- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬೆಳೆ ಹಾನಿ ವಿಕ್ಷಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ

ಬೆಳೆ ಹಾನಿ ವಿಕ್ಷಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ

ವಿಜಯಪುರ: ಕಳೆದ ಒಂದು ವಾರದಿಂದ  ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳು ಹಾನಿಯಾದ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಕೋಲಾರ ತಾಲೂಕಿನ ಕೂಡಗಿಯ ಗ್ರಾಮದದಲ್ಲಿ ಈರುಳ್ಳಿ ಮತ್ತು ವಿಳ್ಯದೆಲೆ ಹಾಳಾದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ದಸ್ತಗೀರ್ ಮೋಮಿನಸಾಬ್, ಗುರುಬಾಯಿ ಗೋಪಾಲ ರಾಠೋಡ್ ಮತ್ತು ಮಹೆಬೂಬಸಾಬ ತಾಳಿಕೋಟೆ ರೈತರ ಜಮೀನುಗಳಲ್ಲಿ ಮಳೆಯಿಂದಾಗಿ ಈರುಳ್ಳಿ ಮತ್ತು ವಿಳ್ಯದೆಲೆ ಬೆಳೆಗಳು ಹಾಳಾಗಿರುವುದನ್ನು ವೀಕ್ಷಣೆ ನಡೆಸಿದರು.

ನಂತರ ನಿಡಗುಂದಿ ಪಟ್ಟಣಕ್ಕೆ ಭೇಟಿ ನೀಡಿ ಗೌತಮ ಬಸವರಾಜ ಕಲ್ಯಾಣಶೆಟ್ಟಿ ಅವರ ತೋಟದಲ್ಲಿ ಮಳೆಯಿಂದಾಗಿ ಟೊಮೆಟೋ ಮತ್ತು ಕಲ್ಲಗಂಡಿ ಬೆಳೆಹಾನಿಯನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕೋಲಾರ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಭೀಮಪ್ಪ ನಂದ್ಯಾಳ ಅವರು ತೋಟಗಾರಿಕಾ ಬೆಳೆಹಾನಿಯಾದ ಬಗ್ಗೆ ವಿವರಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಒಟ್ಟು 44.9 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಇದರಲ್ಲಿ ಮುಖ್ಯವಾಗಿ 23.60 ಹೆಕ್ಟೇರನಲ್ಲಿರುವ ಈರಳ್ಳಿ ಬೆಳೆ, 15 ಹೆಕ್ಟೇರ್‌ನಲ್ಲಿರುವ ವೀಳ್ಯದೆಲೆ, 6.5 ಹೆಕ್ಟೇರನಲ್ಲಿರುವ ಬಾಳೆ ಬೆಳೆಗಳು ಹಾನಿಯಾಗಿದೆ. ಈ ಬಗ್ಗೆ ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲಾಗಿದ್ದು ಕೂಡಲೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ, ಕೋಲಾರ ತಹಸೀಲ್ದಾರ ಎಸ್.ಡಿ.ಮುರಾಳ, ನಿಡಗುಂದಿ ತಹಸೀಲ್ದಾರ ಎಸ್.ಬಿ.ಕೂಡಲಗಿ ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!