- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಧರ್ಮಸ್ಥಳ ಸಂಸ್ಥೆಯಿಂದ ಕೆರೆ ಹೂಳೆತ್ತುವ ಕಾರ್ಯ

ಧರ್ಮಸ್ಥಳ ಸಂಸ್ಥೆಯಿಂದ ಕೆರೆ ಹೂಳೆತ್ತುವ ಕಾರ್ಯ

ಬಸವನಬಾಗೇವಾಡಿ (Basavana Bagewadi) : ತಾಲೂಕಿನ ಬಿಸನಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 7 ಲಕ್ಷ ರೂ,ಗಳ ವೆಚ್ಚದಲ್ಲಿ ಇಲ್ಲಿನ ಕೆರೆ ಹೂಳು ಎತ್ತುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ಮಂಜುನಾಥ. ಹೆಚ್. ಕೆ ಹೇಳಿದರು.

ಶ್ರೀ ಶರಣ ಬಸವೇಶ್ವರ ಕೆರೆ ಅಭಿವೃದ್ಧಿ ಸಮಿತಿ (Basavana Bagewadi) ನೇತೃತ್ವದಲ್ಲಿ ಹಾಗೂ ಗ್ರಾಮ ಪಂಚಾಯತಿ, ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಹೂಳು ಎತ್ತುವ ಕಾಮಗಾರಿಯನ್ನು ವಿಕ್ಷೇಣೆ ಮಾಡಿ ಮಾತನಾಡಿದ ಅವರು ಏ.18 ರಂದು ಕೆರೆ ಹೂಳು ಎತ್ತಲು ಆರಂಭಿಸಿದ್ದು 4 ಎಕರೆ ಕೆರೆ ಹೂಳು ಎತ್ತಲು 2ಜೆಸಿಬಿ, 16 ಟ್ರ್ಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತೀವೆ, 8 ಸಾವಿರ ಕ್ಕಿಂತ ಹೆಚ್ಚು ಟ್ರ್ಯಾಕ್ಟರ್‌ ಲೋಡ್ ಕೆರೆಯಿಂದ ಹೂಳು ಎತ್ತಿದ ಫಲವತ್ತಾದ ಮಣ್ಣನ್ನು ರೈತರು ತಮ್ಮ ಹೊಲಗಳಿಗೆ(ಜಮೀನು) ಹಾಕಿಸಿಕೊಳ್ಳುತ್ತಿದ್ದಾರೆ. ಸು.6 ಅಡಿ ಅಳದ ಮಣ್ಣನ್ನು ಜೆಸಿಬಿಗಳ ಸಹಾಯದೊಂದಿಗೆ ಹೂಳು ಎತ್ತಿ ಕೆರೆಯ ಮಣ್ಣನ್ನು ಹೊರ ಹಾಕಿದ್ದು ಇದ್ದರಿಂದ ಅಂತರಜಲ ಮಟ್ಟ ಹೆಚ್ಚಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಕಪ್ಪ ಚಿರಚಕಲ್ ಮಾತನಾಡಿ ಕೆರೆಯಲ್ಲಿನ ಮಣ್ಣನ್ನು ಹೂಳು ಎತ್ತುವುದರಿಂದ ಈ ಕೆರೆಯ ನೀರನ್ನು ಜನ-ಜಾನುವಾರುಗಳಿಗೆ ಕುಡಿಯಲಿಕ್ಕೆ ಹಾಗೂ ಅಕ್ಕಪಕ್ಕದ ಜಮೀನುಗಳ ರೈತರು ನೀರು ಕುಡಿಯಲು ಹಾಗೂ ಔಷಧಿ ಸಿಂಪರಣೆಗೆ ಉಪಯೋಗಿಸುತ್ತಾರೆ, ಈ ಕೆರೆಯಲ್ಲಿನ ನೀರು ಬೇಸಿಗೆ ದಿನದಲ್ಲಿ ತಪ್ಪಾಗಿರುತ್ತದೆ ಅಷ್ಟೇಲ್ಲದೆ ನೀರು ಕುಡಿಯಲು ರುಚಿಕರವಾಗಿರುವುದ್ದರಿಂದ ಈ ಕೆರೆ ನೀರನ್ನೆ ಗ್ರಾಮಸ್ಥರು ಉಪಯೋಗಿಸುತ್ತಾರೆ. ಕೆರೆ ಗಲಿಚ ಆಗದಂತೆ ನೋಡಿಕೊಳ್ಳುವ ಕೆರೆ ಕಾಯುವ ವ್ಯಕ್ತಿಗೆ 2 ಸ್ವಲಿಗೆ (ಶೇರ) ಜೋಳ ನೀಡುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ (Basavana Bagewadi) ರವಿಕುಮಾರ ಹಂಗರಗಿ ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!