- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದಲಿತರನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡಬಾರದು. ಎಂ.ಬಿ ಪಾಟೀಲ

ದಲಿತರನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡಬಾರದು. ಎಂ.ಬಿ ಪಾಟೀಲ

ವಿಜಯಪುರ : ಸಿದ್ದರಾಮಯ್ಯ ನವರಿಗೆ ದಲಿತರ ಬಗ್ಗೆ ಇರುವಷ್ಟು ಬದ್ದತೆ ಬೇರೆ ಯಾರಿಗೂ ಇಲ್ಲ. ದಲಿತರನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ. ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂಬಿ ಪಾಟೀಲ ಸಮರ್ಥಿಸಿಕೊಂಡರು.

READ MORE :

ನಗರದಲ್ಲಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನವರು ದಲಿತರ ಬಗ್ಗೆ ಮಾತನಾಡಿಲ್ಲ. ಸಿದ್ದರಾಮಯ್ಯ ನವರಷ್ಟು ದಲಿತರ ಬಗ್ಗೆ ಇರುವ ಕಾಳಜಿ ಬೇರೆ ಯಾರಿಗೂ ಇಲ್ಲ. ಎಸ್ ಸಿ ಪಿ, ಟಿ ಎಸ್ ಪಿ ಯಲ್ಲಿ ದೇಶದಲ್ಲೇ ಮೊದಲು 24% ಇದ್ದ ಬಜೆಟ್ ನಲ್ಲಿ 4 ಸಾವಿರಿ ಕೋಟಿ ಇದ್ದದ್ದನ್ನು 25 ಸಾವಿರ ಕೋಟಿವರೆಗೆ ಗ್ರ್ಯಾಂಟ್ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಶಾಸಕ ಎಂಬಿ ಪಾಟೀಲ ಹೇಳಿದರು.

ಇನ್ನೂ ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಈ ಕುರಿತು ‌ಪಕ್ಷ ನಿರ್ಧಾರ ಮಾಡುತ್ತದೆ. ಮೊದಲು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. 115 ಸೀಟುಗಳನ್ನು ಗೆದ್ದ ಬಳಿಕ ನಿರ್ಣಯ ಮಾಡುತ್ತಾರೆ. ಈಗ ನಾವು ಅಧಿಕಾರದಲ್ಲಿ ನಾವು ಇಲ್ಲ. ಈಗ ಬಿಜೆಪಿಯವರು ಅಧಿಕಾರದಲ್ಲಿ ಇದ್ದಾರೆ, ಅವರು ಮಾಡಿ ತೋರಿಸಲಿ. ನಮ್ಮದು ಬಂದಾಗ ನಾವು ಮಾತನಾಡುತ್ತೇವೆ ಎಂದ ಎಂ.ಬಿ ಪಾಟೀಲ ಹೇಳಿದರು.

ಸಿಂದಗಿ ಮತಕ್ಷೇತ್ರದ ಚುನಾವಣಾ ಫಲಿತಾಂಶ ವಿಚಾರ: ಸಿಂದಗಿ ಮತಕ್ಷೇತ್ರದ ಸೋಲಿಗೆ ತಲೆಬಾಗಿ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅಲ್ಲಿ ಸರ್ಕಾರ ಸಚಿವರ ನಿಟ್ಟು ಹಣದ ಹೊಳೆ ಹರಿಸಿ ಚುನಾವಣೆ ಗೆದ್ದಿದ್ದಾರೆ. ಅದಾಗಿಯೂ ಸೋಲಿಗೆ ತಲೆಬಾಗಿ ನಾವು ಒಪ್ಪಿಕೊಳ್ಳುತ್ತೇವೆ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಮೂರು ಪಟ್ಟು ಹೆಚ್ಚಿನ ಮತಗಳನ್ನು ನಾವು ಪಡೆದಿದ್ದೇವೆ ಅಲ್ಲಿ ಸುಮಾರು 60 ಸಾವಿರದಷ್ಟು ಮತಗಳನ್ನು ಪಡೆದಿದ್ದೇವೆ. 2023 ರ ಚುನಾವಣೆಯಲ್ಲಿ 8 ವಿಧಾನ ಸಭಾ ಮತಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ಭರವಸೆ ನೀಡಿದರು.

ಪರಿಷತ್ ಚುನಾವಣೆ: ವಿ.ಪ ಚುನಾವಣೆ ಘೋಷಣೆ ಹಿನ್ನಲೆ ಪಕ್ಷದವರು 14 ರಂದು ವಿಭಾಗವಾರು ಮಿಟೀಂಗ್ ಕರೆದಿದ್ದಾರೆ. 14 ರಂದು ಸಂಜೆ ಕೆಪಿಸಿಸಿ ಅದ್ಯಕ್ಷರು, ವಿರೋಧ ಪಕ್ಷದ ನಾಯಕರು, ಸುರ್ಜೇವಾಲಾ ಅವರ ನೇತೃತ್ವದಲ್ಲಿ ಮಿಟೀಂಗ್ ಕರೆಯಲಾಗಿದೆ. ಇದರಲ್ಲಿ ಜನಪ್ರತಿ‌ನಿಧಿಗಳು ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಬಳಿಕ ಅಬ್ಯರ್ಥಿಯ ಆಯ್ಕೆ ಕುರಿತು ನಿರ್ಣಯ ಕೈಗೊಳ್ಳುತ್ತಾರೆ. ಬಳಿಕ ಹೈ ಕಮಾಂಡ್ ಗೆ ರೆಕಮೆಂಡ್ ಮಾಡಲಾಗುವದು. ಹಿಂದೆ ಎರಡು ಸೀಟ್ ನಾವು ಗೆದ್ದಿದ್ದೇವೆ. ಪಕ್ಷದ ನಿರ್ಣಯ, ಜನಪ್ರತಿನಿಧಿಗಳ ನಿರ್ಣಯದ ಅನ್ವಯ ಹೈ ಕಮಾಂಡ್ ಗೆ ರೆಕಮೆಂಡೇಷನ್ ಮಾಡಲಾಗುವದು ಎಂದು ಎಂ.ಬಿ ಪಾಟೀಲ ತಿಳಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!