- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅದ್ಧೂರಿಯಾಗಿ ಜರುಗಲಿದೆ ಶ್ರೀ ಬಸವೇಶ್ವರ ಜಾತ್ರೆ

ಅದ್ಧೂರಿಯಾಗಿ ಜರುಗಲಿದೆ ಶ್ರೀ ಬಸವೇಶ್ವರ ಜಾತ್ರೆ

ಬಸವನಬಾಗೇವಾಡಿ: ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನದಿಂದ (Basavana Bagewadi) ವಿಶ್ವಗುರು ಬಸವಣ್ಣನವರ ಜಾತ್ರೆಯು (Basaveshwara Jatre) ಅದ್ದೂರಿಯಾಗಿ ನಡೆಯದೆ ಬಸವ ಭಕ್ತರಿಗೆ ನಿರಾಶೆಯಾಗಿತ್ತು ಈ ವರ್ಷ ಅತಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಬಸವೇಶ್ವರ ಜಾತ್ರಾ ಸಮಿತಿಯ ನೂತನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ (Iranna Pattanashetti)  ಹೇಳಿದರು.

 ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಈ ವರ್ಷದ ಜಾತ್ರಾ ಉತ್ಸವ ಕಮೀಟಿ ರಚನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಸವೇಶ್ವರ ಜಾತ್ರೆಗೆ ನಾಡಿನಾದ್ಯಂತ ಇರುವ ಬಸವಭಕ್ತರು ಪ್ರತಿ ವರ್ಷ ಈ ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗಬೇಕು ಕಳೆದ ಎರಡು ವರ್ಷಗಳಿಂದ ಜಾತ್ರೆಯು ನಡೆಯದೆ ಬಹಳ ಜನರಿಗೆ ನಿರಾಶೆಯಾಗಿದೆ. ಈ ನಿಟ್ಟಿನಲ್ಲಿ ಈ ವರ್ಷ ಜಾತ್ರೆಯನ್ನು ಮೂರು ದಿನದ ಬದಲಾಗಿ ಐದು ದಿನಗಳವರೆಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.

ಈ ವರ್ಷದ ಶ್ರಾವಣ ಮಾಸದ ಪ್ರವಚನವನ್ನು ಬೈಲೂರು ಮುಂಡರಗಿಯ ನಿಷ್ಕಲ್ಮಂಟಪದ ನಿಜಗುಣಾನಂದ ಮಹಾಸ್ವಾಮೀಜಿಯವರು ಒಂದು ತಿಂಗಳ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಡುವರು. ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ ಕುಸ್ತಿ ಗ್ರಾಮೀಣ ಕಲಿಗಳಾದ ಭಾರ ಎತ್ತುವದು ಸೇರಿದಂತೆ ನಾಡಿನ ವಿವಿಧ ಕಲಾತಂಡಗಳನ್ನು ಅಹ್ವಾನ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ (Basaveshwara Jatre) ಜಾತ್ರಾ ಸಮಿತಿಯ ಸಂಚಾಲಕರಾಗಿ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಉಪಾಧ್ಯಕ್ಷರಾಗಿ ಸಂಗಮೇಶ ವಾಡೇದ, ಮೀರಾಸಾಬ ಕೋರಬು ಯಮನೂರಿ ಬಿದರಕುಂದಿ, ಪರಶುರಾಮ ಜಮಖಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಅಳ್ಳಗಿ, ಖಜಾಂಚಿಯಾಗಿ ರವಿಗೌಡ ಚಿಕ್ಕೊಂಡ ಅವರನ್ನು ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಆಯುಕ್ತರಾದ ಬಸಪ್ಪ ಪೂಜಾರಿ ಆಯ್ಕೆ ಮಾಡಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಗೊಳಸಂಗಿ, ಬಸಣ್ಣ ದೇಸಾಯಿ ಕಲ್ಲೂರ, ಸಂಗಮೇಶ ಓಲೇಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸುಭಾಸ ಚಿಕ್ಕೊಂಡ, ಯಮನಪ್ಪ ನಾಯ್ಕೋಡಿ, ಬಸವರಾಜ ಹಾರಿವಾಳ, ಶಂಕರಗೌಡ ಚಿಕ್ಕೊಂಡ, ಅನೀಲ ಅಗರವಾಲ, ಸಂಕನಗೌಡ ಪಾಟೀಲ, ಎಸ್.ಆರ್ ಗೊಳಸಂಗಿ, ನಿಂಗಪ್ಪ ಅವಟಿ, ಬಸಗೊಂಡಪ್ಪ ಹಾದಿಮನಿ, ಬಸವರಾಜ ಕೋಟಿ, ವಿಶ್ವನಾಥ ಹಾರಿವಾಳ, ಸುನೀಲಗೌಡ ಚಿಕ್ಕೊಂಡ, ರಾಷ್ಟ್ರೀಯ ಬಸವ ಬಳಗ ತಾಲೂಕಾಧ್ಯಕ್ಷ ವಿಶ್ವನಾಥ ಹಿರೇಮಠ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!