- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

ವಿಜಯಪುರ : ಜಿಲ್ಲೆಯ ಸಿಂದಗಿ ಉಪ ಚುನಾವಣೆ ಘೋಷಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಮಾಜಿ ಕೇಂದ್ರ ಸಚಿವ, ಹಾಲಿ  ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ, ವೇದಿಕೆ ಮೇಲೆಯೇ ರಮೇಶ ಜಿಗಜಿಣಗಿ ಅಸಮಧಾನ ಹೊರಹಾಕಿದ್ದಾರೆ. ಪಕ್ಷ ನನ್ನನ್ನ ಯಾಕೆ ಬಳಸಿಕೊಳ್ತಿಲ್ಲ, ರಾಜ್ಯಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ನನ್ನ ಅಭಿಪ್ರಾಯ ಪಕ್ಷದ ವರಿಷ್ಠರಿಗೆ ತಿಳಿಸಲೇ ಬೇಕು. ನೀನೊಬ್ಬ ಲೋಕಸಭಾ ಸದಸ್ಯನಾಗಿ ಜವಾಬ್ದಾರಿ ಕೆಲಸ ಮಾಡು ಅಂತಾ ಯಾವೊಬ್ಬ ನಾಯಕನೂ ನನಗ ಅಂದಿಲ್ಲ. ನಾನು ಪಕ್ಷಕ್ಕೆ ಬಂದು ಇಷ್ಟು ವರ್ಷವಾದರೂ ಯಾವ ನಾಯಕನೂ ನನಗೆ ಜವಾಬ್ದಾರಿ ನೀಡಿಲ್ಲ, ಆದರೂ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೀನೆ. ನಾನು ಪಕ್ಷವನ್ನ ಕೆಳಗಿಟ್ಟು ಎಂದು ಮಾತಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನನಗು ವಯಸ್ಸಾಗಿದೆ. ನಾನು ಕಾರ್ಯಕರ್ತರ ಜೊತೆಗೆ ಕಾರ್ಯಕರ್ತನಾಗಿ ಇರ್ತಿನಿ ಎಂದು ಜಿಗಜಿಣಗಿ ನೊಂದುಕೊಂಡು ಮಾತನಾಡಿದರು.

ನಾನು ಬೇಡವಾಗಿದ್ದರೇ ನೇರವಾಗಿ ಬೇಡ ಅಂತಾ ಹೇಳಲಿ ಎಂಬ ಸಂಸದ ಜಿಗಜಿಣಗಿ ಹೇಳಿಕೆಯಿಂದ ಬಿಜೆಪಿ ನಾಯಕರಲ್ಲಿ ಗೊಂದಲ ಉಂಟುಮಾಡಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!