- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮೇ 17 ಕ್ಕೆ ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರುಗಳ ಗುರುವಂದನಾ ಕಾರ್ಯಕ್ರಮ

ಮೇ 17 ಕ್ಕೆ ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರುಗಳ ಗುರುವಂದನಾ ಕಾರ್ಯಕ್ರಮ

ವಿಜಯಪುರ: ನಗರದ ವನಶ್ರೀ ಸಂಸ್ಥಾನಮಠ ಗಾಣಿಗ ಗುರುಪೀಠದ ಜಗದ್ಗುರುಗಳಾದ ಡಾ. ಜಯಬಸವ ಕುಮಾರ ಮಹಾಸ್ವಾಮಿಗಳವರ 43 ನೇ ಜನ್ಮದಿನದ ಪ್ರಯುಕ್ತ ಮೇ 17 ಮಂಗಳವಾರದಂದು ಶ್ರೀಮಠದಲ್ಲಿ ಪೂಜ್ಯರ “ಗುರುವಂದನಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ ತಿಳಿಸಿದರು.

ನಗರದ ವನಶ್ರೀ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30 ಕ್ಕೆ ಲಿಂ. ಜಯದೇವ ಜಗದ್ಗುರುಗಳ ಗದ್ದುಗೆಗೆ ಪೂಜೆ ನಡೆಯಲಿದ್ದು, ಬೆಳಿಗ್ಗೆ 8 ಕ್ಕೆ  ಇಷ್ಟಲಿಂಗಪೂಜೆ ಹಾಗೂ 201 ದಂಪತಿಗಳಿಗೆ ಲಿಂಗಧಾರಣೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಅಂಧ ಮಕ್ಕಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆಗಳು ನಡೆಯಲಿವೆ. ಅದೇ ದಿನ ಬೆಳಿಗ್ಗೆ 11 ಕ್ಕೆ ಡಾ.ಜಯಬಸವ ಕುಮಾರ ಜಗದ್ಗುರುಗಳಿಗೆ ಸದ್ಭಕ್ತರಿಂದ `ಗುರುವಂದನಾ’ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ,  ವೇಮನ ರೆಡ್ಡಿಪೀಠದ ವೇಮನಾನಂದ ಗುರುಗಳು, ಬೋವಿಪೀಠದ ಸಿದ್ದರಾಮೇಶ್ವರ ಸ್ವಾಮಿಗಳು,  ಸಿದ್ದಬಸವ ಕಬೀರ ಸ್ವಾಮಿಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಜಮಖಂಡಿಯ ಸಿದ್ದಮುತ್ಯಾ, ಅಥಣಿಯ ಶಿವಬಸವ ಸ್ವಾಮಿಗಳು, ಕೊಲ್ಹಾರದ ಕಲ್ಲಿನಾಥ ಸ್ವಾಮೀಜಿ, ಸಿದ್ದಾರೂಢಾಶ್ರಮದ ಶಂಕರಾನಂದ ಸ್ವಾಮೀಜಿ ಸೇರಿದಂತೆ ಇನ್ನೀತರ  ಗಾಣಿಗ ಸಮಾಜದ ರಾಜಕೀಯ ಧುರೀಣರು ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉದ್ಯಮಿ ಶಿವಕುಮಾರ ಸಜ್ಜನ, ವಕೀಲರಾದ ಡಾ.ಬಾಬು ಸಜ್ಜನ ಹಾಗೂ ಸಂತೋಷ ಚೌಡಾಪೂರ ಮತ್ತಿತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!