- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವೀರ ಅರಸ ಹಂಡೆ ಹನುಮಪ್ಪನಾಯಕನ ಭಾವಚಿತ್ರ ವಿತರಣೆ

ವೀರ ಅರಸ ಹಂಡೆ ಹನುಮಪ್ಪನಾಯಕನ ಭಾವಚಿತ್ರ ವಿತರಣೆ

ಬಸವನಬಾಗೇವಾಡಿ: ಪಟ್ಟಣದ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ, ವೀರ ಅರಸ ಹಂಡೆ ಹನುಮಪ್ಪ ನಾಯಕನ ಜಯಂತೋತ್ಸವದ ನಿಮಿತ್ಯವಾಗಿ, ವೀರಶೈವ ಲಿಂಗಾಯತ ಹಂಡೆವಜೀರ್ ಕ್ಷೇಮಾಭಿವೃದ್ಧಿ ಸಂಘದ ತಾಲೂಕ ಘಟಕದ ವತಿಯಿಂದ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ಹಿರಿಯ ಇತಿಹಾಸಕಾರರಾದ ಎಂ. ಎಸ್. ಚೌಧರಿ ಮಾತನಾಡಿ, ಇದೇ ತಿಂಗಳು ಏ. 9 ರಂದು ವೀರ ಅರಸ ಹಂಡೆ ಹನುಮಪ್ಪ ನಾಯಕನ ಜಯಂತಿ ಆಚರಣೆಯ ಕುರಿತಾಗಿ ಸಲಹೆ ನೀಡಿ, ಸಂಕ್ಷಿಪ್ತವಾಗಿ ಇತಿಹಾಸ ಪರಿಚಯಿಸಿದರು.

ನಂತರ ರಾಜ್ಯ ಅಧ್ಯಕ್ಷ ಡಾ. ಎಸ್. ಎಸ್ ಪಾಟೀಲ್ (ಕಡೂರ) ಮಾತನಾಡಿ, ಸಮಾಜ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮುಂಬರುವ ದಿನಗಳಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ ಸಮಾಜ ಅಭಿವೃದ್ಧಿಪಡಿಸುವುದಾಗಿ ಹೇಳಿದರು.

ತದನಂತರ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಮಂಜುಳಾ ರೇವಡಿ ಮಾತನಾಡಿ, ಸಮಾಜದ ಮಹಿಳೆಯರು ಸಭೆ ಸಮಾರಂಭಗಳಿಗೆ ಆಗಮಿಸುವ ಮೂಲಕ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ತೋರುವ ಮಹತ್ವದ ಕಾರ್ಯವನ್ನು ಮಾಡಬೇಕಿದೆ, ತಮ್ಮೆಲ್ಲ ಹಿರಿಯರ ಮಾರ್ಗದರ್ಶನದ ಮೇರೆಗೆ ಆದಷ್ಟು ಬೇಗನೆ ಮಹಿಳಾ ಘಟಕಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಸಮಾಜದ ಹಿರಿಯ ಮುಖಂಡ ಎಸ್. ಜಿ ಪಾಟೀಲ್ ಹಾಗೂ ವಿಜಯಪುರ ತಾಲೂಕ ಘಟಕದ ಅಧ್ಯಕ್ಷ ರುದ್ರಗೌಡ ಪಾಟೀಲ್ ಮಾತನಾಡಿ, ಒಂದು ಸಮಾಜ ಅಭಿವೃದ್ಧಿ ಕಾಣಬೇಕಾದರೆ ಮುನ್ನಡೆಸುವ ನಾಯಕತ್ವ ಬಲು ಗಟ್ಟಿಯಾಗಿರಬೇಕು ಅಂತಹ ಸೌಭಾಗ್ಯ ಇಂದು ನಮ್ಮ ಸಮಾಜಕ್ಕೆ ದೊರಕಿದೆ, ರಾಜ್ಯ ಅಧ್ಯಕ್ಷರ ಕಾರ್ಯಕ್ಕೆ ಸಮಾಜದ ಎಲ್ಲ ಬಂಧುಗಳು ಸಾಥ್ ನೀಡುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕೆಂದರು.

ವೀರಶೈವ ಲಿಂಗಾಯತ ಹಂಡೇವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದಂತಹ ಡಾ. ಎಸ್. ಎಸ್. ಪಾಟೀಲ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರೇವಡಿ ಅವರಿಗೆ ಸಮಾಜದ ಮುಖಂಡರಿಂದ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಬಸವನಬಾಗೇವಾಡಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಹನುಮಪ್ಪ ನಾಯಕನ ಜಯಂತಿ ಆಚರಣೆಯ ನಿಮಿತ್ಯವಾಗಿ ಸಮಾಜದ ಹಿರಿಯ ಮುಖಂಡರಾದ ಎಸ್.ಜಿ ಪಾಟೀಲ ಅವರು ಉಚಿತವಾಗಿ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮುತ್ತಗಿ ಹಿರೇಮಠದ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಹಸ್ತದಿಂದ ಭಾವಚಿತ್ರ ವಿತರಿಸಲಾಯಿತು.

ವೇದಿಕೆಯಯಲ್ಲಿ ಸಮಾಜ ಮುಖಂಡ ಪ್ರೇಮಕುಮಾರ ಮ್ಯಾಗೇರಿ, ತಾಲೂಕಾ ಅಧ್ಯಕ್ಷ ಶೇಖರಗೌಡ ಬಿರಾದಾರ, ತಾಲೂಕಾ ಯುವ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಸಿದ್ದನಗೌಡ ಪೊ. ಪಾಟೀಲ ುಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ಅವ್ವನಗೌಡ ಗ್ವಾತಗಿ ಸ್ವಾಗತಿಸಿದರು, ಶಿಕ್ಷಕ ಚನ್ನಪ್ಪಗೌಡ ಬಿರಾದಾರ ಪ್ರಾರ್ಥಿಸಿದರು, ಸಮಾಜದ ಮುಖಂಡರಾದ ದೇವೇಂದ್ರ ಗೋನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!