- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮೈಸೂರಗೇನು ಕಮ್ಮಿ ಇಲ್ಲ ನಮ್ಮ ದಸರಾ ಉತ್ಸವ

ಮೈಸೂರಗೇನು ಕಮ್ಮಿ ಇಲ್ಲ ನಮ್ಮ ದಸರಾ ಉತ್ಸವ

ವಿಜಯಪುರ: ದಸರಾ (Dussehra in Vijayapura) ಎಂದಾಕ್ಷಣ ಹಲವರಿಗೆ ಮೈಸೂರು (Mysur) ಮಾತ್ರವೇ ನೆನಪಾಗಬಹುದು. ಆದರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ (Tamba) ಗ್ರಾಮದಲ್ಲಿ ಅದರಷ್ಟೇ ಸಂಭ್ರಮದಿಂದ ದಸರಾ ನಡೆಯುತ್ತದೆ.

ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದು ಈ ಭಾಗದಲ್ಲಿ ಪ್ರಸಿದ್ದಿಯಾಗಿದೆ. ತಾಂಬಾ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯೊಂದಿಗೆ ಸಾವಿರಾರು ಜನರ ಕಣ್ಮನ ಸೆಳೆಯಿತು.

More Read: ಗುಮ್ಮಟ ಆವರಣದಲ್ಲಿ ಸ್ವಚ್ಛತಾ ಪಕ್ವಾಡ

ತಾಂಬಾ ಗ್ರಾಮದ ಅಂಬಾಭವಾನಿ ಎಜುಕೇಷನ್ ಟ್ರಸ್ಟ್‌ ಹಾಗೂ ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ತಾಂಬಾದ ಸಾರ್ವಜನಿಕರ ಸಹಯೋಗದೊಂದಿಗೆ ಹಮ್ಮಿಕೊಂಡ ಉತ್ಸವದಲ್ಲಿ ನಾಡಿನ ಕಲಾ ತಂಡಗಳು ಭಾಗವಹಿಸಿದ್ದವು.

Watch Video:

ಉತ್ಸವದ ಅಂಗವಾಗಿ ಗ್ರಾಮದಲ್ಲಿ ನಾಡದೇವಿ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. 2001 ಮಂದಿ ಸುಮಂಗಲಿಯರು ಕುಂಭ ಹೊತ್ತು ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯರಿಂದ ಡೊಳ್ಳು ಕುಣಿತ, ನವಿಲು ಮತ್ತು ಕುದುರೆ ಕುಣಿತ, ಹೆಜ್ಜೆ ಮೇಳ, ಜಾನಪದ ನೃತ್ಯ ಹಾಗೂ ಸೃಷ್ಟಿ ಆರ್ಟ್ಸ್‌ ಯಕ್ಷಗಾನ, ಬ್ಯಾಂಡ್ ಕಂಪನಿ, ಬ್ಯಾಂಡ್‌ ವಾದನ, ಬೃಹತ್ ಉತ್ಸವ ಮೂರ್ತಿಗಳ ಪ್ರದರ್ಶನ, ಆನೆ, ಝೂಂಜ್ ಫಥಕ, ಡಿ.ಜೆ.ಸೌಂಡ್ ಸಿಸ್ಟಮ್ ಸಾರ್ವಜನಿಕರ ಗಮನ ಸೆಳೆದವು.

ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಕಾರ್ಯಕ್ರಮಕ್ಕೆ (Dussehra in Vijayapura) ಚಾಲನೆ ನೀಡಿದರು. ಶಾಸಕ ದೇವಾನಂದ ಚೌಹಾಣ್ ಸೇರಿದಂತೆ ಸ್ವಾಮೀಜಿಗಳು, ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಸಾಕ್ಷಿಯಾದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!