- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯರೈತರೇ ನಮಗೆ ರಾಜರು. ಕೃಷಿ ನಿರ್ದೇಶಕ ಯರಝೇರಿ

ರೈತರೇ ನಮಗೆ ರಾಜರು. ಕೃಷಿ ನಿರ್ದೇಶಕ ಯರಝೇರಿ

ಬಸವನಬಾಗೇವಾಡಿ: ರೈತರಿಗೆ ಕೃಷಿ ಪರಿಕರಗಳನ್ನು ಪೂರೈಸುವಲ್ಲಿ ಕೃತಕ ಅಭಾವ ಸೃಷ್ಠಿಯಾಗದ ರೀತಿಯಲ್ಲಿ ಕೃಷಿ ಪರಿಕರ (ರಸಗೊಬ್ಬರ) ಮಾರಾಟಗಾರರು ಗಮನ ಹರಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ಹೇಳಿದರು.

ಸ್ಥಳೀಯ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ರೈತರೇ ನಮಗೆಲ್ಲ ರಾಜರು. ಅವರು ಎಷ್ಟೇ ಸಿಟ್ಟಿನಿಂದ ಮಾತನಾಡಿದರೂ ನಾವು ಅವರೊಂದಿಗೆ ಸಹಿಷ್ಣುಭಾವನೆ ಅಕ್ಕರೆಯಿಂದ ಮಾತನಾಡಿ ಅವರಿಗೆ ಕೃಷಿ ಪರಿಕರಗಳನ್ನು ಪೂರೈಸುವಲ್ಲಿ ಮುಂದಾಗಬೇಕು. ಮೇ ತಿಂಗಳಲ್ಲಿ ಮಳೆ ಪ್ರಾರಂಭವಾಗಿದ್ದು ಇನ್ನೊಂದು ಬಾರಿ ಈ ವಾರದಲ್ಲಿ ಉತ್ತಮ ಮಳೆಯಾದರೆ ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತಿದೆ. ರಸಗೊಬ್ಬರ, ಬೀಜ, ಕೀಟನಾಶಕ ಔಷಧಿಗಳನ್ನು ಪಡೆದ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಅಲ್ಲದೆ ಸರ್ಕಾರ ನಿಗಧಿಪಡಿಸಿದ ದರದಲ್ಲಿಯೇ ಕೃಷಿ ಪರಿಕರಗಳನ್ನು ಮಾರಾಟ ಮಾಡಿ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ದರ ಪಟ್ಟಿಯನ್ನು ಹಾಕಬೇಕು ಎಂದು ಸೂಚಿಸಿದರು.

ರೈತರಿಗೆ ಒತ್ತಾಯ ಪೂರಕವಾಗಿ ಒಂದೇ ಕಂಪನಿಯ ಬೀಜ ಖರೀದಿಸುವಂತೆ ಒತ್ತಡ ಹಾಕಬಾರದು, ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಬೇಕು, ರೈತರಿಂದ ಯಾವುದೇ ರೀತಿಯ ದೂರುಗಳು ಬರದಂತೆ ನೋಡಿಕೊಳ್ಳಬೇಕು, ರೈತರಿಂದ ಹೆಚ್ಚಿನ ದರ ಪಡೆಯುವುದು ಸೇರಿದಂತೆ ಯಾವುದಾದರು ದೂರುಗಳು ಬಂದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಅವಧಿ ಮೀರಿದ ಕ್ರೀಮಿನಾಶಕ ಔಷಧಿಗಳನ್ನು ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಇರಬಾರದು ಹಾಗೂ ಕಾನೂನು ಬಾಹಿರ ಅಕ್ರಮವಾಗಿ ದಾಸ್ತಾನುಗಳನ್ನು ಸಂಗ್ರಹಿಸದೇ ರೈತರ ಹಿತಕಾಪಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಚಿದಾನಂದ ಹಿರೇಮಠ, ರಸಗೊಬ್ಬರ ಮಾರಾಟಗಾರರಾದ ಬಸವರಾಜ ಬಾಗೇವಾಡಿ, ಶಿವಾನಂದ ಚಟ್ಟೇರ ಸೇರಿದಂತೆ ಅಖಂಡ ಬಸವನಬಾಗೇವಾಡಿ ತಾಲೂಕಿನ ಕೊಲ್ಹಾರ ನಿಡಗುಂದಿ ತಾಲೂಕು ರಸಗೊಬ್ಬರ ಮಾರಾಟಗಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!