- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯBSY ಕಾಲೆಳದ ಯತ್ನಾಳ್

BSY ಕಾಲೆಳದ ಯತ್ನಾಳ್

ವಿಜಯಪುರ: ಜಿಲ್ಲಾಡಳಿತ ಸಂಕೀರ್ಣದ ಭೂಮಿ ಪೂಜೆ ಮಾಡಲು ಬಿ ಎಸ್ ವೈ ಬರಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ ಅದು ಕ್ಯಾನ್ಸಲ್ ಆಗಿತ್ತು. ಈ ಕಾರ್ಯ ಬೊಮ್ಮಾಯಿ ಅಮೃತ ಹಸ್ತದಿಂದ ಆಗಬೇಕು ಎಂದಿತ್ತು, ಹಾಗಾಗಿ ಅದು ಈಗ ಆಯ್ತು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಿಎಂ ಬಿ ಎಸ್ ವೈ ಅವರ ಕಾಲೆಳೆದರು.

ಬಿಜಾಪುರ “ಬಂಗಾರದಪುರ” ಮಾಡುತ್ತೇವೆ. ಸಿಎಂ ಬೊಮ್ಮಾಯಿ

ಅಲ್ಲದೆ ವಸತಿ ಸಚಿವ ವಿ. ಸೋಮಣ್ಣ ಫ್ರೀ ಹ್ಯಾಂಡ್ ಬಿಟ್ರೆ ಇನ್ನು ಬಹಳ ಮನೆಗಳನ್ನ ಕಟ್ತಿದ್ರು, ಬೊಮ್ಮಾಯಿ ಸಿಎಂ ಆಗಿ ಬಂದ ಮೇಲೆ ಈಗ ಸ್ವಲ್ಪ ಉಸಿರಾಡ್ತಾ ಇದ್ದಾರೆ. ಮೊದಲು ಉಸಿರಾಡೋದು ಕಷ್ಟ ಆಗಿತ್ತು.ಈಗ ಐಸಿಯು ನಿಂದ ಜನರಲ್ ವಾರ್ಡ್ ಗೆ ಬಂದಿದ್ದಾರೆ. ಇನ್ಮುಂದೆ ಕೆಲಸಗಳು ವೇಗವಾಗಿ ಆಗಲಿವೆ ಎಂದು ಯಡ್ಡಿಯೂರಪ್ಪ ಹಾಗು ವಿಜಯೇಂದ್ರಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಇನ್ನು ವಿಜಯಪುರಕ್ಕೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡಿ. ನನಗೆ ಅಭಿವೃದ್ಧಿಗೆ ಎಷ್ಟು ಬೇಕು ಅಷ್ಟು ಹಣ ಕೊಡ್ರಿ, ನಾನು ಏನೂ ಕೇಳೋದಿಲ್ಲ ಎಂದು ಹೇಳಿದ್ದೆನೆ. ಎಷ್ಟು  ಹಣ ತಿಂದು, ದುಬೈನಲ್ಲಿ ಮನೆ ಮಾಡಿ, ರೆಸಾರ್ಟ್ ಮಾಡಿ ಏನು ಮಾಡೋದಿದೆ. ಎಷ್ಟು ಇದ್ರೆ ಏನು? ಕರೋನಾ ಬಂದ್ರೆ ಹೆಣ ಕೂಡ ಎತ್ತಿ ಬಿಸಾಕ್ತಾರೆ ಎಂದರು.

ಗೃಹಖಾತೆಗೆ ಪರೋಕ್ಷ ಬೇಡಿಕೆಯಿಟ್ಟ ಶಾಸಕ ಯತ್ನಾಳ..!

ನಾನು ಎಲ್ಲರಿಗೂ ಬೈದು ಬೈದು ಚುನಾಯಿತನಾಗಿದ್ದೇನೆ. ವಿಜಯಪುರವನ್ನು ಮಾದರಿಯಾಗಿಸುತ್ತೇನೆ ಎಂದು ಶಾಸಕ ಯತ್ನಾಳ ಭರವಸೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!