- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವಪ್ರಿಯ ಜ್ಯೋತಿ ಯಾತ್ರೆಗೆ ಆದ್ದೂರಿ ಸ್ವಾಗತ

ಬಸವಪ್ರಿಯ ಜ್ಯೋತಿ ಯಾತ್ರೆಗೆ ಆದ್ದೂರಿ ಸ್ವಾಗತ

ಶರಣ ಹಡಪದ ಅಪ್ಪಣ್ಣ (Hadapada Appanna),  ವಿಶ್ವಗುರು ಬಸವಣ್ಣ (vishwaguru basavanna) ಸೇರಿದಂತೆ ಬಸವಾದಿ ಶರಣರ ವಚನಕಟ್ಟು ಅಡ್ಡಪಲ್ಲಕ್ಕಿ ಜ್ಯೋತಿ ಯಾತ್ರೆಯನ್ನು ಬಸವನಬಾಗೇವಾಡಿ (basavanabagewadi) ಪಟ್ಟಣದಲ್ಲಿ ಸ್ವಾಗತಿಸಲಾಯಿತು.

ಬಸವನಬಾಗೇವಾಡಿ: ಸುಕ್ಷೇತ್ರ ತಂಗಡಗಿ ಹಾಗೂ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಶಿವಶರಣ ಹಡಪದ ಅಪ್ಪಣ್ಣ, ವಿಶ್ವಗುರು ಬಸವಣ್ಣನವರ ಧರ್ಮಪತ್ನಿ ಶರಣೆ ನೀಲಮ್ಮ ತಾಯಿಯವರ ಹಾಗೂ ಅಸಂಖ್ಯಾತ ಬಸವಾದಿ ಶಿವಶರಣರ ವಚನಕಟ್ಟು ಅಡ್ಡಪಲ್ಲಕ್ಕಿ ಹಾಗೂ ಶಿವಶರಣ ಬಸವಪ್ರಿಯ ಜ್ಯೋತಿ ಯಾತ್ರೆಯನ್ನು ಅಂಬೇಡ್ಕರ ವೃತ್ತದಲ್ಲಿ ಆದ್ದೂರಿಯಾಗಿ ಸ್ವಾಗತಿಸಲಾಯಿತು.

More Read: ಕುರ್ಚಿ, ಬ್ಯಾನರ್ ಗಾಗಿ ಜಗಳ. ಕಾರ್ಯಕ್ರಮದಿಂದ ಹೊರನಡೆದ ಸಚಿವ ಸಿಸಿ ಪಾಟೀಲ

ಈ ಸಂದರ್ಭದಲ್ಲಿ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ರವಿಗೌಡ ಚಿಕ್ಕೊಂಡ, ಡಾ. ಯುವರಾಜ ಮಾದನಶೆಟ್ಟಿ ವಚನಕಟ್ಟು ಅಡ್ಡಪಲ್ಲಕ್ಕಿ ಹಾಗೂ ಜ್ಯೋತಿ ಯಾತ್ರೆಗೆ ಹೂಮಾಲೆ ಹಾಕಿ, ಪೂಜೆಗೈದರು ಸುಮಂಗಲೇಯರು ಅರತಿ ಬೆಳಗಿ ಸ್ವಾಗತಿಸಿದರು.

ಗಣಪತಿ ವೃತ್ತದಲ್ಲಿ ಸಭೆಗೈದು ಸಭೆಯಲ್ಲಿ ಸಂಗನಗೌಡ ಚಿಕ್ಕೊಂಡ, ಶಸಾಪ ತಾಲೂಕಾಧ್ಯಕ್ಷ ವೀರಣ್ಣ ಮರ್ತೂರ, ವಿವೇಕಾನಂದ ಕಲ್ಯಾಣಶೆಟ್ಟಿ, ಎಚ್.ಎಸ್.ಬಿರಾದಾರ, ಡಾ.ಮಹಾಂತೇಶ ಮಡಿಕೇಶ್ವರ, ಚುಸಾಪ ತಾಲೂಕಾಧ್ಯಕ್ಷ ಪ್ರಭಾಕರ ಖೇಡದ, ಮಾತನಾಡಿ ಶರಣರ ಹಾಕಿಕೊಟ್ಟ ಮಾರ್ಗದಲ್ಲಿ ನಡೆದುಕೊಂಡು ಸುಂದರ ಜೀವನ ನಡೆಸಬೇಕು, ಮಕ್ಕಳಿಗೆ ಶರಣರ ವಚನಗಳನ್ನು ಕಲಿಸಿಕೊಂಡುವ ನಿಟ್ಟಿನಲ್ಲಿ ಕಾರ್ಯವಾಗಬೇಕು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕೆಂದು ಹೇಳಿದರು.

More Read: ಪ್ರಕಾಶ ಹುಕ್ಕೇರಿ ಗೆಲುವು. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಗಳಿಸಿ

ಈ ಸಂದರ್ಭದಲ್ಲಿ ತಂಗಡಗಿ ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಮಾತನಾಡಿ ಬಸವಾದಿ ಶರಣರು (basavanabagewadi) ಸತ್ಯ ಶುದ್ಧ ಕಾಯಕ ಮಾಡಿ ಜೀವನ ಸಾಗಿಸಿದರು, ಅಂತಹ ಮಹಾಶರಣರ ವಚನಗಳಿಗೆ ನಾವು ಮಹತ್ವ ನೀಡಿ ಸ್ವಾರ್ಥಕ ಬದುಕನ್ನು ಸಾಗಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರುದ್ರಪ್ಪ ಹಡಪದ, ಅಶೋಕ ಬಾಗೇವಾಡಿ ಸೇರಿದಂತೆ ಇತರರು ಇದ್ದರು. ಗುರುಲಿಂಗ ಹಡಪದ ಸ್ವಾಗತಿಸಿ ನಿರೂಪಿಸಿದರು, ನಾಗೇಶ ನಾಗೂರ ವಂದಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!