- Advertisement -Newspaper WordPress Theme
ಹೋರಾಟ ವೀರರುKargil War : ಹುತಾತ್ಮ ಯೋಧನ ಪುತ್ತಳಿ ನಿರ್ಮಿಸಿದ ದೆಶಭಕ್ತರು..!

Kargil War : ಹುತಾತ್ಮ ಯೋಧನ ಪುತ್ತಳಿ ನಿರ್ಮಿಸಿದ ದೆಶಭಕ್ತರು..!

ಕಾರ್ಗಿಲ್ ಯುದ್ಧ (Kargil War) ನಡೆದು ಇಂದಿಗೆ 19ವರ್ಷಗಳಾಯಿತು. ಜುಲೈ 1999ರಂದು ಭಾರತವು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ್ದು ನಮಗೆಲ್ಲಾ ಗೊತ್ತಿರುವ ವಿಚಾರ. ಭಾರತೀಯ ಸೈನಿಕರು ಈ ವೀರತೆಯು ಇಡೀ ದೇಶವನ್ನೇ ಹೆಮ್ಮೆ ಪಡುವಂತೆ ಮಾಡಿದೆ. 18 ಸಾವಿರ ಫೀಟ್ ಎತ್ತರದಲ್ಲಿ ನಡೆದ ಯುದ್ಧದಲ್ಲಿ ದೇಶವು ಸುಮಾರು 527 ಸೈನಿಕರನ್ನು ಕಳೆದುಕೊಂಡಿದ್ದೇವೆ. ಸುಮಾರು 1300ಕ್ಕೂ ಅಧಿಕ ಸೈನಿಕರು ಗಾಯಾಳು ಗಳಾಗಿದ್ದರು. ಈ ಯುದ್ಧದಲ್ಲಿ ಪಾಲ್ಗೊಂಡು ವೀರಮರಣವನ್ನಪ್ಪಿರುವ ಯೋಧರಲ್ಲಿ ನಮ್ಮ ವಿಜಯಪುರ ಜಿಲ್ಲೆಯ ವೀರಯೋಧ ದಾವುಲ್ಸಾಬ. ಅ. ಕಂಬಾರ ಕೂಡಾ ಒಬ್ಬರು. ಭಾರತಾಂಬೆಯ ಮಡಿಲಿಗೆ ತನ್ನ ಪ್ರಾಣವನ್ನೇ ಅರ್ಪಿಸಿದ ವೀರ ಯೋಧನನ್ನು ನೆನೆಯೋಣ.

ಗುಂಡಿನ ಚಕಮಕಿಯಲ್ಲಿ ಬಸವನಾಡಿನ ಯೋಧ ಹುತಾತ್ಮ

ದಾವುಲ್ಸಾಬ ಅಲ್ಲಿಸಾಬ ಕಂಬಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದವನು. ತಂದೆ ಅಲಿಸಾಬ್, ತಾಯಿ ಚಾಂದಬಿ. ಈ ದಂಪತಿಗಳಿಗೆ ಒಟ್ಟು ನಾಲ್ಕು ಮಕ್ಕಳು, ಮನೆಗೆ ಹಿರಿಯ ಮಗನಾಗಿ 1972 ಜುಲೈ 1ರಂದು ಜನಿಸಿದ ದಾವುಲಸಾಬ. ಹುಟ್ಟೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ, ಮುದ್ದೇಬಿಹಾಳ ಪಟ್ಟಣದಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದ. ಚಿಗುರು ಮಿಸೆ ಮೂಡುವ ಮೊದಲೇ ದಾವುಲಸಾಬನಿಗೆ ಸೈನ್ಯಕ್ಕೆ ಸೇರಬೇಕು, ತಾಯಿ ಭಾರತಮಾತೆಯ ಸೇವೆ ಮಾಡಬೇಕಂದು ಮನದಲ್ಲಿ ಅಂದುಕೊಳ್ಳುತ್ತಿದ್ದನು. ತನ್ನ ಇಚ್ಚೆಯಂತೆಯೇ ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ಬಿ.ಎಸ್.ಎಪ್ (ಗಡಿ ಭದ್ರತಾ ಸೇನಾ ಪಡೆ)ಗೆ ಸೇರದನು.

ಸೈನ್ಯಕ್ಕೆ ಸೇರಿದ ನಂತರ ದಾವುಲಸಾಬ್ ವರ್ಷದಲ್ಲಿ ಎರಡು ಬಾರಿಯಂತೆ ಮನೆಗೆ ಬರುತ್ತ ಸತತ 8ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದನು. ಅದೇ ರೀತಿ 1999ರ ಮೇ ತಿಂಗಳಿನಲ್ಲಿ ರಜೆಗೆ ಮನೆಗೆ ಬಂದಿದ್ದ ಯೋಧ ದಾವುಲಸಾಬನಿಗೆ ಸೈನ್ಯಾಧಿಕಾರಿಯಿಂದ ಇದ್ದಕ್ಕಿದ್ದಂತೆ ಕರೆ ಬರುತ್ತದೆ. ಹಾ ಸಾಬ್, “ಜೈ ಹಿಂದ್” ಎಂದವನೇ ತಕ್ಷಣ ತನ್ನ ದೊಡ್ಡದಾದ ಟ್ರಂಕ್ ತುಂಬಿಕೊಂಡು ಮನೆಯವರಿಗೆ ಹೆಚ್ಚಿನ ವಿವರವನ್ನೂ ನೀಡದೇ ತಾಯಿ ಭಾರತಾಂಬೆಯ ರಕ್ಷಣೆಗಾಗಿ ಹೊರಡಲು ಸಿದ್ಧನಾಗುತ್ತಾನೆ. ವರ್ಷದಲ್ಲಿ ಎರಡೇ ಭಾರಿ ಬರುತ್ತಿದ್ದ ಯೋಧ ರಜೆಯನ್ನು ಪೂರ್ಣಗೊಳಿಸದೇ ಇದ್ದಕ್ಕಿದ್ದಂತೆ ಹೊರಟು ನಿಂತ ಕರುಳ ಕುಡಿಯನ್ನು ಕಂಡು ತಾಯಿಗೆ ಸಂಕಟ, ತಳಮಳ ಉಂಟಾಯಿತು. ಆದರೂ ದಾವುಲಸಾಭ ಮನೆಮಂದಿಗೆಲ್ಲಾ ಸಮಾಧಾನ ಪಡಿಸಿ ಹೋರಟೇ ಬಿಟ್ಟ.

ಈ ಸುದ್ದಿಯನ್ನೂ ನೋಡಿ… ಸುಭಾಸ್‌ ಚದ್ರ ಬೋಸ್

ಅಂದು ಹೋರಟು ಹೋಗಿದ್ದ ವೀರ ದಾವುಲಸಾಬ ತಿರುಗಿ ಮನೆಗೆ ಜೀವಂತವಾಗಿ ಬರಲೇ ಇಲ್ಲ, ಭಾರತ-ಪಾಕಿಸ್ತಾನ ಯುದ್ಧದಲ್ಲಿ ಶತ್ರುವಿನೊಂದಿಗೆ ಕಾರ್ಗಿಲ್ನಲ್ಲಿ ಕಾದಾಡುವಾಗ ಮೂರು ಜನ ಪಾಕಿಸ್ತಾನದ ಪಾಪಿಗಳನ್ನು ಸದೆಬಡಿದನು. ಆ ರೋಚಕ ಕಾಳಗದಲ್ಲಿ ಶತ್ರು ಪಡೆಯಿಂದ ಹಾರಿಬಂದ ಗುಂಡೊಂದು ದಾವಿಲಸಾಬನ ಮೈ ಹೊಕ್ಕಿತು. ಭಾರತ ಮಾತೆಯ ರಕ್ಷಣೆಯಲ್ಲಿ ನಿರತನಾಗಿದ್ದ ಯೋಧ ವೀರಮರಣವನ್ನಪ್ಪಿದನು. ಕಾರ್ಗಿ¯ ಯುದ್ಧದಲ್ಲಿ ಸಾವನ್ನಪ್ಪಿದ್ದ ದಾವುಲಸಾಬ ವಿಜಯಪುರ ಜಿಲ್ಲೆಯಲಿಯ್ಲೇ ಮೊದಲಿಗನಾಗಿದ್ದ. ಸಂಪೂರ್ಣ ಸೇವೆ ಸಲ್ಲಿಸಿ, ಸೈನ್ಯದ ಅವಧಿ ಮುಗಿದ ನಂತರ ಮದುವೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ಹೆಳಿದ್ದ ಯೋಧ ಈಗ ವೀರ ಮರಣ ಹೊಂದಿ ಅಮರನಾಗಿಬಿಟ್ಟಿದ್ದ. ಯೋಧನ ಅಂತ್ಯಕ್ರಿಯೆ ಹುಟ್ಟುರಾದ ಬಳವಾಟದಲ್ಲಿ ಅಂತ್ಯಕ್ರಿಯೇ ಮಾಡಲಾಯಿತು.

ಈಗ ಹುತಾತ್ಮ ಯೋಧ ದಾವುಲಸಾಬನ ಸಹೋದರರು ಲಾಡ್ ಸಾಬ್, ನಭಿಸಾಬ್ ಮತ್ತು ಶಹಜನ ಸಾಬ್ ಮುದ್ದೇಬಿಹಾಳ ಪಟ್ಟಣದಲ್ಲಿಯೇ ವಾಸಿಸುತ್ತಿದ್ದಾರೆ. ದಾವು ಸಾಬನ ಅಗಲಿಕೆಯ ಕೆಲವು ವರ್ಷಗಳ ನಂತರ ತಂದೆ-ತಾಯಿಗಳು ತೀರಿಕೊಂಡಿದ್ದಾರೆ, ಯೋಧನ ಅಗಲಿಕೆಯ ನೋವು ಸಹೋದರರಿಗೆ ತುಂಬಲಾಗದ ನಷ್ಟವಾಗಿದೆ. ಈ ಹುತಾತ್ಮ ಯೋಧನ ನೆನಪಿಗಾಗಿ ಬಳವಾಟ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಸಮಿತಿ ರಚಿಸಿ ಗೌರವ ಸಲ್ಲಿಸುತ್ತಿದ್ದಾರೆ.

“ನಮ್ಮ ಅಣ್ಣ ಯುದ್ಧದಾಗ ಮರಣ ಹೊಂದಿದ್ದು ನಮ್ಮ ಕುಟುಂಬಕ್ಕ ತುಂಬಾ ನೋವು ಆಗೆದ್ರಿ, ಆದರೆ, ಭಾರತ ಮಾತೆಯ ಸೇವೆಯಲ್ಲಿ ವೀರಮರಣ ಹೊಂದಿ ಇಡೀ ದೇಶಕ್ಕ ಮಗ ಅನಸಕೊಂಡ ಅಂತ ಹೆಮ್ಮೆ ಆಗತದರೀ ನಮಗ, ಅಣ್ಣನ ನೆನಪಿನಲ್ಲಿ ಹಲವಾರು ದೇಶಭಕ್ತರು ಅನೇಕ ರೀತಿ ಗೌರವ ಸಲ್ಲಿಸತ್ತಿದ್ದಾರ ಅವರೆಲ್ಲರಿಗೂ ನಮ್ಮ ಕುಟುಂಬದವರು ಋಣಿಯಾಗಿದ್ದೇವ್ರಿ ನಾವು”
– ಶಹಜಾನ್ ಸಾಬ್ ಕಂಬಾರ, ಹುತಾತ್ಮ ಯೋಧ ದಾವುಲಸಾಬನ ಕಿರಿಯ ಸಹೋದರ

ಸ್ಮಾರಕ ನಿರ್ಮಾಣ : ಕಾರ್ಗಿಲ್ ಯುದ್ಧದಲ್ಲಿ (Kargil War) ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸವಿನೆನಪಿಗಾಗಿ ಕಾರ್ಗಿಲ್ ಮಾದರಿಯಲ್ಲಿಯೇ ವೀರಯೋಧರ ಸ್ಮಾರಕ ನಿರ್ಮಾಣ ಸಮೀತಿ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದ ಹಳೆ ತಹಸೀಲ್ದಾರ ಕಛೇರಿ ಆವರಣದ ಸೈನಿಕರ ಮೈದಾನದಲ್ಲಿ ಹುತಾತ್ಮ ವೀರಯೋಧ ದಾವುಲಸಾಬ ಕಂಬಾರವರ ಪುತ್ತಳಿ ನಿರ್ಮಿಸಿ ದೆಶಭಕ್ತಿಯನ್ನು ಮೆರೆದಿದ್ದಾರೆ.

ಕಳೆದ ಜುಲೈ 26ರಂದು ಹುತಾತ್ಮ ಯೋಧ ದಾವುಲಸಾಬ ಅವರ ಪುತ್ತಳಿ ಅನಾವರಣ ಮಾಡಲಾಗಿದೆ. ಸ್ಮಾರಕ ನಿರ್ಮಾಣವನ್ನು ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿ ಪದಾಧಿಕಾರಿಗಳು, ದಾನಿಗಳ ನೆರವು ಹಾಗೂ ಯುವಕರ ಸಹಾಯ ಪಡೆದು ಸ್ಮಾರಕ ನಿರ್ಮಿಸಲಾಗಿದೆ.

ಕಾರ್ಗಿಲ್ ಯುದ್ಧ ಸೇರಿದಂತೆ ಶತ್ರುಗಳೊಡನೆ ಕಾದಾಡುವಲ್ಲಿ ವಿಜಯಪುರ ಜಿಲ್ಲೆಯ ಇನ್ನೂ ಅನೇಕ ವೀರ ಯೋಧರು ಹುತಾತ್ಮರಾಗಿದ್ದಾರೆ. ಈ ಎಲ್ಲ ಹುತಾತ್ಮ ಯೋಧರಿಗೆ ಗೌರವ ಸಿಗಲಿ ಎಂದು ಹೇಳುತ್ತಾ ವೀರ ಮರಣ ಹೊಂದಿದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ…

ಜೈ ಹಿಂದ್

– ಶ್ರೀಪಾದ ಜಂಬಗಿ

LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!