- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವನಾಡಿನ ಪು.ಸ. ಉಪ ಚುನಾವಣೆ : ಸೋತ ಕೈ, ನಗೆ ಬೀರಿದ ಕಮಲ ಬೆಂಬಲಿಗ

ಬಸವನಾಡಿನ ಪು.ಸ. ಉಪ ಚುನಾವಣೆ : ಸೋತ ಕೈ, ನಗೆ ಬೀರಿದ ಕಮಲ ಬೆಂಬಲಿಗ

ಬಸವನಬಾಗೇವಾಡಿ : ಜಿದ್ದಾ ಜಿದ್ದಿನ ಕಣವಾಗಿ ಪರಿಣಮಿಸಿದ್ದ ಸ್ಥಳೀಯ ಪುರಸಭೆ ಉಪ ಚುನಾವಣೆಯಲ್ಲಿ ಕೈ ನಾಯಕರುಗಳಿಗೆ ಭಾರಿ ಹಿನ್ನಡೆಯಾಗಿದ್ದು, ಕಮಲ ಬೆಂಬಲಿತ ಅಭ್ಯರ್ಥಿ ವಿಜಯಶಾಲಿಯಾಗುವ ಮೂಲಕ ನಗೆ ಬೀರಿದ್ದಾನೆ.

ಪಟ್ಟಣದ ವಾರ್ಡ್ ಸಂಖ್ಯೆ 21ರ ರಾಜು ಭೂತನಾಳ ರವರ ಅಕಾಲಿಕ ನಿಧನದ ಹಿನ್ನೆಲೆ, ಉಪಚುನಾವಣೆ ನಡೆದಿದ್ದು, ಇಂದು ಸೋಮವಾರ ಮುಂಜಾನೆ ಮತ ಎಣಿಕೆ ಕಾರ್ಯ ಜರುಗಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ವಿಜಯಕುಮಾರ ನೀಲು ನಾಯಕ ಅವರು 137 ಮತಗಳ ಅಂತರದಿಂದ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಹಳ್ಳಿಯವರನ್ನು ಸೋಲಿಸಿದ್ದಾರೆ.

ಕೈ ನಾಯಕ ಶರಣಪ್ಪ ಹಳ್ಳಿಯವರು ಒಟ್ಟು 358 ಮತಗಳು ಪಡೆದರೆ, ವಿಜಯಕುಮಾರ ನೀಲು ನಾಯಕ ಒಟ್ಟು 495 ಮತಗಳನ್ನು ಪಡೆದಿದ್ದಾರೆ, ಇನ್ನೂ ನೋಟಾಗೆ 12 ಮತಗಳು ಬಂದಿವೆ. ಒಟ್ಟು 137 ಮತಗಳ ಅಂತರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನೂ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಪಕ್ಷದ ಶಾಸಕ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕೈ ಅಭ್ಯರ್ಥಿಯ ಪರವಾಗಿ ಶಾಸಕರ ಪುತ್ರಿ ಸೇರಿದಂತೆ ಸ್ಥಳೀಯ ನಾಯಕರುಗಳು ಕೂಡಾ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಬಿಜೆಪಿ ನಾಯಕರುಗಳು ಸೈಲೆಂಟಾಗಿಯೇ ಮತ ಸೆಳೆದು ಇಂದು ಗೆಲುವಿನ ಸಂಭ್ರಮ ತಮ್ಮದಾಗಿಸಿಕೊಂಡು ಕೈ ನಾಯಕರುಗಳಿಗೆ ಶಾಕ್ ನೀಡಿದ್ದಾರೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!