- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಟ್ಟಗಿ ಗ್ರಾಮದಲ್ಲಿ ಯೋಧ ಮಂಜುನಾಥ ಅಂತ್ಯಕ್ರಿಯೆ

ಜಟ್ಟಗಿ ಗ್ರಾಮದಲ್ಲಿ ಯೋಧ ಮಂಜುನಾಥ ಅಂತ್ಯಕ್ರಿಯೆ

ಮುದ್ದೇಬಿಹಾಳ : ದೇಶದ ರಾಜಧಾನಿ ದೆಹಲಿಯ ಮಿರಟ್ ಬಳಿ ಇರುವ ಎಂಇಜಿ ಯೂನಿಟ್-9 ರ ಭಾರತೀಯ ಸೇನಾ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಜಟ್ಟಗಿ ಗ್ರಾಮದ ಯೋಧ ಮಂಜುನಾಥ ಯಲ್ಲಪ್ಪ ಹೂಗಾರ ಅಂತ್ಯಕ್ರಿಯೆ ಕುಟುಂಬದವರು, ಅಪಾರ ಗ್ರಾಮಸ್ಥರ ಮಧ್ಯೆ ಮಂಗಳವಾರ ಸ್ವಗ್ರಾಮ ಜಟ್ಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.

 ಸಾಮಾನ್ಯವಾಗಿ ಕರ್ತವ್ಯ ನಿರತ ಸಂದರ್ಭದಲ್ಲಿ ಯೋಧರು ಸಾವನ್ನಪ್ಪಿದರೆ ಪಾಲಿಸುವ ಸರ್ಕಾರಿ ಶಿಷ್ಟಾಚಾರದ ಗೌರವ ಮಂಜುನಾಥಗೆ ನೀಡಲಿಲ್ಲ. ಇದು ದೇಶಭಕ್ತರ ಅಸಮಾಧಾನಕ್ಕೆ ಕಾರಣವಾಯಿತು.

https://gadinaadakranti.com/muddebihas-soldier-commits-suicide-in-army-camp/

ಯೋಧ ಮಂಜುನಾಥನ ಪಾರ್ಥೀವ ಶರೀರವನ್ನು ದೆಹಲಿಯಿಂದ ವಿಮಾನದ ಮೂಲಕ ಪುಣೆಗೆ ತಂದು ಅಲ್ಲಿಂದ ಅಂಬ್ಯುಲೆನ್ಸ್ನಲ್ಲಿ ರಸ್ತೆ ಮಾರ್ಗದ ಮೂಲಕ ಮುದ್ದೇಬಿಹಾಳದ ಸೈನಿಕ ಮೈದಾನಕ್ಕೆ ತರಲಾಯಿತು. ಅಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಯಿತು.

 ಈ ವೇಳೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಇಓ ಎಸ್. ವಾಯ್. ಹೊಕ್ರಾಣಿ, ಪಿಎಸೈ ರೇಣುಕಾ ಜಕನೂರ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯೆ ಸಹನಾ ಬಡಿಗೇರ, ಢವಳಿ ಉಪ ತಹಸೀಲ್ದಾರ್ ಎಸ್.ಡಿ. ಭಾವಿಕಟ್ಟಿ ಪುಷ್ಪಮಾಲೆ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

https://gadinaadakranti.com/deshakhadhis-who-built-the-pit-of-martyrdom-in-basavanad/

ವಾಗ್ವಾದ: ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಶವವನ್ನು ಸೈನಿಕ ಮೈದಾನಕ್ಕೆ ತರಬಾರದು ಎಂದು ಯಾರೋ ಒಬ್ಬರು ಹೇಳಿದ್ದಾರೆಂದು ಮಾಜಿ ಸೈನಿಕ ಸಂಘದ ವ್ಯಕ್ತಿಯೊಬ್ಬ ಹಬ್ಬಿಸಿದ ಸುದ್ದಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಇದು ಕೆಲವರ ಮಧ್ಯೆ ಬಿರುಸಿನ ಮಾತಿನ ಚಕಮಕಿಗೆ ಕಾರಣವಾಯಿತು. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡು ಯೋಧನ ಪಾರ್ಥೀವ ಶರೀರ ಇದ್ದ ಅಂಬ್ಯುಲೆನ್ಸ್ ವಾಹನ ಜಟ್ಟಗಿ ಗ್ರಾಮದತ್ತ ತೆರಳಿತು. ಒಂದು ಹಂತದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕ ಧಿಕ್ಕಾರ ಎಂದು ಕೂಗಿದ್ದರಿಂದ ಕೋಪಗೊಂಡ ಪಿಎಸೈ ಆತನನ್ನು ತಳ್ಳಿದರಲ್ಲದೇ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!