- Advertisement -Newspaper WordPress Theme
ಹೋರಾಟ ವೀರರುಮುಗಿಲ ಮರೆಯ ಮಿಂಚು… ಸ್ವಾತಂತ್ರ್ಯ ವೀರ ಸಿದ್ರಾಮಪ್ಪ ವಾಲಿ

ಮುಗಿಲ ಮರೆಯ ಮಿಂಚು… ಸ್ವಾತಂತ್ರ್ಯ ವೀರ ಸಿದ್ರಾಮಪ್ಪ ವಾಲಿ

ಭಾರತವನ್ನ ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರಗೊಳಿಸಲು ಸ್ವತಂತ್ರ ಹೋರಾಟಗಾರರು ನಿರಂತರ ಹೋರಾಟ, ಸಂಘಟನೆ ಮಾಡುತ್ತಲೇ ಬಂದರು Siddharamappa Vali. ಭಾರತದಲ್ಲಿ ಅಸಖ್ಯಾಂತ ಜನ ಹೋರಾಟಗಾರರು ದೇಶದ ತುಂಬೆಲ್ಲ ಬ್ರಿಟಿಷರನ್ನು ಭಾರತದಿಂದ ಹೊರ ಹಾಕಲು ಶಸ್ತ್ರಯುದ್ಧ, ಅಹಿಂಸಾ ಮಾರ್ಗ, ಉಪವಾಸ ಸತ್ಯಾಗ್ರಹ ಮುಂತಾದ ಚಳುವಳಿಗಳನ್ನು ಮಾಡುತ್ತ ಜೈಲು ಶಿಕ್ಷೆ ಅನುಭವಿಸಿ ತಮ್ಮ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳುವಳಿ ಪ್ರಾರಂಭಗೊಂಡಿದ್ದು 1857 ರಿಂದ 1947 ಅಗಸ್ಟ ವರೆಗೆ ಆಂಗ್ಲರ ದಬ್ಬಾಳಿಕೆಯ ವಿರುದ್ದ ಸಿಪಾಯಿದಂಗೆ, ಭಾರತಬಿಟ್ಟು ತೊಲಗಿ, ಆಮರಣ ಉಪವಾಸ ಚಳುವಳಿ, ವಿವಿಧ ಸಂಘ-ಸಂಸ್ಥೆಗಳ ಚಳುವಳಿ ಹೀಗೆ ದೇಶದ ತುಂಬೆಲ್ಲ ನಿರಂತರ ಹೋರಾಟ ನಡೆಯುತ್ತಲೇ ಇರುವಾಗ 1900ರ ಹೊತ್ತಿಗೆ ದೇಶಾದ್ಯಂತ ಭಾರತೀಯರು ರಾಷ್ಟ್ರ ಪ್ರೇಮದ ಅರಿವು ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ, ಬಲಿದಾನಗಳನ್ನು ಮಾಡುತ್ತಲೇ ಬಂದಿದ್ದರು.

ಸ್ವತಂತ್ರ ಹೋರಾಟದ ಕೆಲ ಮಹತ್ವದ ಮೈಲಿಗಲ್ಲುಗಳನ್ನು ಇಲ್ಲಿ ಸ್ಮರಿಸಿಕೊಳ್ಳವುದು ತುಂಬಾ ಉಪಯುಕ್ತ ಅವುಗಳೆಂದರೆ 1) 1857-58 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 2) 1877 ಬ್ರಿಟನಿನ ರಾಣಿ ವಿಕ್ಟೋರಿಯಾ ಭಾರತದ ಸಾಮ್ರಾಜ್ಞ ಎಂದು ಘೋಷಣೆ 3) 1985 ಭಾರತೀಯ ರಾಷ್ಟ್ರೀಯ ಕಾಂಗ್ರೇಸ ಉದಯ 4) 1911 ಭಾರತದ ರಾಜಧಾನಿ ಕೊಲ್ಕತ್ತಾದಿಂದ ದೆಹಲಿಗೆ ಬದಲಾವಣೆ 5) 1914 ಪ್ರಪಂಚದ ಮೊದಲನೇ ಮಹಾಯುದ್ದ 6) 1920 ಅಸಹಕಾರ ಚಳುವಳಿ ಪ್ರಾರಂಭ, ವಿದೇಶಿ ವಸ್ತುಗಳ ಬಹಿಷ್ಕಾರ 7) 1930 ಉಪ್ಪಿನ ಸತ್ಯಾಗ್ರಹ, ಮೊದಲ ದುಂಡು ಮೇಜಿನ ಪರಿಷತ್ತು 8) ಪ್ರಪಂಚದ ಎರಡನೇ ಮಹಾಯುದ್ದ 1939-45 9) 1947 ಮೌಂಟ ಬ್ಯಾಟನ ಭಾರತದ ವೈಸರಾಯ, ಭಾರತ ವಿಭಜನೆ, ಪಾಕಿಸ್ತಾನ ಸ್ಥಾಪನೆ.

ಈ ಸುದ್ದಿಯನ್ನೂ ನೋಡಿ… ಸುಭಾಸ್‌ ಚದ್ರ ಬೋಸ್

ಬ್ರಿಟಿಷರ ಆಕ್ರಮಣ ಕಾಲದಿಂದಲೇ ಭಾರತೀಯ ಸ್ವತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅದರಲ್ಲಿ ಮೊದಲನೇ ಯದಾಗಿ ಹೈದರ ಅಲಿ ಮತ್ತು ಟಿಪ್ಪು ಸುಲ್ತಾನ. ನಂತರದಲ್ಲಿ ಕಿತ್ತೂರಾಣಿ, ಸಂಗೊಳ್ಳಿ ರಾಯಣ್ಣ, ಬಾದಾಮಿ, ಹಲಗಲಿ, ಸುರಪುರ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾವ್, ಈಸೂರ್ ಪ್ರಕರಣ, ಬಿಜಾಪುರದ ಹೋರಾಟಗಾರರು ಭಾರತದ ಸ್ವತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಬಹುದು.

ಸ್ವಾತಂತ್ರ್ಯ ಹೋರಾಟಕ್ಕೆ ವಿಜಯಪುರ ಜಿಲ್ಲೆ ಕೊಡುಗೆ ಕೂಡ ಬಹಳಷ್ಟಿದೆ. ಜಿಲ್ಲೆಯ ಸಾಕಷ್ಟು ಜನ ಹೋರಾಟಗಾರರು ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ. ಇಂಡಿ ತಾಲೂಕಿನ ಅಥರ್ಗಾ ಗ್ರಾಮದವರಾದ ಸಿದ್ರಾಮಪ್ಪ ವಾಲಿ (Siddharamappa Vali) ಯವರು ಬ್ರಿಟಿಷರ ನಿದ್ದೆಗೆಡಿಸಿದ ಮಹಾನ ಚೇತಕ. ತಮ್ಮ 20ನೇಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ವೀರ. ಜೀವನ ನಿರ್ವಹಣೆಗೆ ಟೇಲರಿಂಗ್ ಹೇಳಿಕೊಡುತ್ತಿದ್ದರು. ಜೊತೆಗೆ ಬ್ರಿಟಿಷರ ವಿರುದ್ದ ಚಳುವಳಿ, ದಂಗೆ ಏಳುತ್ತಾ ಬ್ರಿಟಿಷರ ಪಾಲಿಗೆ ಸಂಹಸ್ವಪ್ನವಾಗಿದ್ದರು. ವಾಲಿಯವರು ತಮ್ಮ ಸ್ನೇಹಿತರೊಂದಿಗೆ ಕೂಡಿ ಬ್ರಿಟಿಷರಿಗೆ ತಕ್ಕ ಪಾಠಕಲಿಸಲು ಅವರು ಮಿಂಚನಾಳ ಸ್ಟೇಶನ್ ಹತ್ತಿರ ರೇಲ್ವೆ ಹಳ್ಳಿ ಕಿತ್ತಿ, ಪೋಸ್ಟ್ ಆಫೀಸ್ ಸುಟ್ಟು ಹಾಕಿದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಯಿತು. ವಾಲಿಯವರ ಬಂದನದ ವರೆಗೂ ಅಥರ್ಗಾ ಊರಲ್ಲಿ ಪೋಲೀಸ್ ಕಾವಲು ಹಾಕಲಾಯಿತು. ಸರಿ ಸುಮಾರು ತಿಂಗಳೇ ಕಳೆದರು ವಾಲಿಯವರು ಸಿಗಲೇ ಇಲ್ಲ. ಯಾಕೆಂದರೆ ಊರಿನ ಜನ ಅವರನ್ನು ರಕ್ಷಿಸುತ್ತಿತ್ತು. ಅಷ್ಟರ ಮಟ್ಟಿಗೆ ಊರ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಇವರ ಸ್ನೇಹಿತ ಮಲಕನಗೌಡ ಬಿರಾದಾರ ವಾಲಿಯವರ ಹೋರಾಟಕ್ಕೆ ಬೆಂಬಲ ಕೊಟ್ಟು ರಕ್ಷಣೆಗೈದವರು. ಸ್ವಾತಂತ್ರ್ಯ ಹೋರಾಟಗಾರರಿಗೆ ಅವರು ತಮ್ಮ ಮನೆಯಲ್ಲಿ ಊಟ, ವಸತಿ ಕೊಟ್ಟು ಹೋರಾಟಗಾರರಿಗೆ ಉತ್ಸಾಹ ತುಂಬುತ್ತಿದ್ದರು. ಗುಪ್ತ ಸಭೆಗಳು ಮಲಕನಗೌಡರ ಮನೆಯಲ್ಲಿಯೇ ನಡೆಯುತ್ತಿದ್ದವು. ಇವರ ಜೊತೆ 1, 2 , 3, 4, 5, ಇವರೆಲ್ಲ ಸದಾ ಸ್ವಾತ್ರಂತ್ರ್ಯ ಹೋರಾಟಕ್ಕೆ ನಿಂತ ವೀರ ಪುರುಷರು.

ವಾಲಿಯವರು (Siddharamappa Vali) ಗುಪ್ತವಾಗಿ ಬ್ರಿಟಿಷರ ವಿರುದ್ದ ಹೋರಾಟ ಮಾಡುತ್ತಾ ಊರಲ್ಲಿಯೇ ಬಂಧಿಸಲ್ಪಟ್ಟರು. 18 ತಿಂಗಳು ಜೈಲುವಾಸ ಅನುಭವಿಸಿ ವಾಲಿ ನಂತರದ ದಿನಗಳಲ್ಲಿ ಅಂಬವ್ವರನ್ನು ಮದುವೆಯಾಗಿ ಸಂಸಾರದ ಜವಾಬ್ದಾರಿಯ ಜೊತೆಗೆ ಹೋರಾಟ ಮಾಡುತ್ತಾ ದಿನಾಂಕ : 11-04-1993 ರಲ್ಲಿ ನಿಧನರಾದರು.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!