- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಟಿಕೇಟ್ ಘೋಷಣೆ ವಿಳಂಬಕ್ಕೆ ಸ್ಪಷ್ಟನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್

ಟಿಕೇಟ್ ಘೋಷಣೆ ವಿಳಂಬಕ್ಕೆ ಸ್ಪಷ್ಟನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್

ವಿಜಯಪುರ : ಸಿಂದಗಿ ಉಪ ಚುನಾವಣೆ ಹಿನ್ನೆಲೆ, ಬಿಜೆಪಿ ಟಿಕೇಟ್ ಘೋಷಣೆ ವಿಳಂಬ ವಿಚಾರವಾಗಿ, ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಷ್ಟ್ರೀಯ ನಾಯಕರು ಅಭ್ಯರ್ಥಿಗಳ ಘೋಷಣೆ ಮಾಡ್ತಾರೆ. ಹೆಸರುಗಳನ್ನ ಕೇಂದ್ರಕ್ಕೆ ಕಳಿಸ್ತೀವಿ, ಅವರು ಘೋಷಣೆ ಮಾಡ್ತಾರೆ. ಈಗಾಗಲೇ‌ ಕೋರ್ ಕಮೀಟಿ ಮೂಲಕ ಹೆಸರುಗಳನ್ನ ಕಳಿಸಿದ್ದೀವಿ. ಹೆಸರು ಘೋಷಣೆ ವಿಳಂಬದಿಂದ ಯಾವುದೇ ಸಮಸ್ಯೆ ಇಲ್ಲ ಸ್ಪಷ್ಟನೆ ನೀಓಡಿದರು.

ಚುನಾವಣೆ ಘೋಷಣೆಯಾದ ಮೇಲೆ ನಮ್ಮ ತಯಾರಿ ಅಲ್ಲ. ಘೋಷಣೆಗು ಮೊದಲೇ ನಮ್ಮ ತಯಾರಿ ಇದೆ. ಈಗಾಗಲೇ ಚುನಾವಣಾ ಕೆಲಸಗಳು ಆರಂಭವಾಗಿವೆ. ನಾನು ಕೂಡ ಸಿಂದಗಿಯಲ್ಲಿ ಸಭೆ ಮಾಡುವೆ. ನಮ್ಮ ಚುನಾವಣಾ ಕಾರ್ಯ ಆರಂಭವಾಗಿವೆ, ಅಭ್ಯರ್ಥಿ ಘೋಷಣೆಗು ನಮಗು ಸಂಬಂಧ ಇಲ್ಲ ಎಂದು ನಳಿನಕುಮಾರ್ ಕಟೀಲ್ ಹೇಳಿದರು.

ಹಾನಗಲ್ ಉಸ್ತುವಾರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲಿಯೂ ಉಸ್ತುವಾರಿ ಬದಲಾವಣೆ ಮಾಡಿಲ್ಲ. ಇನ್ನು ನಾಲ್ಕು ಜನರನ್ನ ಸೇರಿಸೋದಿದೆ. ಇನ್ನು ಚುನಾವಣಾ ನಿರ್ವಹಣಾ ಸಮಿತಿ ಮಾಡಬೇಕು, ಸ್ಟಾರ್ ಕ್ಯಾಂಪೆನೇರ್ ಪಟ್ಟಿ ಮಾಡಬೇಕು. ವ್ಯವಸ್ಥೆಯ ಭಾಗವಾಗಿ ಒಂದೊಂದೆ ಪಟ್ಟಿ ಬಿಡುಗಡೆ ಮಾಡ್ತಿದ್ದೇವೆ ಎಂದರು.

ರಾಜ್ಯ ಕಾರ್ಯಕಾರಿಣಿಗೆ ಸಂಸದ ಜಿಗಜಿಣಗಿ ಗೈರು ವಿಚಾರವಾಗಿ ಉತ್ತರಿಸಿದ ಕಟೀಲ್, ಅವರ ಜೊತೆಗೆ ಮಾತುಕತೆಯಾಗಿದೆ. ಇಂದು ನಮಗೆ ಹೇಳಿಯೇ ಹೊರಗಡೆ ಹೋಗಿದ್ದಾರೆ. ಅವರು ನಮಗೆ ಹಿರಿಯರು, ಅನುಭವಿಗಳು, ಎಲ್ಲ ಕಿರಿಯರಿಗು ಗುರುಸ್ಥಾನದಲ್ಲಿ ಇರುವವರು, ಹಿರಿಯ ಸಂಸದ ಜಿಗಜಿಣಗಿಯವರ ಕಡೆಗಣನೆ ಇಲ್ಲ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!