- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮಹಿಳಾ ನಾಯಕಿಯರ ನಡುವೆ ವಾಗ್ವಾದ

ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮಹಿಳಾ ನಾಯಕಿಯರ ನಡುವೆ ವಾಗ್ವಾದ

ವಿಜಯಪುರ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ-ಮಗು ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರ ಹೊಲಿಗೆ ಬಿಚ್ಚಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಬಾಣಂತಿಯರ ಆರೋಗ್ಯ ವಿಚಾರಿಸಲು ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಗೀತಾ ಪಾಟೀಲ್ ಹಾಗೂ ಇತರರು ಆಸ್ಪತ್ರೆಗೆ ಆಗಮಿಸಿದ್ದ ವೇಳೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮಹಿಳಾ ನಾಯಕಿಯರ ನಡುವೆ ಗಲಾಟೆ, ವಾಗ್ವಾದ ನಡೆದಿದೆ.

ಬಾಣಂತಿಯರು ನರಳಾಡ್ತಿದ್ದಾರೆ, ಅವರಿಗೆ ಏನಾದ್ರು ಆದ್ರೆ ಹೇಗೆ ಎಂದ ಮಹಿಳಾ ಮುಖಂಡೆಯ ಮಾತಿಗೆ ನರ್ಸ್ವೊಬ್ಬಳು ದೇವರು ನೋಡಿಕೊಳ್ತಾನೆ ಎಂದು ಹೇಳಿದ್ದದಾರೆ, ಈ ಮಾತಿಗೆ ಕೋಪಗೊಂಡ  ಮಹಿಳಾ ಮುಖಂಡೆಯರು, ದೇವರು ನೋಡಿಕೊಳ್ಳೊದಾದ್ರೆ ನೀವ್ಯಾಕೆ ಇರಬೇಕು ಎಂದು ಕೇಳಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ನಂತರ ಸಿಬ್ಬಂದಿಗಳು ಇನ್ನೀತರ ಮಹಿಳೆಯರು ಹೋಗಲಿ ಬಿಡಿ ಎಂದು ಸಮಾಧಾನ ಪಡಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!