- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅತಿವೃಷ್ಠಿ ಹಾನಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಅತಿವೃಷ್ಠಿ ಹಾನಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ವಿಜಯಪುರ: ಪೂರ್ವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಿ.ರಂದೀಪ್ (D. Randip) ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮುನ್ನ ಜಿಲ್ಲೆಯ ವಿವಿಧೆಡೆ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಖುದ್ದು ವೀಕ್ಷಣೆ ನಡೆಸಿದರು.


ತೀವ್ರ ಗಾಳಿ ಮಳೆಯಿಂದಾಗಿ ಹಾನಿಗೀಡಾದ ಕೋಲಾರ ತಾಲೂಕಿನ ಕೂಡಗಿ ಗ್ರಾಮದ ಬಂದೇನವಾಜ ಡೋಂಗ್ರಿಸಾಬ್ ಹತ್ತರಕಿಹಾಳ ಮತ್ತು ದಸ್ತಗೀರಸಾಬ ಕಾಸೀಮಸಾಬ ಗಡೇದ ಎಂಬ ರೈತರ ಜಮೀನಿಗೆ ತೆರಳಿ ವೀಳ್ಯೆದೆಲೆ ಹಾಗೂ ಈರುಳ್ಳಿ ಬೆಳೆ ಹಾನಿಯನ್ನು ಪರಿಶೀಲಿಸಿದರು.

ಕೋಲಾರ ತಾಲೂಕು ವ್ಯಾಪ್ತಿಯ ಕೂಡಗಿ, ತಳೇವಾಡ ಹಾಗೂ ಬಸೂತಿ ಮತ್ತು ಕಲಗುರಕಿ ಗ್ರಾಮಗಳಲ್ಲಿ ಒಟ್ಟು 209 ಹೆಕ್ಟೇರನಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎಸ್ಡಿಆರ್ ಎಫ್ ಮತ್ತು ಎನ್ ಡಿ ಆರ್ ಎಪ್ ನಿಯಮದ ಪ್ರಕಾರ 84 ಹೆಕ್ಟೇರಗೆ 11,34,000 ಪರಿಹಾರವನ್ನು ಸಂಬಂಧಪಟ್ಟ ರೈತರಿಗೆ ಆರ್ಟಿಜಿಎಸ್ ಮೂಲಕ ನೀಡಲಾಗಿದೆ ಎಂದು ಕೋಲಾರ ತಾಲೂಕು ತಹಸೀಲ್ದಾರರಾದ ಎಸ್.ಡಿ.ಮುರಾಳ ಅವರು ಇದೆ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ (D.Randip) ಮಾಹಿತಿ ನೀಡಿದರು.

ಬಳಿಕ ನಿಡಗುಂದಿ ತಾಲೂಕಿನ ಚಿಮ್ಮಲಗಿ ಭಾಗ-2ರ ಗ್ರಾಮಕ್ಕೆ ತೆರಳಿದ ಕಾರ್ಯದರ್ಶಿಗಳು, ಮಳೆಯಿಂದ ಕುಸಿದ ಬಾಬು ಸಿದ್ದಲ್ಪ ಚಲವಾದಿ ಅವರ ಮನೆಹಾನಿಯ ಬಗ್ಗೆ ಕೂಡ (D.Randip) ಮಾಹಿತಿ ಪಡೆದುಕೊಂಡರು.


ಈ ಸಂದರ್ಭದಲ್ಲಿ ವಿಜಯಪುರ ಸಹಾಯಕ ಆಯುಕ್ತರಾದ ಬಲರಾಮ ಲಮಾಣಿ, ನಿಡಗುಂದಿ ತಾಲೂಕು ತಹಸೀಲ್ದಾರ ಎಸ್.ಬಿ.ಕೂಡಲಗಿ ಹಾಗೂ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!