- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಇವಣಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಇವಣಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಬಸವನಬಾಗೇವಾಡಿ: (Blood Donation Camp in Ivanagi) ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿದ್ದು, ಉಚಿತ ಉತ್ತಮ ಚಿಕಿತ್ಸೆಯನ್ನು (Free Health Checkup) ಪಡೆದುಕೊಳ್ಳಲು ಪ್ರತಿಯೊಬ್ಬರು ಸರಕಾರಿ ಆಸ್ಪತ್ರೆಯನ್ನೇ ಅವಲಂಭಿಸುವುದು ಒಳಿತು ಎಂದು ಹೂವಿನಹಿಪ್ಪರಗಿ ವಲಯ ವೈದ್ಯಾಧಿಕಾರಿ ಡಾ. ಬಿ.ಎಸ್. ಸಂಧಿಮನಿ (Dr. B.S Sandimani) ಹೇಳಿದರು.

ತಾಲೂಕಿನ ಇವಣಗಿ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹೂವಿನ ಹಿಪ್ಪರಗಿ, ನರಸಲಗಿ ಗ್ರಾಪಂ, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೇರೆಬೇರೆ ಸಂದರ್ಭದಲ್ಲಿ ಜೀವನ್ಮರಣದಿಂದ ಹೋರಾಡುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕವಾಗಿ ಕಂಡು ಬರುತ್ತಿದ್ದು ರಕ್ತವನ್ನು ಯಾವುದೇ ರೀತಿಯ ತಾಂತ್ರಿಕತೆ ಬಳಸಿ ಉತ್ಪತ್ತಿ ಮಾಡುವಂತದಲ್ಲ ಇನ್ನೊಬ್ಬರ ದೇಹದಿಂದಲೇ ತೆಗೆದು ಭರಿಸುವಂತದ್ದಾಗಿದೆ. ರಕ್ತದಾನ ಇನ್ನೊಬ್ಬರ ಜೀವ ಉಳಿಸುವ ಉದಾತ್ತ ಕಾರ್ಯವಾಗಿದೆ, ಇನ್ನೊಬ್ಬರ ಜೀವವನ್ನು ಉಳಿಸಿದ ತೃಪ್ತಿಭಾವವು ರಕ್ತದಾನಿಯ ಮೇಲೆ ಬಹಳಷ್ಟು ಸಕಾರಾತ್ಮಕ ಪ್ರಭಾವ ಬೀರುತ್ತದೆ ಆರೋಗ್ಯವನ್ನು ಸದೃಡಗೊಳಿಸುತ್ತದೆ ಎಂದು ಹೇಳಿದರು.

ವಿವೇಕ ಬ್ರಿಗೇಡ್‌ನ ವಿನೂತ ಕಲ್ಲೂರ, ಗ್ರಾಪಂ ಸದಸ್ಯ ರಾಜಶೇಖರ ಹುಲ್ಲೂರ, ವಿಜಯಪುರ ರಕ್ತನಿಧಿ ಕೇಂದ್ರದ ಡಾ. ಸುಮಾ ಮಮದಾಪುರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ ಲಮಾಣಿ, ಹೂವಿನಹಿಪ್ಪರಗಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ಕಲ್ಪನಾ ಬಸವರಾಜ, (Blood Donation Camp in Ivanagi) ಮುಖಂಡರಾದ ರವಿಗೌಡ ಚಿಕ್ಕೊಂಡ, ಶಿವಾನಂದ ತೋಳನೂರ, ರಾಜುಗೌಡ ಪಾಟೀಲ, ಮುತ್ತು ಹಾಲಿಹಾಳ, ಶಿವಾಜಿ ಧನವಡೆ, ಕಾಂತು ಹಿರೇಕುರುಬರ, ಬಸಪ್ಪ ಕಲಬುರಗಿ, ಪಿಡಿಒ ಸಂಜೀವ ಶೇಗುಣಸಿ ಸೇರಿದಂತೆ ಇತರರು ಇದ್ದರು.

ಇದೇ ಸಂದರ್ಭದಲ್ಲಿ ರಾಜಶೇಖರ ಹುಲ್ಲೂರ, ಪತ್ರಕರ್ತ ನಾಗೇಶ ನಾಗೂರ, ರಾಜುಗೌಡ ಪಾಟೀಲ, ಮುತ್ತು ಹಾಲಿಹಾಳ ಸೇರಿ 31 ಜನ ಯುವಕ ಯುವತಿಯರು ರಕ್ತದಾನ ಮಾಡಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!