- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆರಕ್ಷಕರ ಆರೋಗ್ಯಕ್ಕೆ ಮಿಡಿದ ಡಾ.ಅಮರೇಶ

ಆರಕ್ಷಕರ ಆರೋಗ್ಯಕ್ಕೆ ಮಿಡಿದ ಡಾ.ಅಮರೇಶ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆಗೋಸ್ಕರ ಅವಿರತವಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದ್ದು. ಅಲ್ಲದೆ, ಆರಕ್ಷಕರ ಅನಿಯಮಿತ ಸೇವೆಯ ಪರಿಣಾಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿರುವಾಗ ಜಿಲ್ಲೆಯ ಆರಕ್ಷಕರ ಆರೋಗ್ಯಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಜೊತೆಗೆ ಔಷಧೋಪಚಾರ ಒದಗಿಸುವ ಮೂಲಕ ಬಸವನಬಾಗೇವಾಡಿ ಪಟ್ಟಣದ ಡಾ: ಅಮರೇಶ ಮಿಣಜಗಿ (Doctor amaresh minajagi) ಹೃದಯ ವೈಶಾಲ್ಯತೆ ಮೆರೆದು ಆದರ್ಶಪ್ರಾಯರಾಗಿದ್ದಾರೆ.

 ಕಳೆದ 2019 ಜನವರಿ 11ರಂದು “ಆರಕ್ಷಕರ ನಡಿಗೆ ಆರೋಗ್ಯದ ಕಡೇಗೆ” ಎಂಬ ಘೋಷವಾಕ್ಯದೊಂದಿಗೆ ಎರಡು ವರ್ಷಗಳಿಂದ ಪ್ರತಿ ತಿಂಗಳ ಒಂದು ಠಾಣೆಯ ಠಾಣಾ ಅಧಿಕಾರಿಗಳು ಸೇರಿದಂತೆ ಆರಕ್ಷಕರ ಆರೋಗ್ಯ ತಪಾಸಣೆ ಹಾಗೂ ಜಾಗೃತಿಗೆ ಮುಂದಾದ ಡಾ. ಅಮರೇಶ ಮಿಣಜಗಿ (Doctor amaresh minajagi) ಅವರು ವಿಜಯಪುರ ಜಿಲ್ಲೆಯ 28 ಪೊಲೀಸ್ ಠಾಣೆಗಳ ಪೈಕಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಠಾಣೆಗಳನ್ನು ಹೊರತುಪಡಿಸಿ, ಈಗಾಗಲೇ 24 ಪೊಲೀಸ್ ಠಾಣೆಯ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡುವ ಮುಖಾಂತರ ಆರಕ್ಷಕರ ಆರೋಗ್ಯ ಜಾಗೃತಿಗಾಗಿ ಡಾ: ಮಿಣಜಗಿ ಅವರು ಕೈಜೋಡಿಸಿದ್ದಾರೆ.

 ಪ್ರತಿ ಪೊಲೀಸ್ ಠಾಣೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಆರಂಭಿಸುವ ಮುನ್ನ ಸಸಿ ನೆಡುವ ಮೂಲಕ ಪರಿಸರ ಕಾಳಜಿ ಮೆರೆದಿದ್ದು ಅಲ್ಲದೆ ದೇಹದಾನ, ನೇತ್ರದಾನ ಕುರಿತಾಗಿ ಜಾಗೃತಿ ಮೂಡಿಸಿದ್ದಾರೆ, ಕೋವಿಡ್-19 ವೈರಸ್ ಅಟ್ಟಹಾಸದ ವೇಳೆಯಲ್ಲಿ ಆರಕ್ಷಕ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಹಾಲು, ಹಣ್ಣು ವಿತರಣೆ ಮಾಡಿ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಆರಕ್ಷಕರು ಎದೆಗುಂದದೇ ಮುನ್ನಡೆಯಬೇಕು ಎನ್ನುವ ಮಹದಾಶೆಯಿಂದ ಈ ವಿಷಮ ಪರಿಸ್ಥಿತಿಯಲ್ಲಿ ಶಿಬಿರಗಳ ಸಂಯೋಜನೆಗೆ ಸ್ವಲ್ಪ ಅಡೆತಡೆವುಂಟಾದರೂ ಜಗ್ಗದ ಡಾ, ಮಿಣಜಗಿ ಅವರು ಕೋವಿಡ್ -19 ಅಲೆ ಹತೋಟಿಗೆ ಬರುತ್ತಿದ್ದಂತೆ ಮರಳಿ ಶಿಬಿರಗಳನ್ನು ಆಯೋಜಿಸಿ ಆರಕ್ಷಕರ ಆರೋಗ್ಯ ತಪಾಸಣೆಗೆ ಸನ್ನಧವಾಗಿದ್ದು ಸಮಾಜದ ಕಾಳಜಿಗೆ ಪ್ರತೀಕವಾಗಿದೆ.

ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಅವರು ಶಿಬಿರಕ್ಕೆ ಚಾಲನೆ ನೀಡಿ ಪ್ರೋತ್ಸಾಹಿಸಿದಾಗ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಆರಕ್ಷಕರ ಆರೋಗ್ಯ ತಪಾಸಣೆಗೆ ಮುಂದಾದ ಡಾ, ಅಮರೇಶ ಮಿಣಜಗಿ (Doctor amaresh minajagi) ಅವರು ಜಿಲ್ಲೆಯ 24 ಪೊಲೀಸ್ ಠಾಣೆ ಸೇರಿದಂತೆ ಆಲಮಟ್ಟಿ ಜಲಾಶಯದ ಭದ್ರತೆಗಾಗಿರುವ ಕೆಎಸ್‌ಐಎಸ್‌ಎಫ್ ಬಟಾಲಿಯನ್ ಭಧ್ರತಾ ಕಚೇರಿ 150 ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದ್ದು ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಶಿಬಿರ ಆಯೋಜಿಸುವ ಆಲೋಚನೆಯಲ್ಲಿ ತಲ್ಲೀನರಾಗಿದ್ದಾರೆ.

ಶಿಬಿರದಲ್ಲಿ ಆರಕ್ಷಕರ ತೂಕವ – ಎತ್ತರ ಅಂಕಿ ಅಂಶ ದಾಖಲಿಸುವ ಮೂಲಕ ರಕ್ತದೊತ್ತಡ, ಸಕ್ಕರೆ, ಚರ್ಮರೋಗ ಇತ್ಯಾದಿ ರೋಗಗಳ ತಪಾಸಣೆ ಮಾಡಿ, ನಂತರ ಉಚಿತ ಔಷಧೋಪಚಾರ ಚಿಕಿತ್ಸೆಯನ್ನು ಯಾವುದೇ ಸಂಘ – ಸಂಸ್ಥೆ ಇಲ್ಲವೆ ದಾನಿಗಳ ಸಹಾಯ – ಸಹಕಾರವಿಲ್ಲದೆ ಸಂಘಟಿಸಿದ್ದು ಅವಿಸ್ಮರಣೀಯ ಮತ್ತು ಆದರ್ಶಪ್ರಾಯವಾಗಿದೆ.

ಅಳಿಲು ಸೇವೆ ಮುನ್ನಡೆಯಲಿದೆ : ಗಡಿಯಲ್ಲಿ ಸೈನಿಕರು-ನಾಡಿನಲ್ಲಿ ಆರಕ್ಷಕರ ಸೇವೆಯಿಂದ ನಾವೆಲ್ಲರೂ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ, ಅವಿರತವಾಗಿ ಸೇವೆ ಸಲ್ಲಿಸುವದನ್ನು ಗಮನಿಸಿ ಅಳಿಲು ಸೇವೆ ಸಲ್ಲಿಸಲು ಮುಂದಾಗಿ ಕಳೆದ 2ವರ್ಷದಲ್ಲಿ 2500ಕ್ಕೂ ಸಿಬ್ಬಂದಿ ಆರೋಗ್ಯ ತಪಾಸಣೆ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದ್ದು ಅಳಿಲು ಸೇವೆ ಅವಿರತವಾಗಿ ಮುನ್ನಡೆಯಲಿದೆ.

– ಡಾ. ಅಮರೇಶ ಮಿಣಜಗಿ

ಆರೋಗ್ಯ ಜಾಗೃತಿ ಸಂತಸ : ಡಾ, ಅಮರೇಶ ಮಿಣಜಗಿ ಅವರು ನಮ್ಮ ಸಿಬ್ಬಂದಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳುತ್ತಿದ್ದಾಗ ಆರಂಭದಲ್ಲಿ ಶಿಬಿರಕ್ಕೆ ಚಾಲನೆ ನೀಡಿದ್ದೆ ಅವರು ನಿರಂತರವಾಗಿ ವಿವಿಧ ಠಾಣೆಗಳಲ್ಲಿ ಶಿಬಿರಗಳನ್ನು ಆಯೋಜಿಸುತ್ತಾ ನಮ್ಮ ಸಿಬ್ಬಂದಿ ಆರೋಗ್ಯ ತಪಾಸಣೆ ಜೊತೆಗೆ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಹಾಗೂ ಆರೋಗ್ಯಕ್ಕಾಗಿ ಸಲಹೆ-ಸೂಚನೆ ನೀಡಿದ್ದು ಹಲವರಿಗೆ ಪ್ರಯೋಜನವಾಗಿದೆ, ಇಂದು ಮುಂದುವರೆಸಿ ಸಾವಿರಾರು ಸಿಬ್ಬಂದಿಗೆ ತಪಾಸಣೆ ಮಾಡಿದ್ದು ಖುಷಿ ತಂದಿದೆ.

ಅನುಪಮ ಅಗರವಾಲ. ಆಂತರಿಕ ಭದ್ರತಾ ವಿಭಾಗ ಡಿಸಿಪಿ. ಬೆಂಗಳೂರು

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!