- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಾಳ ಪುಣ್ಯದ ಕೆಲಸ ಮಾಡಿಯಪ. ಶಾಸಕ ಯತ್ನಾಳ್ ಕಾರ್ಯಕ್ಕೆ ಸಿಎಂ ಮೆಚ್ಚುಗೆ

ಬಾಳ ಪುಣ್ಯದ ಕೆಲಸ ಮಾಡಿಯಪ. ಶಾಸಕ ಯತ್ನಾಳ್ ಕಾರ್ಯಕ್ಕೆ ಸಿಎಂ ಮೆಚ್ಚುಗೆ

ವಿಜಯಪುರ: ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. (CM Bommai appreciates Yatnal) ಎಲ್ಲದಕ್ಕಿಂತ ವಿಶೇಷವಾಗಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (JSS Hospital) ನಿರ್ಮಿಸಿ ಬಾಳ ಪುಣ್ಯದ ಕೆಲಸ ಮಾಡಿಯಪ್ಪ ಯತ್ನಾಳ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಪುರ (Vijayapura) ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ JSS ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ ಸಿಎಂ ಬೊಮ್ಮಾಯಿ, ಪಂಚ ನದಿಗಳ ಬೀಡು ಶ್ರೀ ಸಿದ್ದೇಶ್ವರ ಸ್ವಾಮಿಗಳು ನೆಲೆಸಿರುವಂತಹ ಈ ನಾಡಿನಲ್ಲಿ ಜನತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ನಮ್ಮ ಎಲ್ಲ ಶಾಸಕರುಗಳು ಶ್ರಮವಹಿಸುತ್ತಿದ್ದಾರೆ ಎಂದು ಹೇಳಿದರು.

ಎಲ್ಲ ಕಾರ್ಯಗಳಿಗಿಂತ ಇದೀಗ ಉದ್ಘಾಟನೆಗೊಂಡಿರುವ ಆಸ್ಪತ್ರೆಯು ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ, ಇದರಿಂದ ಬಡ ಜನತೆಗೆ ತುಂಬಾ ಸಹಕಾರಿಯಾಗಲಿದೆ. ಯತ್ನಾಳ್ ಅವರ ಈ ಕಾರ್ಯಕ್ಕೆ ಪುಣ್ಯಪ್ರಾಪ್ತಿಯಾಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೊಗಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!