- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗಜಾನನ ಮಹಾಮಂಡಳಿಯಿಂದ ವಿಶಿಷ್ಟ ಕಾರ್ಯ

ಗಜಾನನ ಮಹಾಮಂಡಳಿಯಿಂದ ವಿಶಿಷ್ಟ ಕಾರ್ಯ

ವಿಜಯಪುರ: ಜ್ಞಾನ ನಗರಿ ವಿಜಯಪುರದಲ್ಲಿ (Vijayapura), ಕಳೆದ ಎರಡು ವರ್ಷದಿಂದ ಕೋವಿಡ್ ನಿಂದಾಗಿ, ಕಳೆಗುಂದಿದ್ದ ಗಣೇಶ ಹಬ್ಬವು (Gajanana utsav Mahamandali), ಈ ಬಾರಿ ಸಂಭ್ರಮ ಮನೆ ಮಾಡಿದೆ.

ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ವಿಜಯಪುರದ ಗಜಾನನ ಮಹಾ ಮಂಡಳಿ ವಿಶಿಷ್ಟ ಕೆಲಸ ಮಾಡಿದೆ. ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ (Appasaheb Pattanashetti) ನೇತೃತ್ವದಲ್ಲಿ ಉಚಿತವಾಗಿ ಮಣ್ಣಿನ ಗಣಪತಿ ನೀಡಲಾಗಿದೆ. ನಗರದ ಗ್ಯಾಂಗ್ ಬಾವಡಿ ಹಾಗೂ ಲವಂಗಿ ಮಠದ ಆವರಣದಲ್ಲಿ ಉಚಿತವಾಗಿ ಗಣೇಶ ವಿತರಣೆ ಮಾಡಲಾಯಿತು.

1500 ಚಿಕ್ಕ ಗಾತ್ರದ ಹಾಗೂ ಸುಮಾರು 200 ದೊಡ್ಡ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಗಣೇಶ ಮೂರ್ತಿ ವಿತರಣೆ ಮಾಡಲಾಗಿತ್ತು. ಆದರೆ ಈ ವರ್ಷ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿರುವ ಕಾರಣ ಹೆಚ್ಚಿನ ಗಣೇಶ ಮೂರ್ತಿ ವಿತರಿಸಲಾಯಿತು.

ಪರಿಸರ ಸಂರಕ್ಷಣೆ ಉದ್ದೇಶದಿಂದ ಸಂಪೂರ್ಣವಾಗಿ ಮಣ್ಣಿನ ಗಣಪತಿಗಳನ್ನು ನೀಡಿದ್ದು, ಜನರು ಸಹ ಮಣ್ಣಿನ ಮೂರ್ತಿ ಪಡೆಯಲು ಹೆಚ್ಚಿನ ಆಸಕ್ತಿ ವಹಿಸಿದ್ದರು. (Gajanana utsav Mahamandali) ಕೆಲವರು ಮಣ್ಣಿನ ಗಣಪತಿ ‌ಪಡೆದು ತಮ್ಮ ಕೈಲಾದಷ್ಟು ಹಣವನ್ನು ಹುಂಡಿಗೆ ಹಾಕಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!