- Advertisement -Newspaper WordPress Theme
ಅಂಕಣಗಳುಯುವ ಸಾಧಕಜ್ಞಾನ ನಗರಿಯ ‘ಛೋಟಾ ಯೋಗ ಗುರು ದಕ್ಷ್’

ಜ್ಞಾನ ನಗರಿಯ ‘ಛೋಟಾ ಯೋಗ ಗುರು ದಕ್ಷ್’

ತನ್ನ ನಾಲ್ಕನೇಯ ವಯಸ್ಸಿನಲ್ಲಿಯೇ, ಜ್ಞಾನ ಯೋಗಾಶ್ರಮದ,(Vijayapura) ನಡೆದಾಡುವ ದೇವರು ಎಂದೆನಿಸಿಕೊಂಡಂತಹ ಸಿದ್ದೇಶ್ವರ ಸ್ವಾಮಿಜಿಯವರಿಂದ ‘ಛೋಟಾ ಯೋಗ ಗುರು’ (Yoga pros) ಎಂದು ಕರೆಸಿಕೊಂಡಿರುವ ಹೆಮ್ಮೆಯ ಬಾಲಕ ದಕ್ಷ್ ಅನೀಲ ವಣಕುದರಿ (Daksh Vankudre).

ಜ್ಞಾನನಗರಿ ವಿಜಯಪುರದ ನಿವಾಸಿ ಅನೀಲ – ನೀಕಾ ದಂಪತಿಗಳ ಮಗನಾಗಿರುವ ಈ ಬಾಲಕ ದಕ್ಷ್ ಗೆ ಈಗ ವಯಸ್ಸು ಕೇವಲ ಎಂಟು. ನಗರದ ನಳಂದ ಶಾಲೆಯಲ್ಲಿ ಎರಡನೇಯ ತರಗತಿ ಓದುತ್ತಿದ್ದಾನೆ. ಕಳೆದ ನಾಲ್ಕು ವರ್ಷಗಳ ಹಿಂದೆ, ಮನೆಯಲ್ಲಿ ಟಿವ್ಹಿ ನೋಡ್ತಾ ನೋಡ್ತಾ ಕೆಲ ಆಸನಗಳನ್ನು ಮಾಡ್ತೀರ್ತಾನೆ.

Daksh Vankudre Chota Yoga Guru

ಮಗನ ಈ ಅಭಿರುಚಿಯನ್ನು ಗಮನಿಸಿದ ತಂದೆ, ಯೋಗ ಕಲಿಸಬೇಕೆಂಬ ಇಚ್ಚೆಯಿಂದ, ಯೋಗ ಗುರು ಮಡಿವಾಳಪ್ಪ ದೊಡಮನಿಯವರ ಹತ್ತಿರ ಕರೆದುಕೊಂಡು ಬಂದು ವಿವರಿಸುತ್ತಾರೆ. ತಂದೆಯ ಆಸೆ,  ಬಾಲಕನ ಆಸಕ್ತಿಗೆ ಗುರುಗಳು ದಕ್ಷ್ ಗೆ ಮಾರ್ಗದರ್ಶಕರಾಗಿ ಯೋಗ ತರಬೇತಿ ಆರಂಭಿಸುತ್ತಾರೆ.

ದಿನದಿಂದ ದಿನಕ್ಕೆ ಬಾಲಕನ ಆಸಕ್ತಿ ಹೆಚ್ಚುತ್ತದೆ. ದೊಡಮನಿ ಗುರುಗಳು ಕೂಡಾ ಅಷ್ಟೇ ಮಮತೆಯಿಂದ ಯೋಗ ಕಲಿಕೆಗೆ ಸಾಥ್ ನೀಡುತ್ತಾರೆ. ದಿನನಿತ್ಯ ತರಬೇತುಗೊಳಿಸಿ, ವಿವಿಧ ಆಸನಗಳು, ಪ್ರಾಣಾಯಾಮಗಳು ಸೇರಿದಂತೆ ಯೋಗ ವಿದ್ಯಾಭ್ಯಾಸದ ಪ್ರತಿಯೊಂದು ಹಂತವನ್ನು ತಲುಪಲು ಸತತ ಪ್ರಯತ್ನದಲ್ಲಿ ಮಗ್ನರಾಗುತ್ತಾರೆ.

ಸಾಧಕ ದಕ್ಷ್ ವಿಡಿಯೊ ನೋಡಿ

ಹೀಗೆ ಯೋಗ ಕಲಿಕೆ ನಡೆಸುತ್ತಿದ್ದ ದಕ್ಷ್ ವಿವಿಧೆಡೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಪ್ರತಿಯೊಂದರಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಾ, ತನ್ನ ಕಿರಿಯ ವಯಸ್ಸಿನಲ್ಲಿಯೇ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.

2019ರಲ್ಲಿ ವಿಜಯಪುರದಲ್ಲಿ ನಡೆದ ವೃಕ್ಷಥಾನ್ ನಲ್ಲಿ ಈ ಪುಟ್ಟ ಸಾಧಕನ ಯೋಗವೂ ಕೇಂದ್ರ ಬಿಂದು ಆಗಿತ್ತು. ಹೀಗೆ ಹಲವಾರು ಯೋಗ ಶಿಬಿರಗಳಲ್ಲಿ ಬಾಗವಹಿಸುತ್ತಾ, ಶ್ರಮವಹಿಸುತ್ತಿರುವ ದಕ್ಷ್ (Daksh Vankudre),  ಕಳೆದ ಎರಡು ವರ್ಷದ ಹಿಂದೆ ಯೋಗ ಸ್ಪರ್ಧೆಗೆ ಕೆನಡಾಗೆ ಆಯ್ಕೆಯಾಗಿದ್ದು, ಕೋವಿಡ್ ಕಾರಣದಿಂದಾಗಿ ಮುಂದೋಡಲಾಗಿತ್ತು. ನಂತರ ಥಾಯ್ ಲ್ಯಾಂಡ್ ಗೆ ಹೋಗುವ ಅವಕಾಶವೂ ಕೂಡಾ ಮನೆಯ ಆರ್ಥಿಕ ಸ್ಥಿತಿ ವಂಚಿತನನ್ನಾಗಿ ಮಾಡಿತು.

ಕೋವಿಡ್ ಕಾರಣದಿಂದಾಗಿ ದೇಶದ ವಿವಿಧ ರಾಜ್ಯಗಳು ಆನ್ ಲೈನ್ ಮೂಲಕ ಯೋಗ ಸ್ಪರ್ಧೆ ನಡೆಸಿತ್ತು., ಅದರಂತೆ ನ್ಯಾಶನಲ್ ಯೋಗಾಸನಾ ಚಾಂಪಿಯನ್ಸ್ ಸಹಯೋಗದ ಯೋಗಾ ಸ್ಪೋರ್ಟ್ಸ್ ಫೆಡರೇಷನ್ ಪಂಜಾಬ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಉತ್ತರ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾನೆ.

Daksh Vankudre Chota Yoga Guru

ಇಂಹ ಚಿಕ್ಕ ವಯಸ್ಸಿನ ಯೋಗ ಪಟುವಿನ ಪ್ರಗತಿಯ ದಾರಿಗೆ ಅಡ್ಡ ಬಂದು ನಿಲ್ಲುವ ಅತೀ ದೊಡ್ಡ ಸಮಸ್ಯೆಯೆಂದರೆ ದುಡ್ಡು, ಕಾರಣ ದಕ್ಷ್ ತಂದೆ ಅನೀಲ ಕೂಲಿನಾಲಿ ಮಾಡಿಕೊಂಡು, ಸಂಸಾರ ಸಾಗಿಸುವ ಹೊಣೆಯಲ್ಲಿ ತೊಡಗಿಕೊಂಡಿರುವಾಗ ಪ್ರತಿಭೆಗೆ ಅವಕಾಶ ಕೊಡುವ ಮಾತೆಲ್ಲಿ..? ನಮ್ಮ ಮಕ್ಕಳಿಗೂ ಸ್ಪೂರ್ತಿ ಕೊಡುವಂತಹ ದಕ್ಷನ ಈ ಕಾರ್ಯಕ್ಕೆ ಕೇವಲ ಶ್ಲಾಘಿಸಿದರೆ ಸಾಲದು.

ಅಗರ್ಭ ಶ್ರೀಮಂತ ದೇವರುಗಳ ಹುಂಡಿಗೆ ಹಣ ಹಾಕುವ ಬದಲು ಚೋಟಾ ಯೋಗ ಗುರು ದಕ್ಷ್ ಗೆ ಜೈನ ಸಮಾಜವಾಗಲಿ, ಅಥವಾ ಇನ್ಯಾವುದೇ ಸಮಾಜವಾಗಲಿ ಈತನಿಗೆ ಸಹಾಯವಾದರೆ, ಸದ್ಯದಲ್ಲೇ ಥಾಯ್ಲೆಂಡ್ ಹಾಗೂ ಅಂಡಮಾನ್ ನಿಕೋಬಾರ್ ಗಳಿಗೆ ಯೋಗ ಪ್ರದರ್ಶನಕ್ಕೆ ಕಳುಹಿಸುವ ಹೊಣೆ ನಮ್ಮ ಮೇಲೂ ಇದೆ ಅಲ್ಲವೇ? ಸಹಾಯ ನೀಡುವ ಕೈಗಳು ಛೋಟಾ ಯೋಗ ಗುರುವಿಗೆ ನೆರವಾಗುತ್ತೀರಿ ಎಂಬ ಮಹಾದಾಸೆ ನಮ್ಮ ಗಡಿನಾಡ ಕ್ರಾಂತಿಯದ್ದಾಗಿದೆ.

  • ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!