- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪುರಸಭೆ ಅಧ್ಯಕ್ಷರಾಗಿ ರೇಖಾ ಬೆಕಿನಾಳ ಅವಿರೋಧ ಆಯ್ಕೆ

ಪುರಸಭೆ ಅಧ್ಯಕ್ಷರಾಗಿ ರೇಖಾ ಬೆಕಿನಾಳ ಅವಿರೋಧ ಆಯ್ಕೆ

ಬಸವನಬಾಗೇವಾಡಿ: (Basavanabagewadi Purasabhe) ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ (President) ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರೇಖಾ ಪರಶುರಾಮ ಬೆಕಿನಾಳ (Rekha Bekinal) ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆಗೆ ಗೊತ್ತುಪಡಿಸಿದ ಅಧಿಕಾರಿ ತಹಶೀಲ್ದಾರ ವ್ಹಿ.ಜಿ.ಕಡಕೋಳ ಅವರು ತಿಳಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪರಿಶಿಷ್ಠ ಜಾತಿ( ಮಹಿಳೆ)ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರೇಖಾ ಪರಶುರಾಮ ಬೆಕಿನಾಳ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

ಶಾಸಕರು, ಸಂಸದರು ಸೇರಿದಂತೆ 25 ಸದಸ್ಯ ಬಲದ ಪುರಸಭೆಯಲ್ಲಿ (Basavanabagewadi Purasabhe) 16 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಉಳಿದ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಅಧಿಕಾರಿ ತಿಳಿಸಿದರು. ಚುನಾವಣಾ ಸಹಾಯಕರಾಗಿ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಹಿರೇಮಠ, ವ್ಯವಸ್ಥಾಪಕ ಎ.ಬಿ.ಕಲಾದಗಿ, ಕಂದಾಯ ಇಲಾಖೆಯ ಬಸವರಾಜ ದಾನಿ ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ, ಮಾಜಿ ಅಧ್ಯಕ್ಷೆ ಅನ್ನಪೂರ್ಣ ಸಂಜೀವ ಕಲ್ಯಾಣಿ, ಹಂಗಾಮಿ ಅಧ್ಯಕ್ಷೆ ಲಕ್ಷ್ಮೀಬಾಯಿ ಬೆಲ್ಲದ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ಸದಸ್ಯರಾದ ಜಗದೇವಿ ಗುಂಡಳ್ಳಿ, ಪ್ರವೀಣಕುಮಾರ ಪೂಜಾರಿ, ನಜೀರಹ್ಮದ ಗಣಿ, ಅಬ್ದುಲರಹಿಮಾನ ಚೌದ್ರಿ, ಗೀತಾ ಸುಬ್ಬು ಬಾಗೇವಾಡಿ, ರಾಜು ಲಮಾಣಿ, ದೇವೇಂದ್ರ ಚವ್ಹಾಣ, ರೇಖಾ ಸೊನ್ನದ, ಫರಿಜಾನ ಚೌದ್ರಿ, ರವಿಕುಮಾರ ನಾಯ್ಕೋಡಿ, ಶೂಭಾಂಗೀಣಿ ಗಾಯಕವಾಡ ಉಪಸ್ಥಿತರಿದ್ದರು.

ಸಂಭ್ರಮಾಚರಣೆ: ಪುರಸಭೆ ಅಧ್ಯಕ್ಷರಾಗಿ ರೇಖಾ ಬೆಕಿನಾಳ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಘೋ಼ಷಣೆ ಆಗುತ್ತಿದ್ದಂತೆ ಅಲ್ಲಿ ನೆರದಿದ್ದ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಮಾಜಿಅಧ್ಯಕ್ಷ ಸಂಜೀವ ಕಲ್ಯಾಣಿ, ಬಸಣ್ಣ ದೇಸಾಯಿ, ಮುಖಂಡರಾದ ಶೇಖರ ಗೊಳಸಂಗಿ, ದಸ್ತಗೀರಸಾಬ ವಜ್ಜಲ, ಪರಸು ಬೆಕಿನಾಳ, ಅಶೋಕ ಚಲವಾದಿ, ಪರಶುರಾಮ ದಿಂಡವಾರ, ಪರಸುರಾಮ ಮ್ಯಾಗೇರಿ, ರಮೇಶ ಮ್ಯಾಗೇರಿ, ಮಹಾಂತೇಶ ಸಾಸಾಬಾಳ, ಯಮನಪ್ಪ ಮಡಿಕೇಶ್ವರ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!