- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜನನ ಮರಣ ಕಾಯ್ದೆ.  ವಕೀಲರ ಸಂಘದದಿಂದ ಪ್ರತಿಭಟನೆ

ಜನನ ಮರಣ ಕಾಯ್ದೆ.  ವಕೀಲರ ಸಂಘದದಿಂದ ಪ್ರತಿಭಟನೆ

ಬಸವನಬಾಗೇವಾಡಿ: ದಿ.ನ್ಯಾಯವಾದಿಗಳ ಸಂಘದ (Bar Association) ನೇತೃತ್ವದಲ್ಲಿ ಇದೇ ಜು.18ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ ಜನನ ಮರಣ ನೊಂದಣಿ ಕಾಯ್ದೆ (Birth and Death Act) 1969ಕ್ಕೆ ಸಂಬಂಧಿಸಿದಂತೆ ದಿವಾಣಿ ನ್ಯಾಯಾಲಯದ ಅಧಿಕಾರವನ್ನು ಉಪವಿಭಾಗ ಅಧಿಕಾರಿಗಳಿಗೆ ನೀಡಿರುವುದನ್ನು ವಿರೋಧಿಸಿ (Basavana bagewadi) ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿ ತಹಶೀಲ್ದಾರ ವ್ಹಿ.ಜಿ.ಕಡಕೋಳ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಕೀಲ ಎನ್.ಎಸ್.ಪಾಟೀಲ, ಎಚ್.ಎಸ್.ಗುರಡ್ಡಿ, ರಾಚಯ್ಯ ಗಣಕುಮಾರ, ರವಿ ರಾಠೋಡ ಮಾತನಾಡಿ, ಜನನ ಮರಣ ನೊಂದಣಿ ಕಾಯ್ದೆ ಉಪವಿಭಾಗ ಕಚೇರಿಗೆ ವರ್ಗಾಯಿಸಿರುವ ರಾಜ್ಯ ಸರ್ಕಾರದ ಆದೇಶ ಬಡಜನರ ಮೂಗಿಗೆ ಬಿಸಿತುಪ್ಪ ಒರೆಸಿದಂತಾಗಿದೆ. ಸಾರ್ವಜನಿಕರ ನಜೂರ ಚೂಕಿಯಿಂದ ಜನನ – ಮರಣ ನೊಂದಣಿ ಮಾಡದೇ ಇರಬಹುದು ಇದಕ್ಕೆ ತಾಲೂಕಿನಲ್ಲಿರುವ ನ್ಯಾಯಾಲಯಗಳಿಗೆ ಬಂದು ತಮ್ಮ ನ್ಯಾಯವನ್ನು ಪಡೆದುಕೊಳ್ಳುತ್ತಾರೆ. ಇದನ್ನು ರಾಜ್ಯ ಸರ್ಕಾರ ಜು.18ರಂದು ಜನನ ಮರಣ ಕಾಯ್ದೆಯನ್ನು ನ್ಯಾಯಾಲಯದ ಅಧಿಕಾರವನ್ನು ಉಪವಿಭಾಗ ಅಧಿಕಾರಿಗಳಿಗೆ ನೀಡಿರುವುದು ಸರಿಯಾದ ಕ್ರಮವಲ್ಲ ಇದ್ದರಿಂದ ಬಡಜನತೆಗೆ ತೊಂದರೆವುಂಟಾಗುತ್ತದೆ ಎಂದು ಆಗ್ರಹಿಸಿದರು.

ಉಪವಿಭಾಗ ಕಚೇರಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇರುವುದಿಲ್ಲ. ಜನರು ಜನನ ಮರಣ ಪ್ರಮಾಣ ಪತ್ರ (Birth and Death Act) ಪಡೆಯಲು ನೂರಾರು ಕಿಲೋ ಮೀಟರ್ ದೂರ ಅಲೆದಾಡುವ ಪರಿಸ್ಥಿತಿವುಂಟಾಗುತ್ತದೆ ಕೂಡಲೇ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಎಸ್.ಗೊಳಸಂಗಿ, ಜಿ.ಬಿ.ಪವಾರ, ಸುನೀಲ ರಾಠೋಡ, ಸಮೀರ ಕೊರಬು, ಬಿ.ಎಸ್.ವಾಲೀಕಾರ, ಎ.ಡಿ.ರಾಠೋಡ, ಕೆ.ಎಸ್.ಚವ್ಹಾಣ, ಎಸ್.ಎಸ್.ಹೆಗಡ್ಯಾಳ, ಎಸ್.ಜಿ.ಚವ್ಹಾಣ, ಪ್ರಕಾಶ ಸಲಗರ, ಎಸ್.ಎಂ.ಮಠಪತಿ, ಶಿವಾನಂದ ಒಣರೊಟ್ಟಿ, ಚನ್ನು ಹಡಪದ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!