- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಎಲ್ಲಾ ಮದರಸಾ ಬಂದ್ ಮಾಡಿ. ಶಾಸಕ ಯತ್ನಾಳ ಆಗ್ರಹ

ಎಲ್ಲಾ ಮದರಸಾ ಬಂದ್ ಮಾಡಿ. ಶಾಸಕ ಯತ್ನಾಳ ಆಗ್ರಹ

ವಿಜಯಪುರ : ದೇಶದ ಸಂವಿಧಾನ, ಕಾನೂನು, ಸುಪ್ರೀಂ ಕೋರ್ಟ್ ತೀರ್ಪು ಇವುಗಳಿಗೆ ಗೌರವ ಇಲ್ಲಾಂದ್ರೆ ಅವರ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮತ್ತೆ ಹಿಜಾಬ್ ಗದ್ದಲ ವಿಚಾರವಾಗಿ ವಿಜಯಪುರ ನಗರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್, ಶಿಕ್ಷಣದಿಂದ ಅವರನ್ನು (ಹಿಜಾಬ್ ಧರಿಸುವ ವಿದ್ಯಾರ್ಥಿಗಳು) ಡಿಬಾರ್ ಮಾಡಬೇಕು. ಅವರಿಗೆ ತಮ್ಮ ಭವಿಷ್ಯ ಬೇಕಾಗಿಲ್ಲ. ಓರ್ವ ಮುಸ್ಲಿಂ ಹುಡುಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ತಗೊಂಡಿದ್ದಾಳೆ. ಇದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಆಕೆ ಹಿಜಾಬ್ ಹಾಕಿಕೊಂಡು ಹೋಗಿಲ್ಲ, ಶಿಕ್ಷಣ ಪಡೆಯಬೇಕಾದ್ರೆ ದೇಶದ ಸಂವಿಧಾನ ಕೋರ್ಟ್ ಏನು ಹೇಳುತ್ತೆ ಹಾಗೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಮಾತು ಮುಂದುವರೆಸಿದ ಬಸನಗೌಡ ಪಾಟೀಲ (Basangouda Patil Yatnal), ರಾಜ್ಯದಲ್ಲಿರುವ ಎಲ್ಲಾ ಮದರಸಾ ಬಂದ್ ಮಾಡಿ, ಎಲ್ಲರೂ ಸರ್ಕಾರಿ ಶಾಲೆಗೆ ಬರಬೇಕು. ದೇಶಕ್ಕೆ ನಿಷ್ಠೆಯಾಗಿರಬೇಕು, ದೇಶದ ರಾಷ್ಟ್ರಗೀತೆ ಹಾಡಬೇಕು, ಮದರಸಾಗಳಿಗೆ ಅನುದಾನ ಕೊಟ್ಟಿದ್ದರೆ ರದ್ದುಪಡಿಸಿ. ಮದರಸಾದಲ್ಲಿ ಕಲಿಸೋದು ಧರ್ಮಾಂಧತೆ, ದೇಶ ವಿರೋಧಿ ಚಟುವಟಿಕೆ ಹಾಗಾಗಿ ಅವುಗಳನ್ನು ಕೂಡಲೇ ಬಂದ್ ಮಾಡಬೇಕೆಂದು ಸಿಎಂಗೆ ಮನವಿ ಮಾಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!