿಸುತ್ತಾ ಅಹಿಂಸಾ ತತ್ವ, ಸ್ವದೇಶಿ ಚಳವಳಿ, ಖಾದಿವ್ರತ ಸೇರಿದಂತೆ ಅನೇಕ ರೀತಿಯಲ್ಲಿ ಶ್ರಮಿಸಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದ ಮೊದಲನೆಯ ಪ್ರತಿನಿಧಿಯಾಗಿ ಭಾಗವಹಿಸಿ ಬಂಧಿತರಾದರು.

ಹೀಗೆ ಅನೇಕ ರೀತಿಯ ಹೋರಾಟಗಳನ್ನು ನಡೆಸಿದ್ದ ಗಂಗಾಧರ ರಾವ್ (Gangadhara Rao Deshapande) ಅವರು ಸ್ವಾತಂತ್ರ್ಯ ದೊರಕಿದ ನಂತರ ಯಾವುದೇ ಅಧಿಕಾರಕ್ಕೆ ಆಸೆ ಪಡದೇ ತಮ್ಮ ವಿಧಾಯಕ ಕಾರ್ಯದಲ್ಲಿ ತೊಡಗಿದ್ದರು. ರಾನಡೆಯವರ ಅನುಯಾಯಿಯಾಗಿ ಆಧ್ಯಾತ್ಮಿಕ ಚಿಂತನೆಯಲ್ಲಿ ತಮ್ಮ ಕಡೆಯ ಜೀವನವನ್ನು ಸವೆಸಿ ತಮ್ಮ ದೇಶಭಕ್ತಿಯನ್ನು ತೋರಿದ್ದರು.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!