- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ್ರಯಾಸದಿಂದ ಬಿಜೆಪಿ ಅಭ್ಯರ್ಥಿ ಗೆಲುವು

ಪ್ರಯಾಸದಿಂದ ಬಿಜೆಪಿ ಅಭ್ಯರ್ಥಿ ಗೆಲುವು

ವಿಜಯಪುರ: ತೀವ್ರ ಹಣಾ-ಹಣಿಗೆ ಬಿದ್ದಿದ್ದ ವಿಜಯಪುರ-ಬಾಗಲಕೋಟ್ ದ್ವಿಸದಸ್ಯ ಸ್ಥಾನದ ವಿಧಾನ ಪರಿಷತ್ ಚುನಾವಣೆಯ ಎರಡನೇಯ ಪ್ರಾಶಸ್ತ್ಯದ ಮತದಾನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಹೆಚ್. ಪೂಜಾರಿ ಅವರು ಕೊನೆಗೆ ಪ್ರಯಾಸದಿಂದ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟು 7353 ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸುನೀಲಗೌಡ ಪಾಟೀಲ ಮೊದಲ ಪ್ರಾಶಸ್ತ್ಯದಲ್ಲಿಯೇ 3178  ಮತಗಳನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದ್ದರು.

https://gadinaadakranti.com/congress-candidate-sunila-gowda-patil-win/

ಇನ್ನೂ ಎರಡನೇಯ ಪ್ರಾಶಸ್ತ್ಯದಮತ ಎಣಿಕೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೇ ಭಾರೀ ಪೈಪೋಟಿ ನಡೆದಿದ್ದು, ಕೊನೆಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಹೆಚ್. ಪೂಜಾರಿ ಅವರು ಗೆಲುವು ಪಡೆದುಕೊಳ್ಳುವ ಮೂಲಕ ಬಿಜೆಪಿಯ ಪ್ರತಿಷ್ಠೆಯನ್ನು ಕಾಪಾಡಿದಂತಾಗಿದೆ.

ಗೆಲುವಿನ ಅಭ್ಯರ್ಥಿಗಳ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ. ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಿಸುತ್ತಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!