- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಒಂದೇ ತಿಂಗಳಿನಲ್ಲಿ ಮೊಸಳೆಗೆ ಎರಡನೇ ಬಲಿ

ಒಂದೇ ತಿಂಗಳಿನಲ್ಲಿ ಮೊಸಳೆಗೆ ಎರಡನೇ ಬಲಿ

ವಿಜಯಪುರ: ಕೃಷ್ಣಾ ತೀರದ ನರಭಕ್ಷಕ ಮೊಸಳೆಗೆ (crocodile on the Krishna coast) ಮತ್ತೊಂದು ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ (Muddebihal) ತಾಲೂಕಿನ ಕೃಷ್ಣಾನದಿ ತೀರದ ಹಂಡರಗಲ್‌ (Handargal) ಗ್ರಾಮದ ನದಿತೀರದಲ್ಲಿ ನಡೆದಿದೆ.

ಹಂಡರಗಲ್‌ ಗ್ರಾಮದ ನಾಗಪ್ಪ ಸಂಜೀವಪ್ಪ ಉಂಡಿ (55) ಶವವಾಗಿ ಪತ್ತೆ ಯಾಗಿದ್ದು, ನಿನ್ನೆ ಕೃಷ್ಣಾನದಿ ತೀರಕ್ಕೆ ನಾಗಪ್ಪ ಆಡು ಮೇಯಿಸಲು ಹೋಗಿದ್ದ. ಆಡುಗಳು ಮನೆಗೆ ಮರಳಿದ್ದವು, ಆದರೆ ನಾಗಪ್ಪ ನಾಪತ್ತೆಯಾಗಿದ್ದ, ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವ ಹೊರತೆಗೆಯುವ ಕಾರ್ಯಾಚರಣೆ ಮಾಡಿದ್ದು, ಮುದ್ದೇಬಿಹಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ಬಲಿ: ನರಭಕ್ಷಕ ಮೊಸಳೆ / ಮೊಸಳೆಗಳಿಗೆ (crocodile on the Krishna coast) ಬಲಿಯಾದ ಈ ತಿಂಗಳಲ್ಲಿ ಎರಡನೇ ಪ್ರಕರಣವಾಗಿದೆ. ಇದೇ ಹಂಡರಗಲ್‌ ಗ್ರಾಮದ ಬಳಿಯ ನಾಗರಾಳ ಗ್ರಾಮದ ಮಲ್ಲನಗೌಡ.ಎಸ್.ಬಿರಾದಾರ, ಇದೇ ಜೂನ್‌ ತಿಂಗಳ 2 ರಂದು ಮೊಸಳೆಗೆ ಬಲಿಯಾಗಿದ್ದ. 2  ದಿನದ ಕಾರ್ಯಾಚರಣೆ ನಂತರ ಜೂನ್‌ 4 ರಂದು ಮಲ್ಲನಗೌಡನ ಶವ ಪತ್ತೆಯಾಗಿತ್ತು.

ಇದೀಗ ಇದೇ ಗ್ರಾಮದ ಬಳಿಯ ಹಂಡರಗಲ್‌ ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿದೆ. ನರಭಕ್ಷಕ ಮೊಸಳೆ/ಮೊಸಳೆಗಳ ಕಾರಣದಿಂದಾಗಿ ನದಿತೀರದ ಗ್ರಾಮದವರಲ್ಲಿ ಆತಂಕ ಹೆಚ್ಚಾಗಿದೆ. ನರಭಕ್ಷಕ ಮೊಸಳೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

ಮೊದಲ ಮೊಸಳೆ ಬಲಿಯಾದೊಡನೆ ಅರಣ್ಯ ಇಲಾಖೆ ವ್ಯಾಪಕ ಜಾಗೃತಿ ಪ್ರಚಾರ ಮಾಡಬೇಕಿತ್ತು. ಮಾಡಿದ್ದರೆ ಇಂದಿನ ಘಟನೆ ತಪ್ಪಿಸಬಹುದಿತ್ತು, ಮೊದಲ ಮೊಸಳೆ ಬಲಿಯಾದಾಗ ಡಂಗೂರ ಸಾರುವಂತೆ ಗ್ರಾ.ಪಂʼನವರಿಗೆ ಸೂಚಿಸಿ ಕೈತೊಳೆದುಕೊಂಡಿದ್ದ ಅರಣ್ಯ ಇಲಾಖೆ, ಇನ್ನಾದರೂ ಎಚ್ಚೆತ್ತುಕೊಂಡು ಅನಾಹುತ ತಡೆಗಟ್ಟಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹ ಪಡಿಸಿದ್ದಾರೆ.

ವಿಷಯ ತಿಳಿಯುತ್ತಿದದ್ದಂತೆಯೇ ಶಾಸಕ ಎಎಸ್ ಪಾಟೀಲ್ ನಡಹಳ್ಳಿ, ಮುದ್ದೇಬಿಹಾಳ ಪಟ್ಟಣದಲ್ಲಿರುವ ಆಸ್ಪತ್ರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಜನರು ಸಹ ನದಿ ಪಾತ್ರದ ಬಳಿ ಹೋಗುವಾಗ ಜಾಗೃತರಾಗಬೇಕು ಎಂದು ಮನವಿ‌ ಮಾಡಿದ ಶಾಸಕ, ಅರಣ್ಯ ಇಲಾಖೆ ಮೊಸಳೆ ಕಾಟ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಮೃತನ ಕುಟುಂಬಕ್ಕೆ ಸರ್ಕಾರದಿಂದ, ಆದಷ್ಟು ಬೇಗನೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!