- Advertisement -Newspaper WordPress Theme
Exclusiveಗುಮ್ಮಟನಗರಿಯಲ್ಲೊಂದು ಗಾಂಧಿ ಕುಟುಂಬ..!

ಗುಮ್ಮಟನಗರಿಯಲ್ಲೊಂದು ಗಾಂಧಿ ಕುಟುಂಬ..!

ಅರೇರೆ..!.. ಇದೇನಿದು..!.. ರಾಷ್ಟ್ರಪಿತ “ಮಹಾತ್ಮಾ” ಗಾಂಧೀಜಿ “ಗುರುದೇವ” ಟ್ಯಾಗೋರ್, ಸೌಮ್ಯವಾದಿಗಳ ನೇತಾರ ಗೋಖಲೆ ಮತ್ತು “ಲೋಕಮಾನ್ಯ” ತಿಲಕರ ಕುಟುಂಬವೊಂದು ಬಸವ ನಾಡಿನಲ್ಲಿದೆ ಎಂದು ಅಚ್ಚರಿ ಪಡುತ್ತಿದ್ದೀರಾ..! ಹೌದು ಇದು ವಿಚಿತ್ರ ಅನಿಸಿದರೂ ಸತ್ಯ. ಈ ಎಲ್ಲ ರಾಷ್ಟ್ರೀಯ ನಾಯಕರ ಹೆಸರುಗಳನ್ನಿಟ್ಟುಕೊಂಡ ಕುಟುಂಬವೊಂದು (Vijayapura Gandhi) ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿದೆ. ಒಂದೇ ಪರಿವಾರದಲ್ಲಿ ತಂದೆ ಮತ್ತು ಇಬ್ಬರು ಮಕ್ಕಳ ಹೆಸರುಗಳು ಮಹಾನ್ ನಾಯಕರ ಹೆಸರಿನಲ್ಲಿವೆ.

ಸಾಮಾನ್ಯವಾಗಿ ಮಕ್ಕಳಿಗೆ ಪಾಲಕರು ತಮ್ಮ ಮೆಚ್ಚಿನ ಶರಣರ ಹೆಸರುಗಳು , ತಮ್ಮ ನೆಚ್ಚಿನ ಕ್ರಿಕೇಟರ್, ಸಿನಿಮಾ ತಾರೆಯರ ಹೆಸರುಗಳನ್ನು, ಅಲ್ಲೊಬ್ಬರೂ ಇಲ್ಲೊಬ್ಬರೂ ದೇಶಕ್ಕಾಗಿ ದುಡಿದ ಮಹಾತ್ಮರ ಹೆಸರುಗಳನ್ನು ಇಟ್ಟಿರುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಪಾಲಕರು ತಮ್ಮ ಇಬ್ಬರು ಮಕ್ಕಳಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾದ æಮಹಾತ್ಮಾ ಗಾಂಧೀಜಿ, ಶಾಂತಿಮಾರ್ಗದ ನಾಯಕರಾದ ಗೋಖಲೆ ತಿಲಕ್ ಹಾಗೂ ಗುರುದೇವ ಟ್ಯಾಗೋರ್ ಅವರ ಹೆಸರುಗಳನ್ನ ಇಟ್ಟಿದ್ದಾರೆ. ಅದರ ಜೊತೆಗೆ ತಮ್ಮ ಮೂಲ ಹೆಸರನ್ನೂ ಸಹ ಹಲವಾರು ವರ್ಷಗಳ ಹಿಂದೆಯೇ ನೇತಾಜಿ ಗಾಂಧಿ ಎಂದು ಬದಲಾಯಿಸಿಕೊಂಡಿದ್ದಾರೆ. (Vijayapura Gandhi) ಈ ಮೂಲಕ ಸ್ವಾತಂತ್ರ್ಯ ಸೇನಾನಿಗಳ ಹೆಸರನ್ನು ದಿನನಿತ್ಯ ಸ್ಮರಿಸಿಕೊಳ್ಳುತ್ತಿದ್ದಾರೆ.

ಇಷ್ಟೇ ಅಲ್ಲದೇ ಸ್ವಾತಂತ್ರ್ಯ ಸಂಗ್ರಾಮದ ಸುತ-ಪಿತರಾದ ಬಾಪೂಜಿ ಮತ್ತು ನೇತಾಜಿ ಅವರ ತತ್ವಾದರ್ಶಗಳನ್ನು 20013ರಿಂದ ತಾವು ಪ್ರಕಟಿಸುತ್ತಿರುವ “ಯಂಗ್ ಇಂಡಿಯಾ” ವಾರ ಪತ್ರಿಕೆಯ ಮೂಲಕ ಪ್ರಚುರ ಪಡಿಸುತ್ತಿದ್ದಾರೆ, ಅಲ್ಲದೇ, ಶಾಲೆ, ಕಾಲೇಜುಗಳಲ್ಲಿ ಪ್ರತಿ ತಿಂಗಳು ಭಾಷಣ, ರಸ ಪ್ರಶ್ನೆಯ ಸ್ಪರ್ಧೇಗಳನ್ನು ಎರ್ಪಡಿಸುವ ಮೂಲಕ ರಾಷ್ಟ್ರಪಿತ ಗಾಂಧೀಜಿ ಸೇರಿದಂತೆ ರಾಷ್ಟೀಯ ನಾಯಕರನ್ನು ನೆನಪಿಸಿಕೊಳ್ಳುತ್ತ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ರೈಲ್ವೆ ಸ್ಟೇಶನ್ ಗ್ರಾಮದವರಾದ ನೇತಾಜಿ ಗಾಂಧೀಜಿಯವರ ಬಯೋಡೈಟಾವನ್ನೊಮ್ಮೆ ನೋಡುತ್ತಾ ಹೋದರೆ, ಮಹಾತ್ಮಾ ಗಾಂಧೀಜಿ ಮೊದಲ್ಗೊಂಡು ನೂರಾರು ಹೋರಾಟಗಾರರು ಕಣ್ಮುಂದೆ ಬಂದು ಹೋಗುತ್ತಾರೆ. ನೂರಾರು ಸಾವಿರಾರು ಜನ ಹೋರಾಟಗಾರರಲ್ಲಿ ಬಾಪೂಜಿ ಮತ್ತು ನೇತಾಜಿಯವರನ್ನೇ ಯಾಕೆ ? ನೀವು ಆದರ್ಶವಾಗಿಟ್ಟುಕೊಂಡಿರಿ ಎಂದು ಕೇಳದರೆ, ಅವರ ಹೇಳುವುದು ಹೀಗೆ, ಮಹಾತ್ಮರ ನನ್ನ ತ್ಮವಾದರೆ, ನೇತಾಜಿ ನನ್ನ ರಕ್ತ ಮಾಂಸ.

ಮೋಹನ್ ದಾಸ್ ಅನ್ನುವ ಯಂಗ್ ಬ್ಯಾರಿಸ್ಟರ್ ತಮ್ಮ ನಿಸ್ವಾರ್ಥ ಹೋರಾಟದಿಂದ, ಸ್ವರಾಜ್ಯ ಸೂರ್ಯನಾಗಿ, ಸ್ವಾತಂತ್ರ್ಯ ಶಿಲ್ಪಿಯಾಗಿ, ಭರತ ಖಂಡಕ್ಕೆ ರಾಷ್ಟ್ರಪಿತನಾಗಿ, ಜಗತ್ತಿಗೆ ಮಹಾತ್ಮನಾಗಿ, ವಿಶ್ವಖ್ಯಾತಿ ಗಳಿಸಿದರೆ, ಐಸಿಎಸ್ ಓದಿದ ತರುಣ ಸುಭಾಸ, ಉದ್ಯೋಗ ಬಿಟ್ಟು ಭಾರತಕ್ಕೆ ಬಂದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಇಲ್ಲಿಂದ ವಿದೇಶಕ್ಕೆ ಹೋಗಿ, ಸೈನ್ಯ ಕಟ್ಟಿ ಬ್ರಿಟಿಷ್ ರೂಲ್ಡ್ ದ ಭಾರತದ ಮೇಲೆಯೇ ದಾಳಿ ಮಾಡಿದ್ದಲ್ಲದೇ ಗಾಂಧೀಜಿಯಿಂದಲೇ “ನೇತಾಜಿ” (Vijayapura Gandhi)ಎಂದು ಗೌರವ ಬಿರುದು ಪಡೆದುಕೊಂಡಿದ್ದು ಸಣ್ಣ ಮಾತಲ್ಲ. (೧೯೪೪ರಲ್ಲಿ ರಂಗೂನ್ ನಲ್ಲಿ ಗಾಂಧೀಜಿಯನ್ನು “ರಾಷ್ಟ್ರಪಿತ” ಎಂದು ಕರೆದು ಗೌರವಿಸಿದ್ದು ನೇತಾಜಿ ಬೋಸ್) ಅಲ್ಲದೇ, ಇವರಿಬ್ಬರಲ್ಲೂ ಮತ್ತೊಬ್ಬರ ನೋವಿಗೆ ಸ್ಪಂದಿಸುವ ಗುಣ ಇತ್ತು, ದೇಶದ ಬಗ್ಗೆ ಕಾಳಜಿ ಇತ್ತು, ಅಪಾರವಾದ ದೇಶಭಕ್ತಿಯಿತ್ತು. ಇಂತಹ ಅನೇಕ ಅನೇಕ ಕಾರಣಗಳಿಂದ ಈ ಸುತ-ಪಿತರು ನನಗೆ ಪ್ರೇರಣೆಯಾದರು ಎನ್ನುತ್ತಾರೆ.

ಸುಮಾರು ವರ್ಷಗಳ ಹಿಂದೆ ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡು ನೇತಾಜಿ ಗಾಂಧಿಯಾದ ಇವರು, ಕೇವಲ ಹೆಸರನ್ನು ಬದಲಾಯಿಸಿ ಕೊಂಡದ್ದಷ್ಟೆ ಅಲ್ಲದೇ ತಮ್ಮ ಹಾಗೂ ತಮ್ಮ ಮಕ್ಕಳ ಇಲೆಕ್ಷನ್ ಕಾರ್ಡ್, ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹೀಗೆ ಪ್ರತಿಯೊಂದು ದಾಖಲೆಗಳಲ್ಲೂ ಬದಲಾಯಿಸಿಕೊಂಡಿದ್ದಾರೆ. ಆತ್ಮ ತೃಪ್ತಿಗಾಗಿ ಬಾಪೂಜಿ ಹಾಗೂ ನೇತಾಜಿ ಅವರ ತತ್ವ ಸಿದ್ದಾಂತಗಳನ್ನು,ಅವರ ಮೌಲ್ಯಗಳನ್ನು ಕಾಲೇಜ್ ನಿಂದ ಕಾಲೇಜ್ ಗೆ ಹೋಗಿ, ಯಾವುದೇ ಫಲಾಪೇಕ್ಷ ಇಲ್ಲದೇ ಪ್ರಸಾರ ಮಾಡುತ್ತಿರುವ ಇವರು ದಶಕದ ಹಿಂದೆ ಸಮಾನ ಮನಸ್ಕರನ್ನು ಸೇರಿಕೊಂಡು ರಾಷ್ಟ್ರಪಿತ ಮಹಾತ್ಮ ಗಾಂಧಿ ಫಿಲಾಸಿಫಿಕಲ್ ಯೂಥ್ ಫೋರಂ” ಎನ್ನುವ ಯುವ ವೇದಿಕೆಯೊಂದನ್ನು ಹುಟ್ಟು ಹಾಕಿಕೊಂಡು ಪ್ರತಿ ತಿಂಗಳು ಶಾಲೆ ಕಾಲೇಜುಗಳಿಗೆ ತೆರಳಿ ಮಕ್ಕಳಲ್ಲಿ ಗಾಂಧೀಜಿ, ನೇತಾಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಬಾಲ್ಯ, ಜೀವನ, ಅವರ ಹೋರಾಟಗಳ ಕುರಿತಾಗಿ ರಸಪ್ರಶ್ನೆ ಹಾಗೂ ಪರೀಕ್ಷೆಗಳನ್ನು ಏರ್ಪಡಿಸಿ, ಉಪನ್ಯಾಸ ನೀಡಿ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರಗಳು, ಸ್ಮರಣಿಕೆಗಳು, ಪುಸ್ತಕಗಳು ಹಾಗೂ ಬಹುಮಾನವನ್ನು ವಿತರಿಸುತ್ತಾರೆ.

ಈ ಸುದ್ದಿಯನ್ನೂ ನೋಡಿ… ಸುಭಾಸ್‌ ಚದ್ರ ಬೋಸ್

ಇಲ್ಲಿಯವರೆಗೆ ಸುಮಾರು ೪೭ ಕಾಲೇಜುಗಳಲ್ಲಿ 1೮ ಹೈಸ್ಕೂಲ್ ಗಳು, ೪ ಪ್ರಾಥಮಿಕ ಶಾಲೆಗಳಲ್ಲಿ ಅಂದಾಜು ೧೮ ಸಾವಿರ ೬೦೦ ಮಕ್ಕಳಿಗೆ ಮುಖಾಮುಖಿ ಯಾಗಿ ಮಹಾತ್ಮಾಜಿ ಕುರಿತಾದ ಉಪನ್ಯಾಸ ನೀಡಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಗಾಂಧೀಜಿಯವರ ಹೋರಾಟದ ವಿವಿಧ ಮಜಲುಗಳನ್ನು ಬಿಂಬಿಸುವ ಭಾವಚಿತ್ರಗಳನ್ನು ಪ್ರದರ್ಶನ ಹಮ್ಮಿಕೊಳ್ಳುತ್ತಾರೆ. ಅಲ್ಲಿ ರಾಷ್ಟ್ರಪಿತ ಗಾಂಧೀಜಿ ಹಾಗೂ ಬೋಸ್ ನೇತಾಜಿ, ತಿಲಕ್, ಪಟೇಲ್, ನೆಹರೂ,ಆಜಾದ್ ಸರೋಜಿನಿ ನಾಯ್ಡು, ಕಸ್ತೂರ್ ಬಾ ಗಾಂಧಿ, ಅರುಣಾ ಆಸಫ್ ಅಲಿ ಹೀಗೆ ನೂರಾರು ಮಹಾನ್ ನಾಯಕರ ತತ್ವ – ಸಿದ್ಧಾಂತಗಳನ್ನು ಹೇಳಿ ಆ ಮಹಾನ್ ಚೇತನಗಳ ಮೌಲ್ಯಗಳನ್ನು ಬಿತ್ತರಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಅಂದು ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಹೊರಬರುತ್ತಿದ್ದ “ಯಂಗ್ ಇಂಡಿಯಾ ” ಜರ್ನಲ್ ನ್ನು ಇಂದು ಈ ನೇತಾಜಿ ಗಾಂಧಿ ಪ್ರಕಟಿಸುತ್ತಿದ್ದಾರೆ. ಇವರ ಒಂದು ಸಿದ್ದಾಂತ ವೆಂದರೆ, ಈ ಜರ್ನಲ್ ಗೆ ಯಾವುದೇ ಜಾಹೀರಾತು ತೆಗೆದುಕೊಳ್ಳುವುದಿಲ್ಲ. ಎದುರಿಗೆ ಸಿಕ್ಕವರಿಗ ಫ್ರೀಯಾಗಿ ನೀಡುತ್ತಾರೆ ಅಲ್ಲದೇ ಜರ್ನಲ್ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಪೋಸ್ಟ್ ಮುಖಾಂತರತಲುಪಿಸುವ ಕಾರ್ಯ ಮಾಡುತ್ತಾರೆ. ದಶಕದಿಂದಾಚೆಗೆ ಬೊಕ್ಕ Àಲೆಯಲ್ಲಿ ಕಾಣಿಸಿಕೊಳ್ಳುವ ಇವರು ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು, ಸದಾ ಖಾದಿ ಬಟ್ಟೆ ಧರಿಸಿಕೊಂಡು ಹೊರಡುವ ವರು, ಮುಖತಃ ಭೇಟಿಯಾದ ತ್ಮೀಯರೊಂದಿಗೆ ಬಾಪೂ ಅವರ ತತ್ವಗಳನ್ನು ಅವರ ಹೋರಾಟಗಳ ಮಜಲುಗಳನ್ನು ತಿಳಿಸುತ್ತಾ ಹೋಗುತ್ತಾರೆ.

ಲೋಕಪ್ರಿಯ ನಾಯಕ , ವಿಶ್ವವಂದ್ಯ ನಾಯಕ, ಮಹಾತ್ಮಾ ಯವರ ತತ್ವ ಸಿದ್ದಾಂತಗಳು ಭರತ ವರ್ಷಕ್ಕಷ್ಟೆ ಅಲ್ಲದೇ ಇಡೀ ಮನುಕುಲಕ್ಕೆ ಅತಿ ಅವಶ್ಯಕವಾಗಿವೆ ಇವರು ಮಹಾಪುರುಷರ ಹೆಸರುಗಳನ್ನು ಕೇವಲ ಶೋಕಿಗಾಗಿ ಇಟ್ಟುಕೊಳ್ಳದೇ, ಆತ್ಮ ತೃಪ್ತಿಗಾಗಿ, ನೈತಿಕ ಬದುಕಿಗಾಗಿ, ಸಾತ್ವಿಕ ಶಕ್ತಿಗಾಗಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ. ಇವರು ಪ್ರತಿ ವರ್ಷ ಮಾರ್ಚ್, ಎಪ್ರೀಲ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ದೇಶ ಸಂಚಾರ ಮಾಡುವ ನೇತಾಜಿ ಗಾಂಧಿ ಭಾರತದಲ್ಲಿ ಬಾಪೂಜಿಯ ಹೆಜ್ಜೆ ಗುರುತುಗಳು ಎಲ್ಲೆಲ್ಲಿವೆಯೋ ಅಲ್ಲಿಗೆ ಹೋಗಿ ಬರುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಆ ಸ್ಥಳದ ಮಾಹಿತಿ ಮಹತ್ವದ ಬಗ್ಗೆ ಬರೆದು ತಿಳಿಸುತ್ತಾರೆ. ಬಾಪೂಜಿ ಜನ್ಮ ಸ್ಥಳ ಪೋರ್ ಬಂದರ್, ಸಬರಮತಿ ಆಶ್ರಮ, ಐತಿಹಾಸಿಕ ದಾಂಡಿ ಸಮುದ್ರ ತೀರ, ಕರಾಡಿ ಜೋಪಡಿ, ನವಸಾರಿಯ ಉಪ್ಪಿನ ಸತ್ಯಾಗ್ರಹ, ಬಟ್ಟೆ ಕಳಚಿ ಅರೆಬೆತ್ತಲೆ ಫಕೀರನಾದ ಮಧುರೈನ ಮನೆ, ಹರಿಜನರಿಗೆ ದೇವಾಲಯ ಪ್ರವೇಶ ಮಾಡಿಸಿದ ಮೀನಾಕ್ಷಿ ಟೆಂಪಲ್,ಅಲ್ಲದೇ ಕರ್ನಾಟಕದಲ್ಲಿ ಬಾಪೂಜಿ ಭೇಟಿಕೊಟ್ಟ ವಿವಿಧ ಸ್ಥಳಗಳ ಭಾವಚಿತ್ರಗಳು ಇವರ ಅಲ್ಬಮ್ ನಲ್ಲಿ ಸಂಗ್ರಹಗೊಂಡಿವೆ. ಸುಮಾರು ೨ ದಶಕಗಳಿಂದ ಫ್ರೀಲ್ಯಾನ್ಸ್ ಜರ್ನಲಿಸ್ಟ್ ನಾಗಿರುವ ನೇತಾಜಿ ಗಾಂಧಿ (Vijayapura Gandhi) ಪತ್ರಿಕೋದ್ಯಮ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರು ಆಗಿದ್ದಾರೆ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!