- Advertisement -Newspaper WordPress Theme
ಅಂಕಣಗಳುವೈದ್ಯರು 'ಮನುಕುಲದ ದೇವರು'

ವೈದ್ಯರು ‘ಮನುಕುಲದ ದೇವರು’

ದೈನಂದಿನ ಜೀವನದಲ್ಲಿ ವಿವಿಧ ಕಾಯಕದ ಮೂಲಕ ಹಣ ಸಂಪಾದಿಸಿ ನಮಗಿಷ್ಟದ ವಸ್ತು, ಆಸ್ತಿ, ಮನೆ, ಖರೀದಿಸುತ್ತೇವೆ, ವಿವಿಧ ಅಧಿಕಾರ ಎಲ್ಲವನ್ನೂ ಪಡೆಯುತ್ತೇವೆ, ಸಂಕಷ್ಟಗಳು ಎದುರಾದಾಗ ನಾವು ದೇವರ ಮೊರೆ ಹೋಗುತ್ತೇವೆ ಆದರೆ, ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರ (Doctors Day)ಮೊರೆ ಹೋಗುತ್ತೆವೆ, ಆಸ್ಪತ್ರೆಗಳಲ್ಲಿ ರೋಗಿಗಳು ನರಳುತ್ತಿರುವುದನ್ನು ನೋಡಿದರೆ ಯಾವ ಸಂಪತ್ತು ಬೇಡಪ್ಪಾ ಕೇವಲ ಆರೋಗ್ಯವೊಂದಿದ್ದರೆ ಅಷ್ಟೇ ಸಾಕು ಎನಿಸುತ್ತದೆ.

ವಿಶ್ವದಲ್ಲಿನ ಹಲವು ರೋಗಗಳಲ್ಲಿ ಜಗತ್ತನ್ನು ತಲ್ಲಣಗೊಳಿಸಿದ  ಕೊರೋನಾದಂತಹ ಮಹಾಮಾರಿಗೆ ಹೆದರಿ, ದೇವರ ಮೊರೆ ಹೋದರೂ, ದೇಗುಲಗಳ ಬಾಗಿಲು ಬೀಗ ಹಾಕಿರುವುದು ನೋಡಿ ದಿಕ್ಕು ತೊಚದಂತೆ ಆಗಿರುವುದು ಮಾತ್ರ ಸುಳ್ಳಲ್ಲ. ವೈದ್ಯರು (Doctors Day) ಎದುರು ನಿಂತು ಆತ್ಮಸ್ಥೈರ್ಯ ತುಂಬಿದಾಗ ನಮಗರಿವೇ ಇಲ್ಲದಂತೆ ನಮ್ಮ ಮನದಲ್ಲಿ ಜೀವಂತ ದೇವರಾಗಿ ಬಿಟ್ಟಿರುತ್ತಾರೆ. ಅದು ಅವರು ನಮಗೆ ನೀಡಿದ ಆತ್ಮಸ್ಥೈರ್ಯದದಿಂದ. ನಮ್ಮ ಪೂರ್ವಜರು ಈ ಕಾರಣಕ್ಕಾಗಿಯೇ “ವೈದ್ಯೋ ನಾರಾಯಣೋ ಹರಿಃ ಎಂದು ಸಾರಿ ಸಾರಿ ಹೇಳಿದ್ದಾರೆ. ಇದರ ಅರ್ಥ ” ವೈದ್ಯನೆಂದರೆ ದೇವರಿಗೆ ಸಮಾನ”ಎಂದು ಹೇಳಿರಬೇಕು.

ಯುವ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ

ತಮ್ಮ ವಯಕ್ತಿಕ ಬದುಕು ಬದಿಗೊತ್ತಿ ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ವೈದ್ಯರನ್ನು ಕಂಡಾಗ ಆ ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ವೈದ್ಯರ ಸೇವೆ ಜೀವ ಉಳಿಸುವ ಮತ್ತು ಮಾನವ ಕುಲ ಮುಂದುವರೆಸುವ ಅತ್ಯಂತ ಜವಾಬ್ದಾರಿಯುತ ಪವಿತ್ರವಾದ ಸೇವೆ ಇಂಥಹ ಮಹಾನ್ ಸೇವೆ ಗೌರವಿಸುವ, ಸ್ಮರಿಸುವ ಕೃತಜ್ಞತೆ ಸಲ್ಲಿಸುವ ಸುದಿನವೇ ಜುಲೈ 1 “ವೈದ್ಯರ ದಿನಾಚರಣೆ”.

ಭಾರತ ರತ್ನ ಬಿದನ್ ಚಂದ್ರ ರಾಯ್ ಅವರ ಜನ್ಮದಿನದ ಅವರ ಸಾಧನೆಯನ್ನು ಪರಿಗಣಿಸಿ ಈ ದಿನವನ್ನು ಭಾರತದಲ್ಲಿ ವೈದ್ಯರ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ. ಇಂದಿನ ಕೊರೋನಾ ಮಹಾಮಾರಿ ವೈರಸಗಳಿಂದ ರೋಗಿಗಳ ರಕ್ಷಣೆಗೆ ವೈದ್ಯರು ಪಡುತ್ತಿರುವ ಕಷ್ಟಗಳು ಹೇಳತೀರದಾಗಿದೆ.

ವೈದ್ಯಕೀಯ ಎಂಬುದು ವೈದ್ಯರು (Doctors Day) ಮಟ್ಟಿಗೆ ಕೇವಲ ವೃತ್ತಿ, ಕಾಯಕವಷ್ಟೆ, ಜನರು ವೈದ್ಯರನ್ನು ದೇವರ ಸ್ಥಾನದಲ್ಲಿ ಕಾಣುವರು ಆ ನಿಮಿತ್ತವಾದರೂ ಮಾನವೀಯತೆ,ತಾಳ್ಮೆ ಮತ್ತು ಆತ್ಮಸ್ಥೈರ್ಯ ತುಂಬಿ ಇದೊಂದು ಉದ್ಯೋಗವೆಂದು ಭಾವಿಸದೆ ಆರ್ಥಿಕವಾಗಿ ನಿರ್ಗತಿಕರಾಗಿರುವ ರೋಗಿಗಳನ್ನು ಬದುಕುಳಿಸಿದಲ್ಲಿ ಮಾತ್ರ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತು ಅಕ್ಷರಶಃ ಸತ್ಯವೆನಿಸುತ್ತದೆ.

“ಆಸ್ಪತ್ರೆಗಳೆ ದೇವಾಲಯ, ವೈದ್ಯರೇ ದೇವರು ಈ ಮಾತು ಪ್ರಚಲಿತ”

ವೈದ್ಯರಿಗೆ ನಮ್ಮದೊಂದು ಸಲಾಂ…

ಅಂಕಣ : ಜಗದೀಶ. ಗು. ಸಾಲಳ್ಳಿ. ಶಿಕ್ಷಕರು


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!